ಖಾಸಗಿ ಶಾಲಾ ಸಿಬ್ಬಂದಿಗಳಿಗೂ ನೆರವು ನೀಡಿ: ಸರ್ಕಾರಕ್ಕೆ ಎಂಎಲ್ಸಿಗಳ ಆಗ್ರಹ

ಲಾಕ್'ಡೌನ್ ಬಳಿಕ ವೇತನ ಸಿಗದೆ ಖಾಸಗಿ ಶಾಲಾ ಸಿಬ್ಬಂದಿಗಳೂ ಕೂಡ ಸಂಕಷ್ಟ ಎದುರಿಸುತ್ತಿದ್ದು, ಅವರಿಗೂ ನೆರವು ನೀಡುವಂತೆ ವಿಧಾನ ಪರಿಷತ್ ಸದಸ್ಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಾಕ್'ಡೌನ್ ಬಳಿಕ ವೇತನ ಸಿಗದೆ ಖಾಸಗಿ ಶಾಲಾ ಸಿಬ್ಬಂದಿಗಳೂ ಕೂಡ ಸಂಕಷ್ಟ ಎದುರಿಸುತ್ತಿದ್ದು, ಅವರಿಗೂ ನೆರವು  ನೀಡುವಂತೆ ವಿಧಾನ ಪರಿಷತ್ ಸದಸ್ಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಅನುದಾನರಹಿದ ಪ್ರಾಥಮಿಕ, ಪ್ರೌಢಶಾಲೆಗಳು, ಪಿಯುಸಿ ಹಾಗೂ ಪದವಿ ಕಾಲೇಜುಗಳ ಎಲ್ಲಾ ಸಿಬ್ಬಂದಿಗಳೂ ಕೂಡ ಕಳೆದ ಮೂರು ತಿಂಗಳುಗಳಿಂದ ವೇತನ ಪಡೆದಿಲ್ಲ. ಅವರಿಗೂ ರೂ.25,000ರಷ್ಟು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ಅನುದಾನರಹಿತ ಶಾಲೆಗಳಿಗೆ ನೀಡಬೇಕಿರುವ ಆರ್'ಟಿಇ ಮರುಪಾವತಿಯನ್ನು ಶೀಘ್ರಗತಿಯಲ್ಲಿ ಬಿಡುಗಡೆ ಮಾಡಬೇಕು. ಸರ್ಕಾರಿ ಪ್ರಥಮಿಕ ಹಾಗೂ ಪ್ರೌಢಶಿಕ್ಷಣ ಶಾಲೆಗಳ ಗೌರವಾನ್ವಿತ ಶಿಕ್ಷಕರು, ಅತಿಥಿ ಉಪನ್ಯಾಸಕರು, ಪಿಯುಸಿ, ಪದವಿ ಕಾಲೇಜುಗಳ ಉಪನ್ಯಾಸಕರಿಗೂ ರೂ.25,000 ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com