
ಬೆಂಗಳೂರು: ಸಾಧು ವಾಸ್ವಾನಿ ಜಯಂತಿ ಹಿನ್ನಲೆಯಲ್ಲಿ ಬಿಬಿಎಂಪಿ ನಾಳೆ ಮಾಂಸ ಮಾರಾಟ ನಿಷೇಧ ಮಾಡಿದೆ,
ಸಾಧು ವಾಸ್ವಾನಿ ಜಯಂತಿ ಹಿನ್ನಲೆಯಲ್ಲಿ ನವೆಂಬರ್ 25 ರಂದು ಅಂದರೆ ನಾಳೆ ನಗರದಲ್ಲಿ ಪ್ರಾಣಿಗಳ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 25ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಹಾಗೂ ಪಾಲಿಕೆ ವ್ಯಾಪ್ತಿಯ ಕಸಾಯಿಕಾನೆಗಳಲ್ಲಿ ಪ್ರಾಣಿವಧೆ ನಿಷೇಧ ಮಾಡಲಾಗಿದೆ. ಈ ಕುರಿತು ಬಿಬಿಎಂಪಿ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement