ಮಂಡ್ಯದ ವಿವಿಧೆಡೆ ಹೆಚ್ಚಿದ ಚಿರತೆ ದಾಳಿ; ಮಳವಳ್ಳಿ ಬಳಿ 2 ಮೇಕೆ ಬಲಿ, ಗ್ರಾಮದಲ್ಲಿ ಹೆಚ್ಚಿದ ಆತಂಕ!

ಜಿಲ್ಲೆಯ ವಿವಿಧೆಡೆ ಚಿರತೆಯ ದಾಳಿ ಪ್ರಕರಣ ಹೆಚ್ಚಾಗಿದ್ದು ಬುಧವಾರವೂ ಕೂಡ ಮಳವಳ್ಳಿಯಲ್ಲಿ ಚಿರತೆ ದಾಳಿಗೆ 2 ಮೇಕೆಗಳು ಬಲಿಯಾಗಿದೆ.
ನರಹಂತಕ ಚಿರತೆ
ನರಹಂತಕ ಚಿರತೆ
Updated on: 

ಮಂಡ್ಯ: ಜಿಲ್ಲೆಯ ವಿವಿಧೆಡೆ ಚಿರತೆಯ ದಾಳಿ ಪ್ರಕರಣ ಹೆಚ್ಚಾಗಿದ್ದು ಬುಧವಾರವೂ ಕೂಡ ಮಳವಳ್ಳಿಯಲ್ಲಿ ಚಿರತೆ ದಾಳಿಗೆ 2 ಮೇಕೆಗಳು ಬಲಿಯಾಗಿದೆ.

ಮಳವಳ್ಳಿ ತಾಲೂಕು ಹಲಗೂರು ಹೋಬಳಿಯ ದಳವಾಯಿಕೊಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವೀರಹಳ್ಳಿಯಲ್ಲಿ ಚಿರತೆ ದಾಳಿಗೆ ೨ ಮೇಕೆ ಬಲಿಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಕೆಂಪಶೆಟ್ಟಿ ಎಂಬುವರಿಗೆ ಸೇರಿದ ೨ ಮೇಕೆಗಳನ್ನು ಚಿರತೆ ದಾಳಿ ನಡೆಸಿ  ಕೊಂದು ಹಾಕಿದೆ.

ಎಂದಿನಂತೆ ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಹಸು,ದನ, ಹೆಮ್ಮೆ ಹಾಗೂ ಮೇಕೆಗಳನ್ನು ಕಟ್ಟಿ ಹಾಕಿದ್ದರು. ಬುಧವಾರ ತಡರಾತ್ರಿ ೧೨ ಗಂಟೆಯ ಸಮಯದಲ್ಲಿ ಚಿರತೆಯೊಂದು ದಾಳಿ ಮಾಡಿ ಸುಮಾರು ೨೦ ಸಾವಿರ ರೂ ಬೆಲೆಬಾಳುವ ಎರಡು ಮೇಕೆ ರಕ್ತವನ್ನು ಕುಡಿದು ತಿಂದುಹಾಕಿದೆ.

-ನಾಗಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com