ಕೇಂದ್ರ ಸರ್ಕಾರದ ಅಣೆಕಟ್ಟೆ ಸುರಕ್ಷತೆ ಯೋಜನೆ ಜಾರಿ ಸ್ವಾಗತಾರ್ಹ- ಯಡಿಯೂರಪ್ಪ

ವಿಶ್ವ ಬ್ಯಾಂಕ್ ಹಾಗೂ ಏಷ್ಯಾ  ಮೂಲಸೌಕರ್ಯ  ಹೂಡಿಕೆ ಬ್ಯಾಂಕ್  ನೆರವಿನಿಂದ  ದೇಶದಲ್ಲಿ ಅಣೆಕಟ್ಟೆ ಪುನರ್ವಸತಿ  ಮತ್ತು ಸುಧಾರಣೆ  ಯೋಜನೆಯ 2 ಮತ್ತು  3ನೇ ಹಂತದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ  ಅನುಮೋದನೆ ನೀಡಿರುವುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ
Updated on: 

ಬೆಂಗಳೂರು: ವಿಶ್ವ ಬ್ಯಾಂಕ್ ಹಾಗೂ ಏಷ್ಯಾ  ಮೂಲಸೌಕರ್ಯ  ಹೂಡಿಕೆ ಬ್ಯಾಂಕ್  ನೆರವಿನಿಂದ  ದೇಶದಲ್ಲಿ ಅಣೆಕಟ್ಟೆ ಪುನರ್ವಸತಿ  ಮತ್ತು ಸುಧಾರಣೆ  ಯೋಜನೆಯ 2 ಮತ್ತು  3ನೇ ಹಂತದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ  ಅನುಮೋದನೆ ನೀಡಿರುವುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಈ ಯೋಜನೆಯಿಂದ ರಾಜ್ಯಕ್ಕೆ ಅನುಕೂಲವಾಗಲಿದೆ. ರಾಜ್ಯದಲ್ಲಿ  ಜಲ ಸಂಪನ್ಮೂಲ ಇಲಾಖೆಯಿಂದ ಡಿ.ಆರ್.ಐ.ಪಿ ನೀರಾವರಿ  ಯೋಜನೆ ಜಾರಿಯಲ್ಲಿದ್ದು, ಕೇಂದ್ರದ ಈ ಕ್ರಮದಿಂದ ಅಣೆಕಟ್ಟೆಯ  ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ಬರುವ 2021ರಿಂದ  2031ರ ಅವಧಿಯಲ್ಲಿ ಈ ಎರಡೂ ಹಂತಗಳ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ  10,211 ಕೋಟಿ ರೂಪಾಯಿ  ವೆಚ್ಚ ಮಾಡುತ್ತಿದೆ. ಈ ಪೈಕಿ  ಬ್ಯಾಂಕ್ ಗಳು  7 ಸಾವಿರ ಕೋಟಿ ರೂಪಾಯಿ  ನೆರವು ನೀಡಲಿದ್ದು, ಅಣೆಕಟ್ಟೆಗಳಲ್ಲಿ  ಸುರಕ್ಷತಾ ಕ್ರಮಗಳನ್ನು ಅಳವಡಿಸಿ, ಅಣೆಕಟ್ಟೆಗಳ ಕಾರ್ಯಾಚರಣೆಯನ್ನು ವೃದ್ಧಿಸಲು  ಈ ಯೋಜನೆ ಸಹಕಾರಿಯಾಗಲಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com