ಆರ್ಥಿಕ ಕುಸಿತದ ಹೊರತಾಗಿಯೂ ಬಿಡಿಎ ಕಾರ್ನರ್ ಸೈಟ್'ಗಳು ಭಾರೀ ಬೆಲೆಗೆ ಮಾರಾಟ!

ಕೊರೋನಾ ಬಳಿಕ ಎದುರಾಗಿರುವ ಆರ್ಥಿಕ ಕುಸಿತದ ಹೊರತಾಗಿಯೂ ಬಿಡಿಎ ಕಾರ್ನರ್ ಸೈಟ್'ಗಳಿಗೆ ಉತ್ತಮ ಬೆಲೆ ದೊರೆತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಬಳಿಕ ಎದುರಾಗಿರುವ ಆರ್ಥಿಕ ಕುಸಿತದ ಹೊರತಾಗಿಯೂ ಬಿಡಿಎ ಕಾರ್ನರ್ ಸೈಟ್'ಗಳಿಗೆ ಉತ್ತಮ ಬೆಲೆ ದೊರೆತಿದೆ. 

ಆದಾಯ ಕ್ರೋಢೀಕರಣಕ್ಕೆ ಆದ್ಯತೆ ನೀಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇತ್ತೀಚೆಗಷ್ಟೇ ಮೂರು ಹಂತದಲ್ಲಿ ಮೂಲೆ ನಿವೇಶನಗಳನ್ನು ಹರಾಜು ಮಾಡಿದೆ. 

ಎಚ್‌ಎಸ್‌ಆರ್ ಲೇಔಟ್'ನ 2ನೇ ಸೆಕ್ಟರ್‌ನಲ್ಲಿರುವ ಒಂದು ಸೈಟ್ ಒಂದು ಅತೀ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಈ ಸೈಟ್'ನಿಂದ ಬಿಡಿಎಗೆ 8,08,97,900 ರೂಗಳನ್ನು ಬಂದಿದೆ ಎಂದು ತಿಳಿದುಬಂದಿದೆ, ಇದು ಪ್ರಾಧಿಕಾರವು ನಿಗದಿಪಡಿಸಿದ ಬೆಲೆಗಿಂತ ಶೇಕಡಾ 160 ಪಟ್ಟು ಹೆಚ್ಚಿನ ಹಣವನ್ನು ತಂದಿದೆ ಎನ್ನಲಾಗಿದೆ. ಇನ್ನು ಜಕ್ಕೂರ್‌ನ ಒಂದು ತಾಣವು ನಿಗದಿತ ಬೆಲೆಗಿಂತ ಶೇಕಡಾ 248 ರಷ್ಟು ಹೆಚ್ಚಿನದನ್ನು ಪಡೆದುಕೊಂಡಿದೆ.

ನಾಲ್ಕನೇ ಬ್ಯಾಚ್ ಸೈಟ್‌ಗಳ ಹರಾಜು ಪ್ರಕ್ರಿಯೆಯು ಮುಂದುವರೆದಿದ್ದು, ಮುಂದಿನ ವರ್ಷ ಇನ್ನೂ ಎರಡು ಸುತ್ತಿನ ಹರಾಜು ನಡೆಯಲಿದೆ. ಶೇ. 50ರಷ್ಟು ಸೈಟ್‌ಗಳು ವಿವಿಧ ಕಾರಣಗಳಿಂದಾಗಿ ಮಾರಾಟವಾಗದೆ ಉಳಿದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಸೈಟುಗಳಿಗೆ ಈ ಬಾರಿ ಬೇಡಿಕೆಗಳು ಉತ್ತಮವಾಗಿವೆ. ಶೇ.20ರಷ್ಟು ಸೈಟುಗಳನ್ನಷ್ಟೇ ಯಾರೂ ಖರೀದಿ ಮಾಡುತ್ತಿಲ್ಲ. ಪ್ರಸ್ತುತ ಮಾರಾಟವಾಗಿರುವ ಪ್ರತೀ ಸೈಟುಗಳಿಗೂ ಎಂಟೆಂಟು ಮಂದಿ ಪೈಪೋಟಿಯಲ್ಲಿದ್ದುರು. ಈ ಬಾರಿಯ ಸೈಟು ಹರಾಜಿನ ಮೇಲೆ ಕೊರೋನಾ ಯಾವುದೇ ರೀತಿಯ ಪರಿಣಾಮವನ್ನೂ ಬೀರಿಲ್ಲ ಎಂದು ತಿಳಿಸಿದ್ದಾರೆ. 

