ಕೊರೋನಾ ಭೀತಿ: ಮಾಸ್ಕ್'ಗಳಿಗಾಗಿ ಎಲ್ಲೆಡೆ ಹಾಹಾಕಾರ, ಮಾಸ್ಕ್ ತಯಾರಿಸಿ ಜನರಿಗೆ ಉಚಿತವಾಗಿ ನೀಡುತ್ತಿರುವ ದಂಪತಿಗಳು

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲೆಡೆ ಮಾಸ್ಕ್ ಗಳಿಗಾಗಿ ಹಾಹಾಕಾರ ಶುರುವಾಗಿದ್ದು, ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಅಂಗಡಿಗಳ ಮಾಲೀಕರು ದುಪ್ಪಟ್ಟು ಬೆಲೆಗಳಿಗೆ ಮಾಸ್ಕ್ ಗಳನ್ನು ಮಾರಾಟ ಮಾಡಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಎಲ್ಲಾ ಬೆಳವಣಿಗೆಗಳ ನಡುವಲ್ಲೇ ನಗರದ ದಂಪತಿಗಳೇ...
ಕೊರೋನಾ ಭೀತಿ: ಮಾಸ್ಕ್'ಗಳಿಗಾಗಿ ಎಲ್ಲೆಡೆ ಹಾಹಾಕಾರ, ಮಾಸ್ಕ್ ತಯಾರಿಸಿ ಜನರಿಗೆ ಉಚಿತವಾಗಿ ನೀಡುತ್ತಿರುವ ದಂಪತಿಗಳು

ಬಟ್ಟೆ ಅಂಗಡಿಯನ್ನೇ ಮಾಸ್ಕ್ ತಯಾರಿಕಾ ಘಟಕವಾಗಿಸಿ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗುತ್ತಿರುವ ದಂಪತಿಗಳು

ಬೆಂಗಳೂರು: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲೆಡೆ ಮಾಸ್ಕ್ ಗಳಿಗಾಗಿ ಹಾಹಾಕಾರ ಶುರುವಾಗಿದ್ದು, ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಅಂಗಡಿಗಳ ಮಾಲೀಕರು ದುಪ್ಪಟ್ಟು ಬೆಲೆಗಳಿಗೆ ಮಾಸ್ಕ್ ಗಳನ್ನು ಮಾರಾಟ ಮಾಡಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಎಲ್ಲಾ ಬೆಳವಣಿಗೆಗಳ ನಡುವಲ್ಲೇ ನಗರದ ದಂಪತಿಗಳೇ ಸ್ವಯಂಪ್ರೇರಿತರಾಗಿ ಮಾಸ್ಕ್ ಗಳನ್ನು ತಯಾರಿಸಿ ಉಚಿತವಾಗಿ ನೀಡುವ ಮೂಲಕ ಜನರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. 

ತಮ್ಮ ಬಟ್ಟೆ ಅಂಗಡಿಯನ್ನು ಮಾಸ್ಕ್ ತಯಾರಿಸುವ ಘಟಕವಾಗಿರುವ ದಂಪತಿಗಳು, ಈ ವರೆಗೂ ಸುಮಾರು 7000 ಮಾಸ್ಕ್ ಗಳನ್ನು ತಯಾರಿಸಿ ಉಚಿತವಾಗಿ ಜನರಿಗೆ ನೀಡಿದ್ದಾರೆ. 

ಶಾರದಾ ಡಿಸೈನ್ ಸ್ಟುಡಿಯೋ ಎಂಬ ಅಂಗಡಿಯನ್ನು ಮಾಸ್ಕ್ ತಯಾರಿಕಾ ಘಟಕವಾಗಿರುವ ಸಂಜಯ್ ಅಗರ್ವಾಲ್ (42) ಹಾಗೂ ವಿನೀತಾ ಅಗರ್ವಾಲ್ (38) ಎಂಬ ದಂಪತಿಗಳು, ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ನೆರವಗುತ್ತಿದ್ದಾರೆ. 

