ರಾಗಿಣಿ, ಸಂಜನಾ ಗೊತ್ತು, ಆದರೆ ಡ್ರಗ್ಸ್ ಬಗ್ಗೆ ಗೊತ್ತಿಲ್ಲ: ಫ್ಯಾಷನ್ ಡಿಸೈನರ್ ರಮೇಶ್ ಡೆಂಬ್ಲ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ-ನಟಿಯರ ನಂತರ ಸಿಸಿಬಿ ಪೊಲೀಸರು ಫ್ಯಾಷನ್ ಡಿಸೈನರ್ ರಮೇಶ್ ಡೆಂಬ್ಲ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ರಮೇಶ್ ಡೆಂಬ್ಲಾ
ರಮೇಶ್ ಡೆಂಬ್ಲಾ
Updated on

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ-ನಟಿಯರ ನಂತರ ಸಿಸಿಬಿ ಪೊಲೀಸರು ಫ್ಯಾಷನ್ ಡಿಸೈನರ್ ರಮೇಶ್ ಡೆಂಬ್ಲ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣದ ಆರೋಪಿಗಳ ಜೊತೆ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮಾಹಿತಿ ಮೇರೆಗೆ ರಮೇಶ್‌ಗೆ ಶುಕ್ರವಾರ ವಷ್ಟೇ ನೋಟಿಸ್ ನೀಡಿದ್ದರು. ಸಿಸಿಬಿ ಕಚೇರಿಗೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಬಂದ ರಮೇಶ್ ಅವರಿಂದ ಸಿಸಿಬಿಯ ಇಬ್ಬರು ಇನ್‌ಸ್ಪೆಕ್ಟರ್‌ಗಳು ಹೇಳಿಕೆ ಪಡೆದುಕೊಂಡರು. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ರಮೇಶ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ಗೊಳಪಡಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ನಾನು ಹೆಸರು ಮಾಡಿದ್ದೇನೆ. ಸ್ಯಾಂಡಲ್‌ ವುಡ್ ಹಾಗೂ ಬಾಲಿವುಡ್‌ನ ಹಲವು ನಟ–ನಟಿಯರು ನನಗೆ ಆತ್ಮೀಯರು. ಕನ್ನಡದ ಕೆಲ ಜನಪ್ರಿಯ ನಟರು, ಆಗಾಗ ನನ್ನ ಮನೆಗೂ ಬಂದು ಹೋಗುತ್ತಾರೆ. 

ಇದುವರೆಗೂ ಯಾವುದೇ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡಿಲ್ಲ. ಡ್ರಗ್ಸ್ ಅಭ್ಯಾಸ ನನಗಿಲ್ಲ. ನಾನು ಭಾಗವಹಿಸಿದ್ದ ಪಾರ್ಟಿಗಳಲ್ಲಿ ತೆರೆ ಮರೆಯಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಬಗ್ಗೆಯೂ ನನಗೆ ಮಾಹಿತಿ ಇಲ್ಲ’  ಡ್ರಗ್ ತೆಗೆದುಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ, ‘ನನ್ನದೇ ವಸ್ತ್ರವಿನ್ಯಾಸದ  ಸಂಸ್ಥೆ ಇದೆ. ಬೆಂಗಳೂರು ಫ್ಯಾಷನ್ ಶೋ ಸೇರಿ ದಂತೆ ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತೇನೆ. ನಟಿಯರಾದ ರಾಗಿಣಿ ಸಂಜನಾ ಮತ್ತು ಆದಿತ್ಯ ನನ್ನು ಆಪ್ತ ಸ್ನೇಹಿತರು, ಆದರೆ ನನಗೆ ಗೊತ್ತು ಆದರೆ ಡ್ರಗ್ಸ್ ಬಗ್ಗೆ ತಿಳಿದಿಲ್ಲ ಎಂದು
ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com