ವೈರಸ್ ಇಲ್ಲದವರಿಗಷ್ಟೇ ರಾಜ್ಯ ಪ್ರವೇಶಕ್ಕೆ ಅವಕಾಶ: ತವರಿಗೆ ಮರಳುತ್ತಿರುವ ವಲಸಿಗರ ಕುರಿತು ಒಡಿಶಾ ಸರ್ಕಾರ

ರಾಜ್ಯ ಸರ್ಕಾರ ಹಾಗೂ ನೈಋತ್ಯ ರೈಲ್ವೇ ಸಹಯೋಗದಲ್ಲಿ ಲಾಕ್'ಡೌನ್ ನಿಂದ ರಾಜಧಾನಿಯಲ್ಲಿ ಸಿಲುಕಿಕೊಂಡಿದ್ದ ಹೊರರಾಜ್ಯದ ಸಾವಿರಾರು ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಈ ನಡುವಲ್ಲೇ ಒಡಿಶಾದ ನ್ಯಾಯಾಲಯದ ಆದೇಶ ಹೊರಡಿಸಿದ್ದು, ವೈರಸ್ ಇಲ್ಲವೆಂದು ಪ್ರಮಾಣಪತ್ರ ಸಲ್ಲಿಸಿದವರಿಗಷ್ಟೇ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ...
ವಲಸಿಗ ಕಾರ್ಮಿಕರು
ವಲಸಿಗ ಕಾರ್ಮಿಕರು

ಬೆಂಗಳೂರು: ವೈರಸ್ ಇಲ್ಲದವರು ರಾಜ್ಯ ಪ್ರವೇಶಿಸಬಹುದು ಎಂದು ಒಡಿಶಾ ರಾಜ್ಯ ಸರ್ಕಾರ ಶುಕ್ರವಾರ ಹೇಳಿದೆ. 

ರಾಜ್ಯ ಸರ್ಕಾರ ಹಾಗೂ ನೈಋತ್ಯ ರೈಲ್ವೇ ಸಹಯೋಗದಲ್ಲಿ ಲಾಕ್'ಡೌನ್ ನಿಂದ ರಾಜಧಾನಿಯಲ್ಲಿ ಸಿಲುಕಿಕೊಂಡಿದ್ದ ಹೊರರಾಜ್ಯದ ಸಾವಿರಾರು ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಈ ನಡುವಲ್ಲೇ ಒಡಿಶಾದ ನ್ಯಾಯಾಲಯದ ಆದೇಶ ಹೊರಡಿಸಿದ್ದು, ವೈರಸ್ ಇಲ್ಲವೆಂದು ಪ್ರಮಾಣಪತ್ರ ಸಲ್ಲಿಸಿದವರಿಗಷ್ಟೇ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ. 

ಪ್ರಸ್ತುತ ರಾಜ್ಯದಲ್ಲಿ 19,000 ವಲಸೆ ಕಾರ್ಮಿಕರಿದ್ದು, ಎಲ್ಲರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಮೇ.3 ರಂದು ಚಿಕ್ಕಬಾಣಾವರದಿಂದ ಭುವನೇಶ್ವರಕ್ಕೆ ಮೊದಲ ರೈಲು ಪ್ರಯಾಣ ಬೆಳೆಸಿದೆ. ನಿಲ್ದಾಣಕ್ಕೆ ಬರುವ ಎಲ್ಲಾ ಕಾರ್ಮಿಕರನ್ನು ಪರೀಕ್ಷೆಗೊಳಪಡಿಸಿ, ಪರೀಕ್ಷೆಯಲ್ಲಿ ವೈರಸ್ ಪತ್ತೆಯಾಗದವರನ್ನು ಮಾತ್ರ ರಾಜ್ಯದೊಳಗೆ ಪ್ರವೇಶಿಸಲು ಅನುಮತಿ ನೀಡಿ ಎಂದು ಒಳಿಶಾ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಲಕ್ಷಣ ಇಲ್ಲದವರನ್ನು ಕ್ವಾರಂಟೈನ್ ನಲ್ಲಿರಿಸಲು ಹಾಗೂ ಗಂಭೀರ ಪರಿಸ್ಥಿತಿಯಲ್ಲಿರುವವರ ಮೇಲೆ ಗಮನ ಹರಿಸಲು ಸೂಚಿಸಿದೆ ಎಂದು ತಿಳಿದುಬಂದಿದೆ. 

ಮೇ.3ರಿಂದ ನಗರದಿಂದ ಮೊದಲ ರೈಲು ಸಂಜೆ 4.25ಕ್ಕೆ ಚಿಕ್ಕಬಾಣಾವರದಿಂದ 1,200 ಮಂದಿ ಕಾರ್ಮಿಕರನ್ನು ಹೊತ್ತು ಉತ್ತರಪ್ರದೇಶದ ಲಖನೌಗೆ ತೆರಳಿದೆ. ಎರಡನೇ ರೈಲು ಸಂಜೆ 5.45ಕ್ಕೆ ಕೋಲಾರದ ಮಾಲೂರು ರೈಲು ನಿಲ್ದಾಣದಿಂದ 1,200 ಕಾರ್ಮಿಕರನ್ನು ಹಾಗೂ ಏಳು ಮಕ್ಕಳನ್ನು ಬಿಹಾರದ ದಾನಪುರಕ್ಕೆ ಕರೆದೊಯ್ದಿದೆ. 

ಸಂಜೆ 6.55ಕ್ಕೆ ಚಿಕ್ಕಬಾಣಾವರ ರೈಲು ನಿಲ್ದಾಣದಿಂದ ಉತ್ತರಪ್ರದೇಶದ ಲಖನೌಗೆ ಹೊರಟ 3ನೇ ರೈಲಿನಲ್ಲಿ 1,988 ಮಂದಿ ಕಾರ್ಮಿಕರು ಪ್ರಯಾಣ ಬೆಳೆಸಿದ್ದಾರೆ. ಮಾಲೂರಿನಿಂದ ಜಾರ್ಖಾಂಡ್'ನ ಹಟಿಯಾಗೆ ಮತ್ತೊಂದು ರೈತರು ತೆರಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com