ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಅಡ್ಡ ಪರಿಣಾಮ: ಪ್ರಕರಣಗಳ ಸಂಖ್ಯೆ ಹೆಚ್ಚಳ!

ಮಾರಕ ಕೊರೋನಾ ಸೋಂಕಿನಿಂದ ಗುಣಮುಖರಾದ ಸೋಂಕಿತರಲ್ಲಿ ಇದೀಗ ಆರೋಗ್ಯಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮ ಉಂಟಾಗುತ್ತಿದ್ದು, ಇಂತಹ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ.
Published on

ಬೆಂಗಳೂರು: ಮಾರಕ ಕೊರೋನಾ ಸೋಂಕಿನಿಂದ ಗುಣಮುಖರಾದ ಸೋಂಕಿತರಲ್ಲಿ ಇದೀಗ ಆರೋಗ್ಯಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮ ಉಂಟಾಗುತ್ತಿದ್ದು, ಇಂತಹ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ.

ಹೌದು.. ನಗರದ ಪ್ರತಿಷ್ಠಿತ ಎಂಎಸ್ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ಆರಂಭಿಸಿರುವ ಕೋವಿಡ್-19 ನಂತರದ ಆರೈಕೆ ಮತ್ತು ಪುನರ್ವಸತಿ ಕೇಂದ್ರದಲ್ಲಿನ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಕೇವಲ ವಾರದ ಅವಧಿಯಲ್ಲಿ ಇಲ್ಲಿ 50ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದು, ಆಯಾಸ, ಉಸಿರಾಟ, ಸ್ನಾಯು ನೋವು ಮತ್ತು ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳು ಈ ರೋಗಿಗಳಲ್ಲಿ ಕಂಡುಬರುತ್ತಿವೆ.

ಆಸ್ಪತ್ರೆಗೆ ಭೇಟಿ ನೀಡಿದವರ ಪೈಕಿ ಬಹುತೇಕರು ಕೇವಲ ಒಂದು ತಿಂಗಳ ಹಿಂದಷ್ಟೇ ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ 50 ರೋಗಿಗಳಲ್ಲಿ 5 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರೆ, ಇತರರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. 

ಈ ಬಗ್ಗೆ ಮಾತನಾಡಿರುವ ಆರೈಕೆ ಕೇಂದ್ರದ ಮೆಡಿಸಿನ್ ಮತ್ತು ವೈದ್ಯ ಪ್ರಾಧ್ಯಾಪಕರಾದ ಡಾ.ವಿಜಯಶ್ರೀ ತ್ಯಾಗರಾಜ ಅವರು, ಆಸ್ಪತ್ರೆಗೆ ದಾಖಲಾದ ಐದು ರೋಗಿಗಳು 40-50 ವಯಸ್ಸಿನವರಾಗಿದ್ದಾರೆ. ಒಬ್ಬರಿಗೆ ರಕ್ತ ಹೆಪ್ಪುಗಟ್ಟಿ ಹೃದಯ ಸ್ಥಂಭನದ ಸಮಸ್ಯೆಯಾಗಿದ್ದು, ಮತ್ತೊಬ್ಬರಿಗೆ ಪಾರ್ಶ್ವವಾಯು, ಮತ್ತು ಪಲ್ಮನರಿ ಫೈಬ್ರೋಸಿಸ್ ನಂತಹ ಸಮಸ್ಯೆ ಕಾಣಿಸಿಕೊಂಡಿದೆ. ಇನ್ನಿಬ್ಬರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ಇದೇ ವಿಚಾರವಾಗಿ ಮಾತನಾಡಿರುವ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಅಧ್ಯಕ್ಷ ನರೇಶ್ ಶೆಟ್ಟಿ ಅವರು, ಆರೈಕೆ ಕೇಂದ್ರದಲ್ಲಿ ಪ್ರತಿ ರೋಗಿಯ ಕುರಿತು ವಿವರವಾದ ತನಿಖೆ ನಡೆಸಲಾಗುತ್ತದೆ. ಇವರಲ್ಲಿ ಕಾಣಿಸಿಕೊಂಡ ಆರೋಗ್ಯದ ಸಮಸ್ಯೆಗಳು ಕೋವಿಡ್‌ನಿಂದಲೇ ಉಂಟಾಗಿದೆಯೆ ಎಂದು ಅರ್ಥಮಾಡಿಕೊಳ್ಳಲು ಈ ವೈದ್ಯಕೀಯ ಪರೀಕ್ಷೆಗಳು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಅಂತೆಯೇ ಕೋವಿಡ್‌ ವೈರಸ್ ನ ವರ್ತನೆ ಬದಲಾಗುತ್ತಿದ್ದು, ನಾವು ಈ ಬಗ್ಗೆ ನಿಗಾ ಇಡಬೇಕಿದೆ ಎಂದು ಹೇಳಿದರು.

