ಕೊರೋನಾ ಭೀತಿ: ಸರ್ಕಾರದ ಅಧಿಕೃತ ಆದೇಶವಿಲ್ಲದಿದ್ದರೂ ಪಿಜಿ ಖಾಲಿ ಮಾಡುತ್ತಿರುವ ಮಾಲೀಕರು

ಬಿಬಿಎಂಪಿಯಿಂದ ಅಧಿಕೃತ ಆದೇಶ ಬಾರದಿದ್ದರೂ ಮಾಲೀಕರು ಪಿಜಿಗಳಿಂದ ವಿದ್ಯಾರ್ಥಿಗಳನ್ನು ಖಾಲಿ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿಯಿಂದ ಅಧಿಕೃತ ಆದೇಶ ಬಾರದಿದ್ದರೂ ಮಾಲೀಕರು ಪಿಜಿಗಳಿಂದ ವಿದ್ಯಾರ್ಥಿಗಳನ್ನು ಖಾಲಿ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ. 

ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿದ್ದರೆ, ಸುರಕ್ಷತಾ ಕ್ರಮವಾಗಿ ವಿದ್ಯಾರ್ಥಿಗಳಿ ಪಿಜಿ ತೊರೆದೆ ಮನೆಗಳಿಗೆ ಹೋಗುವುದು ಉತ್ತಮ ಎಂದು ಈ ಹಿಂಸೆ ಬಿಬಿಎಂಪಿ ಸಲಹೆ ನೀಡಿತ್ತು. 

ಆದರೆ, ಪಿಜಿ ಮಾಲೀಕರು ಮುಂಜಾಗ್ರತಾ ಕ್ರಮವಾಗಿ ಪಿಜಿಗಳಿಂದಲೇ ವಿದ್ಯಾರ್ಥಿಗಳನ್ನು ಖಾಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಕೆಲವೆಡೆ ವಿದ್ಯಾರ್ಥಿಗಳೇ ಸ್ವಯಂ ಪ್ರೇರಿತರಾಗಿ ಕೊಠಡಿಗಳನ್ನು ಖಾಲಿ ಮಾಡುತ್ತಿದ್ದಾರೆ. 

ಬಿಟಿಎಂ ಲೇಔಟ್ ನಲ್ಲಿ ಪಿಜಿಯೊಂದರಲ್ಲಿದ್ದ ವಿದ್ಯಾರ್ಥಿಯೊಬ್ಬರು ಮಾತನಾಡಿ, ಕಾಲೇಜು ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ನನ್ನ ಸ್ನೇಹಿತರು ಪಿಜಿ ಖಾಲಿ ಮಾಡುತ್ತಿದ್ದಾರೆ. ಪಿಜಿ ಮಾಲೀಕರು ಕೂಡ ಖಾಲಿ ಮಾಡುವಂತೆ ತಿಳಿಸುತ್ತಿದ್ದಾರೆ. ಆದರೆ, ಕೊರೋನಾ ವೈರಸ್ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಹೊರಗೆ ಹೋಗಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ. 

ಪಿಜಿ ಮಾಲೀಕರು ಬಿಬಿಎಂಪಿಯಿಂದ ಆದೇಶವಿದೆ ಎಂದು ಹೇಳುತ್ತಿದ್ದಾರೆ. ಇದೀಗ ನಾವು ಜಯನಗರದಲ್ಲಿರುವ ನನ್ನ ಸ್ನೇಹಿತನ ಮನೆಯಲ್ಲಿದ್ದೇವೆಂದು ತಿಳಿಸಿದ್ದಾರೆ. 

ಸನ್ ಶೈನ್ ಕಾಲೋಜಿನ ವೆಲ್ಫೇರ್ ಅಸೋಸಿಯೇಷನ್ ಸದಸ್ಯ ಸತೀಶ್ ಜಾಧವ್ ಎಂಬುವವರು ಮಾತನಾಡಿ, ಬಿಟಿಎ ಲೇಔಟ್ ಲ್ಲಿ ಸಾಕಷ್ಟು ಅನಧಿಕೃತ ಪಿಜಿಗಳಿವೆ. ಮೂರು-ನಾಲ್ಕು ದಿನಗಳ ಹಿಂದೆಯೇ ಪಿಜಿ ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂಬುದನ್ನು ಕೇಳಿದ್ದೇನೆ. ಆದರೆ, ಇದೀಗ ಮತ್ತಷ್ಟು ಹೆಚ್ಚಾಗಿದೆ ಎಂದಿದ್ದಾರೆ. 

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಬಿಎಂಪಿಯವರು, ಪಿಜಿ ಖಾಲಿ ಮಾಡಿಸಲು ನಾವು ಯಾವುದೇ ಆದೇಶ ನೀಡಿಲ್ಲ. ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಷ್ಟೇ ತಿಳಿಸಿದ್ದೇವೆ. ಯಾರಿಗೂ ಬಲವಂತದಿಂದ ಪಿಜಿ ಖಾಲಿ ಮಾಡಿಸಬಾರದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com