ಬೆಂಗಳೂರು: ರಾಸಾಯನಿಕ ಗೋದಾಮಿನಲ್ಲಿ ಕೊನೆಗೂ ತಣ್ಣಗಾದ ಬೆಂಕಿಯ ಜ್ವಾಲೆ, ಮೂವರ ಬಂಧನ

ಅಗ್ನಿಯ ರೌದ್ರನರ್ತನಕ್ಕೆ ಸುಟ್ಟುಕರಕಲಾಗಿರುವ ಹೊಸಗುಡ್ಡದಹಳ್ಳಿಯ ರೇಖಾ ರಾಸಾಯನಿಕ ಫ್ಟಾಕ್ಟರಿ ಗೋದಾಮಿನಲ್ಲಿ 48 ಗಂಟೆಗಳ ಬಳಿಕ ಬೆಂಕಿಯ ಜ್ವಾಲೆ ತಣ್ಣಗಾಗಿದ್ದು, ಪ್ರಕರಣ ಸಂಬಂಧ ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. 
ಬೆಂಕಿ ಹೊತ್ತಿಕೊಂಡಿರುವ ಫ್ಯಾಕ್ಟರಿ
ಬೆಂಕಿ ಹೊತ್ತಿಕೊಂಡಿರುವ ಫ್ಯಾಕ್ಟರಿ
Updated on

ಬೆಂಗಳೂರು: ಅಗ್ನಿಯ ರೌದ್ರನರ್ತನಕ್ಕೆ ಸುಟ್ಟುಕರಕಲಾಗಿರುವ ಹೊಸಗುಡ್ಡದಹಳ್ಳಿಯ ರೇಖಾ ರಾಸಾಯನಿಕ ಫ್ಟಾಕ್ಟರಿ ಗೋದಾಮಿನಲ್ಲಿ 48 ಗಂಟೆಗಳ ಬಳಿಕ ಬೆಂಕಿಯ ಜ್ವಾಲೆ ತಣ್ಣಗಾಗಿದ್ದು, ಪ್ರಕರಣ ಸಂಬಂಧ ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. 

ರೇಖಾ ರಾಸಾಯನಿಕ ಫ್ಯಾಕ್ಟರಿ ಮಾಲೀಕ ದಂಪತಿ ಹಾಗೂ ಅವರ ಪುತ್ರ ಸೇರಿದಂತೆ ಮೂವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ನಿನ್ನೆ ಬಂಧನಕ್ಕೊಳಪಡಿಸಿದ್ದಾರೆ. 

ಚಾಮರಾಜಪೇಟೆಯ ಉಮಾ ಚಿತ್ರಮಂದಿರದ ಹತ್ತಿರದ ನಿವಾಸಿಗಳಾದ ಸಜ್ಜನ್ ರಾಜ್, ಅವರ ಪತ್ನಿ ಕಮಲಾ ಹಾಗೂ ಪುತ್ರ ಅನಿಲ್ ಕುಮಾರ್ ಬಂಧಿತರು. 

ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಬಳಿಕ ಮೂವರು ನಾಪತ್ತೆಯಾಗಿದ್ದರು. ಬಳಿಕ ಆರೋಪಿಗಳನ್ನು ಶಂಕರಪುರ ಬಳಿ ಬಂಧಿಸಲಾಗಿಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಕರಣ ಸಂಬಂಧ ಎರಡು ಎಫ್ಐಆರ್ ಗಳನ್ನು ದಾಖಲಿಸಲಾಗಿದೆ. ಬೊಮ್ಮಸಂದ್ರದಲ್ಲಿ ಘಟಕ ಸ್ಥಾಪನೆ ಮಾಡುವಾದ ಸ್ಥಳದ ಕೊರತೆ ಎದುರಾದ ಪರಿಣಾಮ ಹೊಸಗುಡ್ಡದಹಳ್ಳಿಯಲ್ಲಿ ಗೋದಾಮು ಮಾಡಿಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. 