ರಾಮಯ್ಯ ಆಸ್ಪತ್ರೆಯಂತೆಯೇ ಸೆಂಟ್ ಜಾನ್ಸ್ ಆಸ್ಪತ್ರೆ ಕೂಡ ಕೋವಿಡ್-19 ನಂತರದ ಆರೈಕೆ ಮತ್ತು ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಿದೆ. ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಸಂಜೀವ್ ಲೆವಿನ್ ಅವರು ಮಾತನಾಡಿ, ಜನರಿಗೆ ಕೇಂದ್ರದ ಕುರಿತು ಅರಿವಿಲ್ಲದ ಕಾರಣ ಇಲ್ಲಿನ ರೋಗಿಗಳ ಸಂಖ್ಯೆಗಳು ಇನ್ನೂ ಕಡಿಮೆ ಇದೆ. ಆಸ್ಪತ್ರೆಯ ಈ ಕೇಂದ್ರ ದೈಹಿಕ ಮತ್ತು ವೈದ್ಯಕೀಯ ಪುನರ್ವಸತಿ ವಿಭಾಗದ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಇಲ್ಲಿ ಹೃದ್ರೋಗ, ಜನರಲ್ ಮೆಡಿಸಿನ್, ಎದೆ ರೋಗ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕೇಂದ್ರ ಕಳೆದ 10 ದಿನಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಇಲ್ಲಿನ ರೋಗಿಗಳ ಸಂಖ್ಯೆ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ಕೇಂದ್ರಕ್ಕೆ ಮತ್ತಷ್ಟು ರೋಗಿಗಳು ಆಗಮಿಸುವ ನಿರೀಕ್ಷೆ ಇದೆ. 

ಆದರೆ ಸಂಖ್ಯೆಗಳನ್ನು ಇನ್ನೂ ತೆಗೆದುಕೊಳ್ಳಬೇಕಾಗಿಲ್ಲ. ನಾವು ರೋಗಿಗಳನ್ನು ತಪಾಸಣೆಗಾಗಿ ಕರೆಯುತ್ತಿದ್ದೇವೆ, ”ಎಂದು ಅವರು ಹೇಳಿದರು.“ ಹೆಚ್ಚಿನ ಸಂದರ್ಭಗಳಲ್ಲಿ ವ್ಯಾಯಾಮ ಅಸಹಿಷ್ಣುತೆ ಮತ್ತು ಮೈಯಾಲ್ಜಿಯಾಗಳು ನೋವು ಮತ್ತು ಕೀಲು ನೋವು ಮತ್ತು ಶ್ವಾಸಕೋಶದ ಅಸಮರ್ಪಕ ಕಾರ್ಯಗಳಾಗಿವೆ. ವಾತಾಯನ ಮೂಲಕ ಹೋದವರು ಕ್ರಿಟಿಕಲ್ ಕೇರ್ ಸಿಂಡ್ರೋಮ್ ಅನ್ನು ತೋರಿಸುತ್ತಿದ್ದಾರೆ. ಈ ರೋಗಲಕ್ಷಣಗಳನ್ನು ವರದಿ ಮಾಡುವ ರೋಗಿಗಳ ಕಾಲಮಿತಿಯು ಎರಡು ವಾರಗಳಿಂದ ಮೂರು ತಿಂಗಳವರೆಗೆ ಇರುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com