ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ: 80‌ಲಕ್ಷ ರೂ. ವಶ, 65 ಮಂದಿ ವಶಕ್ಕೆ

ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 65 ಜನರನ್ನು ಬಂಧಿಸಿದ್ದಾರೆ.
ಸಿಸಿಬಿ ಕಚೇರಿ
ಸಿಸಿಬಿ ಕಚೇರಿ
Updated on

ಬೆಂಗಳೂರು: ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 65 ಜನರನ್ನು ಬಂಧಿಸಿದ್ದಾರೆ.

ಭಾನುವಾರ ಮಹಾದೇವಪುರದ ಖಾಸಗಿ ಹೋಟೆಲ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್, ಇನ್ನಿತರ ಜೂಜಾಡಲಾಗುತ್ತಿದೆ ಎಂಬ‌ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ 65 ಜನರನ್ನು ವಶಕ್ಕೆ ಪಡೆದು, 80‌ ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ  ಅಧಿಕಾರಿಗಳ ತಂಡ, 65 ಮಂದಿಯನ್ನ ವಶಕ್ಕೆ ಪಡೆದುಕೊಂಡಿದೆ. ಮಹಾದೇವಪುರದ ಬೆಂಗಳೂರು ಇನ್ ಹೋಟೆಲ್​​ನಲ್ಲಿ ಜೂಜು ಆಡುತ್ತಿದ್ದರು ಎನ್ನಲಾಗಿದೆ.

ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬಂಧಿತ 65 ಆರೋಪಿಗಳಲ್ಲಿ 60 ಮಂದಿ ಆಂಧ್ರ ಪ್ರದೇಶದವರು ಅಂತಾ ಹೇಳಲಾಗಿದೆ. ಆಂಧ್ರ ಮೂಲದ ರಾಜೇಶ್ ಎಂಬಾತ ಹೋಟೆಲ್‌ ನಡೆಸುತ್ತಿದ್ದ. ಕಳೆದ 5 ವರ್ಷಗಳಿಂದ ಬೆಂಗಳೂರು ಇನ್ ಹೋಟೆಲ್ ನಡೆಸುತ್ತಿದ್ದ. ಹೋಟೆಲ್​ನ ಹಾಲ್  ಒಂದರಲ್ಲಿ ಅಂದರ್ ಬಾಹರ್ ಜೂಜಾಟ ನಡೆಸುತ್ತಿದ್ದ. ಆಂಧ್ರದಿಂದ ಜೂಜುಕೋರರನ್ನು ಬೆಂಗಳೂರಿಗೆ ಕರೆಸಿ ಜೂಜಾಟ ನಡೆಸ್ತಿದ್ದ ಎನ್ನಲಾಗಿದೆ. ಜೂಜಾಟದಲ್ಲಿ ಭಾಗಿಯಾಗಲು ಒಬ್ಬರ ಎಂಟ್ರಿ ಫೀಜ್ ಐದು ಲಕ್ಷ ಇತ್ತು ಅಂತಾ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com