ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆದಿದ್ದು, ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಿದೆ: ಕೊರೋನಾ ವಾರಿಯರ್ಸ್ ಗೆ ಅನಿಲ್ ಕುಂಬ್ಳೆ ಸೆಲ್ಯೂಟ್

ಮಾರಕ ಕೊರೋನಾ ವೈರಸ್ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಧನ್ಯವಾದ ಹೇಳಿದ್ದಾರೆ. 
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ

ಬೆಂಗಳೂರು: ಮಾರಕ ಕೊರೋನಾ ವೈರಸ್ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಧನ್ಯವಾದ ಹೇಳಿದ್ದಾರೆ. 

ಕೊರೋನಾ ಸೋಂಕಿಗೆ ತುತ್ತಾಗಿ ಜೀವ್ಮನರಣದ ನಡುವೆ ಇರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಭದ್ರತೆ ನೀಡುತ್ತಿರುವ ಪೊಲೀಸರಿಗೆ ಅನಿಲ್ ಕುಂಬ್ಳೆ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕುಂಬ್ಳೆ,  ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿರುವ ಕುಂಬ್ಳೆ, ಕೊರೋನಾ ವಿರುದ್ಧದ ಹೋರಾಟವನ್ನು ಟೆಸ್ಟ್ ಕ್ರಿಕೆಟ್‍ಗೆ ಹೋಲಿಸಿದ್ದು, ಜೊತೆಗೆ ನಾವು ಮೊದಲ ಇನ್ನಿಂಗ್ಸ್ ನಲ್ಲಿ ಲೀಡ್ ಪಡೆದಿದ್ದು, ಇದೇ ರೀತಿಯ  ಉತ್ತಮ ಹೋರಾಟದ ಮೂಲಕ ಪಂದ್ಯ ಗೆಲ್ಲಬೇಕು ಎಂದು ಹೇಳಿದ್ದಾರೆ. 

'ನನ್ನನ್ನು ಇದಕ್ಕೆ ನಾಮೀನೇಟ್ ಮಾಡಿದ ಸುಮಲತಾ ಮೇಡಂಗೆ ಧನ್ಯವಾದಗಳು. ಈ ಸಮಯದಲ್ಲಿ ನಾನು, ಕೊjaನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ, ಸ್ವಯಂ ಸೇವಕರಿಗೆ, ಪೊಲೀಸರು ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.  ನೀವು ಎಲ್ಲರೂ ಅದ್ಭುತವಾದ ಕೆಲಸ ಮಾಡುತ್ತಿದ್ದೀರಾ. ನಾವೆಲ್ಲ ಒಟ್ಟಿಗೆ ಸೇರಿ ಒಗಟ್ಟಿನಿಂದ ಈ ಸೋಂಕಿನ ವಿರುದ್ಧ ಹೋರಾಡಬೇಕಿದೆ. ಈ ಹೋರಾಟ ಟೆಸ್ಟ್ ಪಂದ್ಯದ ರೀತಿ, ಕ್ರಿಕೆಟ್ ಟೆಸ್ಟ್ ಮ್ಯಾಚ್ ಕೇವಲ ಐದು ದಿನ ಇರುತ್ತದೆ. ಆದರೆ ಕೊರೋನಾ ಬಹಳ ದಿನ ಇರುವಂತದ್ದು,  ಕ್ರಿಕೆಟ್‍ನಲ್ಲಿ ಎರಡು ಇನ್ನಿಂಗ್ಸ್ ಇದ್ದರೆ, ಇದರಲ್ಲಿ ಜಾಸ್ತಿ ಇರುತ್ತದೆ. ಆದರೆ ನಾವು ಮೊದಲ ಇನ್ನಿಂಗ್ಸ್ ನಲ್ಲಿ ಲೀಡ್ ಪಡೆದಿದ್ದೇವೆ. ಆದರೆ ಎರಡನೇ ಇನ್ನಿಂಗ್ಸ್ ಸ್ವಲ್ಪ ಕಠಿಣವಾಗಿ ಇರುತ್ತದೆ. ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ನಾವು ಪಣತೊಡಬೇಕು. ಸರ್ಕಾರ ನಿಯಮಗಳನ್ನು  ಪಾಲಿಸಬೇಕು. ಜೊತೆಗೆ ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಾವು ಹೀಗಿದ್ದಾಗ ಕೊರೋನಾ ಸೋಂಕಿಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಕೊರೋನಾ ವಾರಿಯರ್ಸ್ ನಮಗಾಗಿ ಅವರ ಕುಟುಂಬವನ್ನು ತ್ಯಾಗ ಮಾಡಿ ಬಹಳ ಅಪಾಯದಲ್ಲಿ ಕೆಲಸ ಮಾಡುತ್ತಿದ್ದಾರೆ.  ಅವರೆಲ್ಲರಿಗೂ ಧನ್ಯವಾದ ನಾವು ನಿಮ್ಮ ಜೊತೆ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡೋಣ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮೊದಲು ಟ್ವಿಟ್ಟರ್ ನಲ್ಲಿ ಕೊರೋನಾ ವಾರಿಯರ್ಸ್ ಗೆ ಧನ್ಯವಾದ ತಿಳಿಸಿದ್ದ ಸಮಲತಾ, ಈ ವಿಡಿಯೋದಲ್ಲಿ ಅನಿಲ್ ಕುಂಬ್ಳೆ, ದರ್ಶನ್, ಯಶ್ ಮತ್ತು ಅಥ್ಲೆಟ್ ಅಶ್ವಿನಿ ನಾಚಪ್ಪ ಅವರನ್ನು ನಾಮಿನೇಟ್ ಮಾಡಿದ್ದರು. ಈಗ ಇದಕ್ಕೆ ಅನಿಲ್ ಕುಂಬ್ಳೆ ಅವರು ಉತ್ತರ ನೀಡಿದ್ದು, ಇದಕ್ಕೆ  ಪ್ರತಿಕ್ರಿಯೆ ಕೊಟ್ಟಿರುವ ಸುಮಲತಾ ಅವರು ಥ್ಯಾಂಕ್ಯೂ ಅನಿಲ್ ಕುಂಬ್ಳೆ, ನೀವು ನಮ್ಮ ಕರ್ನಾಟಕದ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com