ಜಿಎಸ್'ಟಿ ಪರಿಹಾರ: ಕೇಂದ್ರದಿಂದ ಹೆಚ್ಚುವರಿ ರೂ.11 ಸಾವಿರ ಕೋಟಿಗೆ ಬೊಮ್ಮಾಯಿ ಮನವಿ

ರಾಜ್ಯಕ್ಕೆ ಕೇಂದ್ರದಿಂದ ಬರೋಬ್ಬರಿ ರೂ.11 ಸಾವಿರ ಕೋಟಿ ಜಿಎಸ್'ಟಿ ಪರಿಹಾರ ಮೊತ್ತ ಬರಬೇಕಿದ್ದು, ಕೂಡಲೇ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ ಮಾಡಿಕೊಂಡಿದೆ. 
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on: 

ಬೆಂಗಳೂರು: ರಾಜ್ಯಕ್ಕೆ ಕೇಂದ್ರದಿಂದ ಬರೋಬ್ಬರಿ ರೂ.11 ಸಾವಿರ ಕೋಟಿ ಜಿಎಸ್'ಟಿ ಪರಿಹಾರ ಮೊತ್ತ ಬರಬೇಕಿದ್ದು, ಕೂಡಲೇ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ ಮಾಡಿಕೊಂಡಿದೆ. 

ಪ್ರಸಕ್ತ ಹಣಕಾಸು ವರ್ಷದ ಮೊದಲ ಸಾಲಿನಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಏಪ್ರಿಲ್ ಮತ್ತು ಮೇ ನಡುವಿನ ಅವಧಿಗೆ ಭಾಗಶಃ ಜಿಎಸ್ಟಿ ಪರಿಹಾರವಾಗಿ ರೂ.1,776 ಕೋಟಿ ನೀಡಿದೆ. ಬಾಕಿ ಉಳಿದಿರುವ ಹಣವನ್ನು ನೀಡುವ ಕುರಿತು ಶೀಘ್ರಗತಿಯಲ್ಲಿ ನಿರ್ಧಾರ ಕೈಗೊಳ್ಳುವಂತೆ ಕೇಂದ್ರದ ಬಳಿ ಮನವಿ ಮಾಡಿಕೊಳ್ಳುತ್ತೇನೆಂದು ಜಿಎಸ್'ಟಿ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಕೆಲ ರಾಜ್ಯಗಳು ಅನಗತ್ಯವಾಗಿ ಯಾರು ಸಾಲವನ್ನು ಮರುಪಾವತಿ ಮಾಡಬೇಕೆಂಬುದರ ಬಗ್ಗೆ ಕೇಂದ್ರೀಕರಿಸುವ ಬದಲು ಯಾರು ಸಾಲ ಪಡೆಯಬೇಕು ಎಂಬುದರ ಕುರಿತು ಅನಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 

ಮುಂದಿನ ಸಭೆಯಲ್ಲಿ ಅಧಿಕಾರಿಗಳು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದ್ದು, ಕರ್ನಾಟಕಕ್ಕೆ ಬಾಕಿ ನೀಡಬೇಕಿರುವ ಜಿಎಸ್'ಟಿ ಪರಿಹಾರ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com