ಜರ್ಮನ್ ಶೆಫರ್ಡ್ ನಾಯಿಯನ್ನು ದತ್ತು ನೀಡಲು ನಕಾರ: ಸ್ನೇಹಿತರೊಂದಿಗೆ ಸೇರಿ ಟೀ ಅಂಗಡಿ ಮಾಲೀಕನನ್ನು ಥಳಿಸಿದ ಮಹಿಳೆ

ಜರ್ಮನ್ ಶೆಫರ್ಡ್ ನಾಯಿಯನ್ನು ದತ್ತು ನೀಡಲು ನಿರಾಕರಿಸಿದ ಟೀ ಅಂಗಡಿ ಮಾಲೀಕನೊಬ್ಬನಿಗೆ ಮಹಿಳೆಯೊಬ್ಬರು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಥಳಿಸಿರುವ ಘಟನೆ ಬೆಳ್ಳಂದೂರಿನ ಇಬ್ಲೂರು ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜರ್ಮನ್ ಶೆಫರ್ಡ್ ನಾಯಿಯನ್ನು ದತ್ತು ನೀಡಲು ನಿರಾಕರಿಸಿದ ಟೀ ಅಂಗಡಿ ಮಾಲೀಕನೊಬ್ಬನಿಗೆ ಮಹಿಳೆಯೊಬ್ಬರು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಥಳಿಸಿರುವ ಘಟನೆ ಬೆಳ್ಳಂದೂರಿನ ಇಬ್ಲೂರು ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ. 

ದೇವರಬೀಸನಹಳ್ಳಿ ನಿವಾಸಿ ಶ್ರೀನಿವಾಸ್ ಎಂ ಥಳಿತಕ್ಕೊಳಗಾದ ವ್ಯಕ್ತಿಯಾಗಿದ್ದಾರೆ. ಟೀ ಅಂಗಡಿ ನಡೆಸುತ್ತಿರುವ ವ್ಯಕ್ತಿ ಗೆಳೆಯರೊಬ್ಬರು ನೀಡಿರುವ ಜರ್ಮನ್ ಶೆಫರ್ಟ್ ನಾಯಿಯನ್ನು ಸಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಬೀದಿ ನಾಯಿಯೊಂದೂ ಕೂಡ ಸೇರ್ಪಡೆಗೊಂಡಿದ್ದು, ಎರಡೂ ನಾಯಿಗಳನ್ನು ಸಾಕುತ್ತಿದ್ದಾರೆ. 

ಟೀ ಅಂಗಡಿಯ ಬಳಿಯಿರುವ ಅಪಾರ್ಟ್ಮೆಂಟ್ ಒಂದರಲ್ಲಿ  ಮಿನು ಸಿಂಗ್ ಎಂಬುವವರು ವಾಸವಿದ್ದು, ಶ್ರೀನಿವಾಸ್ ಅವರು ಸಾಕುತ್ತಿದ್ದ ನಾಯಿಯ ಮೇಲೆ ಆಕರ್ಷಿತರಾಗಿ, ದತ್ತು ತೆಗೆದುಕೊಳ್ಳಲು ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಶ್ರೀನಿವಾಸ್ ನಿರಾಕರಿಸಿದ್ದಾರೆ. ಇದಾದ ಬಳಿಕ ಕೋಪಗೊಂಡಿದ್ದ ಮಿನು ಸಿಂಗ್ ಅವರು ನಾಯಿಯನ್ನು ಶ್ರೀನಿವಾಸ್ ಅವರಿಗೆ ಕಾಣದಂತೆ ಕರೆದುಕೊಂಡು ಹೋಗಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಈ ವಿಚಾರ ತಿಳಿದ ಶ್ರೀನಿವಾಸ್ ಅಪಾರ್ಟ್ ಮೆಂಟ್ ಬಳಿ ಹೋಗಿ ನಾಯಿಯನ್ನು ಮರಳಿ ಕರೆತಂದಿದ್ದಾರೆ. 
ಬಳಿಕ ಮಿನು ಸಿಂಗ್ ಅವರು ತಮ್ಮ ನಾಲ್ವರು ಸ್ನೇಹಿತರೊಂದಿಗೆ ಸೇರಿಕೊಂಡು ಬಂದು ಶ್ರೀನಿವಾಸ್ ಅವರಿದೆ ಥಳಿಸಿದ್ದಾರೆ. 

ಅಲ್ಲದೆ, ಪ್ರಾಣಿ ಹಕ್ಕುಗಳ ಹೋರಾಟಗಾರರಿಗೆ ದೂರು ನೀಡಿ, ನಾಯಿಗೆ ಸೂಕ್ತ ರೀತಿಯಲ್ಲಿ ಆಹಾರ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ. 

ಪ್ರಕರಣ ಸಂಬಂಧ ಇದೀಗ ಪೊಲೀಸರು ಮಿನುಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com