ಟೈಲರ್ ಆರ್ಡರ್ ಗಳನ್ನು ಸಂಪೂರ್ಣವಾಗಿ ನಿಲ್ಲಿಸಿರುವ ದಂಪತಿಗಳು ಮಾಸ್ಕ್ ತಯಾರಿಸುವ ಕೆಲಸವನ್ನು ಶುರು ಮಾಡಿದ್ದಾರೆ. 

ಕೊರೋನಾ ವೈರಸ್ ಸೋಂಕು ಹರಡುತ್ತಿದ್ದಂತೆಯೇ ಜನರು ಮಾಸ್ಕ್ ಧರಿಸಬೇಕೆಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು. ಈ ವೇಳೆ ನಾನು ಮತ್ತು ನನ್ನ ಪತ್ನಿ ಮಾಸ್ಕ್ ತೆಗೆದುಕೊಳ್ಳುವ ಸಲುವಾಗಿ ಫಾರ್ಮಸಿಗೆ ತೆರಳಿದ್ದೆ. ಈ ವೇಳೆ ಅಂಗಡಿಯವರನ್ನು ಮಾಸ್ಕ್ ಗಳು ಔಟ್ ಆಫ್ ಸ್ಟಾಕ್ ಎಂದು ಹೇಳಿದ್ದ. ಅಲ್ಲದೆ ರೂ.20 ಇದ್ದ ಮಾಸ್ಕ್ ಗಳನ್ನು ರೂ.200ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಮಾಸ್ಕ್ ಗಳನ್ನು ನಾವೇ ತಯಾರಿಸಲು ಆರಂಭಿಸಿದ್ದೆವು. 

ದುಡ್ಡಿದ್ದವರು ಅಷ್ಟು ದುಡ್ಡುಕೊಟ್ಟು ಮಾಸ್ಕ್ ಖರೀದಿಸಬಹುದು. ಆದರೆ, ಬಡವರ ಕತೆಯೇನು? ಅವರ ಸುರಕ್ಷತೆ ಕೂಡ ಮುಖ್ಯವೇ ಇಲ್ಲವೇ. ಹೀಗಾಗಿ ಮಾಸ್ಕ್ ತಯಾರಿಸಲು ನಾವು ನಿರ್ಧಾರ ಕೈಗೊಂಡಿದ್ದೆವು. ಬಡವರಿಗಾಗಿ ಹಾಗೂ ಪೊಲಿಸ್ ಸಿಬ್ಬಂದಿಗಳಿಗಾಗಿ ನಾವು ಮಾಸ್ಕ್ ಗಳನ್ನು ತಯಾರಿಸುತ್ತಿದ್ದೇವೆ. ಆಸ್ಪತ್ರೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಈಗಾಗಲೇ ಮಾಸ್ಕ್ ಗಳನ್ನು ವಿತರಿಸುತ್ತಿದ್ದೇವೆ ಅಂಗಡಿಯಲ್ಲಿ ಇಬ್ಬರು ಸಹಾಯಕರಿದ್ದು, ಎಲ್ಲರೂ ಸೇರಿ ದಿನಕ್ಕೆ 600-700 ಮಾಸ್ಕ್ ಗಳನ್ನು ತಯಾರಿಸುತ್ತಿದ್ದೇವೆ. ಪ್ರತೀ ಮಾಸ್ಕ್ ತಯಾರಿಕೆಗೆ ರೂ.16 ವೆಚ್ಚ ಬೀಳುತ್ತದೆ. ಅಂಗಡಿಯಲ್ಲಿ ಈಗಾಗಲೇ ಸಾಕಷ್ಟು ಬಟ್ಟೆಗಳಿದ್ದು, ಅದನ್ನೇ ಬಳಸಿಕೊಂಡು ಮಾಸ್ಕ್ ತಯಾರಿಸುತ್ತಿದ್ದೇವೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಕೆಲಸ ಮಾಡುತ್ತೇವೆ. ಈ ಮಾಸ್ಕ್ ಗಳನ್ನು ತೊಳೆಯಬಹುದಾಗಿದ್ದು, ಮೂರು ತಿಂಗಳ ಕಾಲ ಬಳಕೆ ಮಾಡಬಹುದು ಎಂದು ದಂಪತಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com