ಮಾಲೀಕನ ಬಳಿ ಜಿಎಸ್ಟಿ ಪ್ರಮಾಣಪತ್ರವಿದೆ. ಆದರೆ, ಬಿಬಿಎಂಪಿ, ಅಗ್ನಿಶಾಮಕ ಮತ್ತು ತುರ್ತುಸೇವೆ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಅನುಮತಿಗಳನ್ನು ಪಡೆದಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸಜ್ಜನ್ ರಾಜ್ ಅವರು 1974 ರಿಂದಲೂ ರಾಸಾಯನಿಕಗಳ ವ್ಯವಹಾರ ನಡೆಸುತ್ತಿದ್ದಾರೆ. ಮತ್ತು 1992 ರಲ್ಲಿ ಗೋದಾಮು ಸ್ಥಾಪಿಸಲು ಹೊಸಗುಡ್ಡದಹಳ್ಳಿಯಲ್ಲಿ ಭೂಮಿ ಖರೀದಿಸಿದ್ದರು. “ಸಂಸ್ಥೆಯು ಮುಂಬೈ, ಕೊಚ್ಚಿ ಮತ್ತು ಚೆನ್ನೈನಿಂದ ರಾಸಾಯನಿಕಗಳನ್ನು ಸಂಗ್ರಹಿಸಿ ಫಾರ್ಮಾ ಕಂಪನಿಗಳಿಗೆ ಪೂರೈಕೆ ಮಾಡುತ್ತಿತ್ತು. ಅಪಘಾತ ಸಂಭವಿಸಿದಾಗ ಗೋದಾಮಿನಲ್ಲಿ 16 ಬಗೆಯ ರಾಸಾಯನಿಕಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಲಿಂಗರಾಜಪುರದ ಕ್ರಿಸೆಂಟ್ ಕೆಮಿಕಲ್ ಫ್ಯಾಕ್ಟರಿಗೆ ಐಎಸ್ಓ ಪ್ರೊಪ್ಲೆ ಅಲ್ಕೋಹಾಲ್'ನ್ನು ಮಂಗಳವಾರ ರೇಖಾ ರಾಸಾಯನಿಕ ಕಾರ್ಖಾನೆ ಪೂರೈಸಬೇಕಿತ್ತು. ಅಂತೆಯೇ ರಾಸಾಯನಿಕವನ್ನು ಬ್ಯಾರಲ್'ಗೆ ತುಂಬುವ ಕೆಲಸದಲ್ಲಿ ಕಾರ್ಮಿಕರು ತೊಡಗಿದ್ದರು. ತಲಾ ಒಂದು ಬ್ಯಾರಲ್'ಗೆ 85 ಕೆಜಿ ತೂಕ ಇರಬೇಕಿತ್ತು. ಆದರೆ, ತೂಕದ ಪ್ರಮಾಣ ಕಡಿಮೆ ಬರುತ್ತಿದ್ದ ಕಾರಣಕ್ಕೆ ಕಾರ್ಮಿಕ ಬಿಜುಸಿಂಗ್, ಮಾಲೀಕ ಸಜ್ಜನ್ ರಾಜ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದ. ಆಗ ಸಜ್ಜನ್ ರಾಜ್, ಬೇರೊಂದು ಬ್ಯಾರಲ್'ಗೆ ರಾಸಾಯನಿಕ ವರ್ಗಾಯಿಸುವಂತೆ ಸೂಚಿಸಿದ್ದರು. ಅಂತೆಯೇ ಬಿಜುಸಿಂಗ್, ಮತ್ತೊಂದು ಬ್ಯಾರಲ್'ಗೆ ಪೈಪ್'ನಲ್ಲಿ ರಾಸಾಯನಿಕ ದ್ರಾವಣವನ್ನು ವರ್ಗಾಯಿಸುತ್ತಿದ್ದ. ಆ ವೇಳೆಗೆ ಬಿಸಿಲಿನ ಕಾವಿಗೆ ಬ್ಯಾರಲ್'ಗಳು ಕಾದಿದ್ದವು. ಆಗ ಬ್ಯಾರಲ್'ಗಳ ಅಕ್ಕಪಕ್ಕದಲ್ಲೇ ಇಟ್ಟ ಪರಿಣಾಮ ಒಂದಕ್ಕೊಂದು ಉಜ್ಜಿಕೊಂಡು ಕಿಡಿ ಹೊತ್ತಿಕೊಂಡಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ವಿವರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com