ಬಿಡಿಎ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್ ಪಿ ಗಿರೇಶ್ ಅವರು ಮಾಕನಾಜಿಸ 912 ಸೈಟ್‌ಗಳಲ್ಲಿ 672 ಮಾರಾಟವಾಗಿವೆ. ಅವುಗಳಲ್ಲಿ ಎರಡು ಸೈಟುಗಳ ಖರೀದಿದಾರರಿಗೆ ಹಕ್ಕುಪತ್ರವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. 

ಹೆಚ್ಎಸ್ಆರ್ ಲೇಔಟ್ ನಲ್ಲಿದ್ದ ಸೈಟ್ 207 ಚದರ ಮೀಟರ್ ಗಳಿಷ್ಟಿದ್ದು, ಪ್ರತಿ ಚದರ ಮೀಟರ್‌ಗೆ 1,50,000 ರೂ. ಮೂಲ ಬೆಲೆಯನ್ನು ನಿಗದಿಪಡಿಸಲಾಗಿತ್ತು. ಇದು ಅಂತಿಮವಾಗಿ ಪ್ರತಿ ಚದರ ಮೀಟರ್ಗೆ 3,91,000 ರೂಗಳಿಗೆ ಮಾರಾಟವಾಯಿತು, ಒಟ್ಟಾರ್ ಸೈಟ್ ರೂ. 8,08,97,900ಕ್ಕೆ ಮಾರಾಟವಾಯಿತು. ಜಕ್ಕೂರಿನ ಒಂದು ಸೈಟ್ 72 ಚದರ ಮೀಟರ್ ಗಳಷ್ಟಿತ್ತು. ಪ್ರತಿ ಚದರ ಮೀಟರ್'ಗೆ ರೂ.44,400 ಮೂಲ ಬೆಲೆಯೆಂದು ನಿಗದಿಪಡಿಸಲಾಗಿದ್ದು, ಬಳಿಕ ಪ್ರತಿ ಚದರ ಮೀಟರ್'ಗೆ ರೂ.1,54,900ಕ್ಕೆ ಬಿಡ್ಡಿಂಗ್ ಆರಂಭವಾಗಿತ್ತು. ಬಳಿಕ ಅಂತಿಮವಾಗಿ ರೂ.1,11,52,800ಕ್ಕೆ ಮಾರಾಟವಾಯಿತು. ಇದು ನಾವು ನಿರೀಕ್ಷಿದ್ದಕ್ಕಿಂತರೂ ಶೇ.248 ರಷ್ಟು ಹೆಚ್ಚಿನ ದರಕ್ಕೆ ಮಾರಾಟವಾಗಿದೆ ಎಂದು ತಿಳಿಸಿದ್ದಾರೆ. 

ಸರ್ ಎಂ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ 540 ಚದರ ಮೀಟರ್ ಅಳತೆಯುಳ್ಳ ಚಿಕ್ಕ ಸೈಟ್ ಕೂಡ ರೂ.60,75,000ಕ್ಕೆ ಮಾರಾಟವಾಗಿದೆ. ಅದೂ ಕೂಡ ಶೇ.ರೂ.167.86 ರಷ್ಟು ಹೆಚ್ಚಿನ ಬೆಲೆಗೆ ಮಾರಾಟವಾಗಿದೆ ಎಂದಿದ್ದಾರೆ. 

ಹೆಚ್ಎಸ್ಆಱ್ ಲೇಔಟ್, ಕೋರಮಂಗಲ ಹಾಗೂ ಅರ್ಕಾವತಿಯಲ್ಲಿ ಸೈಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅತ್ಯಂತ ಕಡಿಮೆ ಬೆಲೆಗೆ ಬಿಡ್ಡಿಂಗ್ ಮಾಡಲಾಗುತ್ತಿದ್ದ ಸೈಟ್'ಗಳ ಹರಾಜನ್ನು ನಿಲ್ಲಿಸಲಾಯಿತು. ವಾಸ್ತು ದೋಷದಿಂದ ಕೆಲ ಸೈಟುಗಳು ಹರಾಜಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com