ಕೊರೋನಾ ಎಫೆಕ್ಟ್: ಜನರ ಗೃಹ ಬಂಧನ, ದೇಗುಲಗಳ ಬಂದ್'ನಿಂದ ಟೋಲ್ ಸಂಗ್ರಹದಲ್ಲಿ ಭಾರೀ ಇಳಿಕೆ

ಬೆಂಗಳೂರಿನ ಟೋಲ್ ಪ್ಲಾಜಾಗಳನ್ನು ನಡೆಸುತ್ತಿರುವ ಗುತ್ತಿಗೆದಾರರ ಮೇಲೂ ಕೊರೋನಾ ವೈರಸ್ ಭಾರೀ ಪರಿಣಾಮ ಬೀರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನ ಟೋಲ್ ಪ್ಲಾಜಾಗಳನ್ನು ನಡೆಸುತ್ತಿರುವ ಗುತ್ತಿಗೆದಾರರ ಮೇಲೂ ಕೊರೋನಾ ವೈರಸ್ ಭಾರೀ ಪರಿಣಾಮ ಬೀರಿದೆ. 

ಕೊರೋನಾ ವೈರಸ್ ಭೀತಿಯಿಂದಾಗಿ ಜನರು ಹೊರಗೆ ಬರದೆ ಗೃಹ ಬಂಧನ ವಿಧಿಸಿಕೊಂಡಿದ್ದು, ದೇಗುಲಗಳೂ ಕೂಡ ಬಂದ್ ಆದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಭಾರೀ ಇಳಿಕೆ ಕಂಡಿದೆ. ಇದರ ಪರಿಣಾಮ ಗುತ್ತಿಗೆದಾರರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಭಾರತದ ರಾಷ್ಟ್ರೀಯ ಹೆದ್ದಾರಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಈ ಬಾರಿ ಟೋಲ್ ಸಂಗ್ರಹದಲ್ಲಿ ಶೇ.20-30 ಇಳಿಕೆಯಾಗಿದೆ. ಪ್ರವಾಸಿ ತಾಣಗಲು ಹಾಗೂ ದೇಗುಲಗಳು ಕಳೆದ ಒಂದು ವಾರದಿಂದ ಬಂದ್ ಾದ ಹಿನ್ನೆಲೆಯಲ್ಲಿ ವ್ಯವಹಾರದ ಮೇಲೆ ಶೇ.50ರಷ್ಟು ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. 

ಲ್ಯಾಂಕೋದ ಹಿರಿಯ ನಿರ್ವಾಹಕ ಕೃಷ್ಣ ರಾವ್ ಮಾತನಾಡಿ, ಹೊಸಕೋಟೆ, ಮುಳಬಾಗಿಲು, ನೆಲಮಂಗಲ, ಬೇಲೂರಿನಲ್ಲಿ ನಡೆಯುತ್ತಿದ್ದ ವ್ಯವಹಾರದಲ್ಲಿ ಶೇ.15ರಷ್ಟು ಇಳಿಕೆಯಾಗಿದೆ. ಇದೀಗ ತಿರುಪತಿ ಸೇರಿದಂತೆ ಇತರೆ ದೇಗುಲಗಳೂ ಬಂದ್ ಆಗಿರುವ ಹಿನ್ನೆಲೆಯಲ್ಲಿ ವ್ಯವಹಾರಗಳ ಮೇಲೆ ಮತ್ತಷ್ಟು ಪರಿಣಾಮ ಬೀರಲಿದ್ದು, ಪರಿಸ್ಥಿತಿ ಗಂಭೀರವಾಗಲಿದೆ ಎಂದಿದ್ದಾರೆ. 

ಹೊಸಕೋಟೆ ಮೂಲಕ ತಿರುಪತಿಗೆ ಪ್ರತೀನಿತ್ಯ ಸಾಕಷ್ಟು ವಾಹನಗಳು ತೆರಳುತ್ತಿದ್ದವು. ಆಂಧ್ರಪ್ರದೇಶ ರಸ್ತೆ ಸಾರಿಗೆ ಮಂಡಳಿ ಕೂಡ ಎಲ್ಲಾ ಬಸ್ ಗಳ ಸಂಚಾರವನ್ನು ಬಂದ್ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳು ನಮ್ಮ ವ್ಯವಹಾರದ ಮೇಲೆ ಶೇ.40ರಿಂದ 50 ರಷ್ಟು ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com