ಚನ್ನಪಟ್ಟಣದ ಗೊಂಬೆ ಲಕೋಟೆ ಬಿಡುಗಡೆ

ವಿಶ್ವ ಅಂಚೆ ಚೀಟಿ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ಚನ್ನಪಟ್ಟಣದ ಗೊಂಬೆಯನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. 
ಚನ್ನಪಟ್ಟಣದ ಗೊಂಬೆ ಲಕೋಟೆ
ಚನ್ನಪಟ್ಟಣದ ಗೊಂಬೆ ಲಕೋಟೆ
Updated on

ಬೆಂಗಳೂರು: ವಿಶ್ವ ಅಂಚೆ ಚೀಟಿ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ಚನ್ನಪಟ್ಟಣದ ಗೊಂಬೆಯನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. 

ಪೋಸ್ಟ್ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾ ಮನವಿ ಮೇರೆಗೆ ಭಾರತದ ಆಟಿಕೆಗಳು ಎಂಬ ಘೋಷಣಾವಾಕ್ಯದಡಿ ಕರ್ನಾಟಕದ ಚನ್ನಪಟ್ಟಣದ ಗೊಂಬೆ ಸೇರಿದಂತೆ ದೇಶದ 11 ರಾಜ್ಯಗಳ ಗೊಂಬೆಗಳ ಲಕೋಟೆಯನ್ನು ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಅವರು ಬಿಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, 151ನೇ ವಿಶ್ವ ಅಂಚೆ ದಿನವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. 

ಭಾರತೀಯ ಅಂಚೆ ಪತ್ರಗಳನ್ನು ಸಂಗ್ರಹಿಸಿ ಪಿ.ಎಚ್'ಡಿ ಪದವಿ ಪಡೆದಿರುವ ಹವ್ಯಾಸಿ ಅಂಚೆ ಪತ್ರಗಳ ಸಂಗ್ರಹಕ ಡಿ.ಬಿ,ರಾಮಕೃಷ್ಣ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com