ರೇಖಾ ರಾಸಾಯನಿಕ ಫ್ಯಾಕ್ಟರಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು

ರೇಖಾ ಕೆಮಿಕಲ್ಸ್ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರೇಖಾ ರಾಸಾಯನಿಕ ಫ್ಯಾಕ್ಟರಿ
ರೇಖಾ ರಾಸಾಯನಿಕ ಫ್ಯಾಕ್ಟರಿ
Updated on

ಬೆಂಗಳೂರು: ರೇಖಾ ಕೆಮಿಕಲ್ಸ್ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಿಜಯ್ ಸಿಂಗ್ (30) ಮೃತ ದುರ್ದೈವಿ.

ನ.10ರಂದು ಮಧ್ಯಾಹ್ನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿಯ ಹೊಸ ಗುಡ್ಡದಳ್ಳಿ ರೇಖಾ ಕೆಮಿಕಲ್ಸ್ ಗೋದಾಮಿನ ಅಗ್ನಿ ಅವಘಡದಲ್ಲಿ ಕೆಲಸಗಾರ ಬಿಜಯ್ ಗಂಭೀರವಾಗಿ ಗಾಯಗೊಂಡಿದ್ದರು.ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಟ್ಟಗಾಯಗಳ ಘಟಕದಲ್ಲಿದ್ದ ಅವರು ಚಿಕಿತ್ಸೆ ಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
 
ಈಗಾಗಲೇ ಪೊಲೀಸರು ಕಂಪನಿ ಮಾಲೀಕ ಸಜ್ಜನ್ ರಾಜ್ , ಪತ್ನಿ ಕಮಲ ಹಾಗೂ ಅನಿಲ್ ಕುಮಾರ್ ಅನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com