ಪರ್ಯಾಯ ಶಿಕ್ಷಣ ವಿಧಾನದತ್ತ ಶಿಕ್ಷಣ ಇಲಾಖೆ ದೃಷ್ಟಿ: 3 ಶೈಕ್ಷಣಿಕ ವಾಹಿನಿ ತೆರೆಯಲು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

ಕೊರೋನಾ ಶಿಕ್ಷಣ ವಲಯದ ಮೇಲೆ ಭಾರೀ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಪರ್ಯಾಯ ಶಿಕ್ಷಣ ವಿಧಾನದತ್ತ ಮುಖ ಮಾಡಿರುವ ಶಿಕ್ಷಣ ಇಲಾಖೆ 3 ಶೈಕ್ಷಣಿಕ ವಾಹಿನಿಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಶಿಕ್ಷಣ ವಲಯದ ಮೇಲೆ ಭಾರೀ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಪರ್ಯಾಯ ಶಿಕ್ಷಣ ವಿಧಾನದತ್ತ ಮುಖ ಮಾಡಿರುವ ಶಿಕ್ಷಣ ಇಲಾಖೆ 3 ಶೈಕ್ಷಣಿಕ ವಾಹಿನಿಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿದೆ. 

ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರಿಗೆ ಪತ್ರ ಬರೆದಿದ್ದು, ದೂರದರ್ಶದ ಮೂಲಕ ಬೋಧನೆ ಮಾಡುವ ಸಲುವಾಗಿ ಸರ್ಕಾರ 3 ಶೈಕ್ಷಣಿಕ ವಾಹಿನಿಗಳನ್ನು ತೆರೆಯಲು ನಿರ್ಧರಿಸಿದ್ದು, ಈ ಕುರಿತು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ವಾಹಿನಿಗಳ ಮೂಲಕ ಇಂಗ್ಲೀಷ್, ಕನ್ನಡ ಹಾಗೂ ಉರ್ದು ಸೇರಿದಂತೆ ಇನ್ನಿತರೆ ಸ್ಥಳೀಯ 9 ಭಾಷೆಗಳಲ್ಲಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತದೆ. ಇದರಿಂತ ಎಲ್ಲಾ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. 

ಈಗಾಗಲೇ ಇಲಾಖೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದು, ಪ್ರಸ್ತುತ ಅಸ್ತಿತ್ವದಲ್ಲಿರುವ ಚಂದನಾ ವಾಹಿನಿಯಲ್ಲಿ 6 ಗಂಟೆಗಳ ಕಾಲ ಸ್ಲಾಟ್ ಗಳ ಆಧಾರದ ಮೇಲೆ ಬೋಧನೆ ಮಾಡಲಾಗುತ್ತದೆ. ಮನೆಯಿಂದಲೇ ಕಲಿಯಲು ಮಕ್ಕಳಿಗೆ ಟಿವಿ ಅತ್ಯುತ್ತಮ ಸಾಧನವಾಗಿದೆ. ಸ್ಮಾರ್ಟ್ ಫೋನ್ ಹಾಗೂ ಇತರೆ ಸಾಧನಗಳಿಗಿಂತಲೂ ಟಿವಿ ಅತ್ಯುತ್ತಮವಾಗಿದ್ದು, ಶೇ.95ಕ್ಕಿಂತಲೂ ಹೆಚ್ಚು ಮನೆಗಳಲ್ಲಿ ಟಿವಿ ಸೌಲಭ್ಯವಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com