ರಾಜ್ಯದಲ್ಲಿ ಇಂದು ಸಂಜೆ ಕೇವಲ 1 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 2,283!

ರಾಜ್ಯದಲ್ಲಿ ಇಂದು ಮಧ್ಯಾಹ್ನ ವೇಳೆಗೆ ಶತಕ ಸಿಡಿಸಿದ್ದ ಕೊರೋನಾ ಸಂಜೆ ವೇಳೆಗೆ ಕೇವಲ 1 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ, 2,283ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಇಂದು ಮಧ್ಯಾಹ್ನ ವೇಳೆಗೆ ಶತಕ ಸಿಡಿಸಿದ್ದ ಕೊರೋನಾ ಸಂಜೆ ವೇಳೆಗೆ ಕೇವಲ 1 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ, 2,283ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಬರೋಬ್ಬರಿ 100 ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಸಂಜೆ ಕೇವಲ 1 ಪ್ರಕರಣ ಪತ್ತೆಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2283ಕ್ಕೇರಿಕೆಯಾಗಿದೆ.

ಚಿತ್ರದುರ್ಗ 20, ಯಾದಗಿರಿ 14, ಹಾಸನ 13, ದಾವಣಗೆರೆ 11, ಬೆಳಗಾವಿ 11, ಬೀದರ್ 10, ವಿಜಯಪುರ 5, ದಕ್ಷಿಣ ಕನ್ನಡ 3, ಉಡುಪಿ 3, ಬೆಂಗಳೂರು ನಗರ 2, ಕೋಲಾರ 2, ಚಿಕ್ಕಬಳ್ಳಾಪುರ, ಕೊಪ್ಫಳ, ಬಳ್ಳಾರಿ, ಬಾಗಲಕೋಟೆಯಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

ಇವರಲ್ಲಿ ಬಹುತೇಕರು ಹೊರರಾಜ್ಯಗಳ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಜಾರ್ಖಂಡ್ ಪ್ರವಾಸ ಕೈಗೊಂಡ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. 

ಇಲ್ಲಿಯವರೆಗೆ ರಾಜ್ಯದಲ್ಲಿ 46 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 748 ಮಂದಿ ಗುಣಮುಖರಾಗಿದ್ದು, ಒಟ್ಟು 1489 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com