ಸ್ಯಾಂಡಲ್ ವುಡ್-ಬಾಲಿವುಡ್ ನಶೆ ನಂಟಿನ ಬಗ್ಗೆ ಬೆಂಗಳೂರು ಪೊಲೀಸರಿಂದ ಸಮಗ್ರ ತನಿಖೆ

ಸ್ಯಾಂಡಲ್ ವುಡ್- ಬಾಲಿವುಡ್ ನಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಕಾಮನ್ ವ್ಯಕ್ತಿಯ ಬಗ್ಗೆ ಬೆಂಗಳೂರು ಪೊಲೀಸರು ಸಮಗ್ರ ತನಿಖೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಿಸಿಬಿ ವಶಕ್ಕೆ ನಟಿ ಸಂಜನಾ
ಸಿಸಿಬಿ ವಶಕ್ಕೆ ನಟಿ ಸಂಜನಾ
Updated on

ಬೆಂಗಳೂರು: ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಜಾಲದಲ್ಲಿ ಬಂಧಿತರಾಗಿರುವ ನಟಿಯರಿಂದ ಹಲವು ಮಹತ್ವದ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆಯಿದೆ.

ಸ್ಯಾಂಡಲ್ ವುಡ್- ಬಾಲಿವುಡ್ ನಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಕಾಮನ್ ವ್ಯಕ್ತಿಯ ಬಗ್ಗೆ ಬೆಂಗಳೂರು ಪೊಲೀಸರು ಸಮಗ್ರ ತನಿಖೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಬಾಲಿವುಡ್ ನಟ ವಿವೇಕ್ ಓಬೇರಾಯ್ ಭಾವ-ಮೈದುನ ಹಾಗೂ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವನಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ, ಸೆಪ್ಟಂಬರ್ 4 ರಂದು ಕಾಟನ್ ಪೇಟೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಆದಿತ್ಯ ಆಳ್ವ 6ನೇ ಆರೋಪಿ.

ನಟಿ ರಾಗಿಣಿ ಸೇರಿದಂತೆ ಒಟ್ಟು 12 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ, ಆದರೆ ಆದಿತ್ಯ ಆಳ್ವ ಇದುವರೆಗೂ ನಗರದಲ್ಲಿ ಪತ್ತೆಯಾಗಿಲ್ಲ, ಹೀಗಾಗಿ ಪೊಲೀಸರು ಆತನ ಬಾಡಿಗಾರ್ಡ್ ಗಳನ್ನು ವಿಚಾರಣೆ ನಡೆಸಿದ್ದಾರೆ.

ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಪೂರೈಸುವ ಕಾಮನ್ ಡ್ರಗ್ಸ್ ಸಪ್ಲೈ ಚೈನ್ ನಿಂದಾಗಿ ಕೆಲವು ನಿರ್ಣಾಯಕ ಮಾಹಿತಿ ಸಿಗಬಹುದು ಎಂದು ಅಧಿಕೃತ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ನಟಿ ರಿಯಾ ಚಕ್ರವರ್ತಿಯನ್ನು ಎನ್ ಸಿಬಿ ತಂಡ ಬಂಧಿಸಿದೆ. ಬೆಂಗಳೂರು ನಗರ ಎನ್ ಸಿಬಿ ಘಟಕ ಮುಂಬಯಿಯಲ್ಲಿ ಬೀಡುಬಿಟ್ಟಿದ್ದು. ರಿಯಾ ಚಕ್ರವರ್ತಿ ವಿಚಾರಣೆ ನಡೆಸುತ್ತಿದ್ದಾರೆ, ಪ್ರಕರಣ ಸಂಬಂಧ ಅನಿಕಾ ಸೇರಿದಂತೆ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಸಿಸಿಬಿ ಮತ್ತು ಎನ್ ಸಿಬಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಿಸಿಬಿ ಪೊಲೀಸರು ಇದುವರೆಗೂ ನಟಿಯರಾದ ರಾಗಿಣಿ ಮತ್ತು ಸಂಜನಾ ಸೇರಿದಂತೆ ಇದುವರೆಗೂ 7 ಮಂದಿಯನ್ನು ಬಂಧಿಸಿದ್ದಾರೆ. ಇವೆಂಟ್ ಮ್ಯಾನೇಜರ್ ವಿರೇನ್ ಖನ್ನಾ, ಆರ್ ಟಿ ಓ ಕ್ಲರ್ಕ್ ರವಿಶಂಕರ್, ರಾಹುಲ್ ಶೆಟ್ಟಿ, ನಿಯಾಜ್, ಲೂಮ್ ಪೆಪ್ಪರ್ ಸಾಂಬಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com