ಮೊಬೈಲ್ ಸ್ಯಾನಿಟೈಸರ್ ಬಸ್ ‘ಸಾರಿಗೆ ಸಂಜೀವಿನಿ’ಗೆ ಕೆಎಸ್ ಆರ್ ಟಿಸಿ ಚಾಲನೆ

ದೇಶಾದ್ಯಂತ ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಸರ್ಕಾರದ ವಿವಿಧ ಇಲಾಖೆಗಳು ತಮ್ಮದೇ ಆದ ರೀತಿಯಲ್ಲಿ ವೈರಸ್ ನಿರ್ವಹಣೆಯಲ್ಲಿ ಸರ್ಕಾರಕ್ಕೆ ಸಾಥ್ ನೀಡುತ್ತಿವೆ, ಈ ಪಟ್ಟಿಗೆ ಇದೀಗ ರಾಜ್ಯ ರಸ್ತೆ ಸಾರಿಗೆ ನಿಗಮ ಕೂಡ ಸೇರಿದ್ದು, ಕೆಎಸ್ ಆರ್  ಟಿಸಿ ಬಸ್ ಅನ್ನೇ ಮೊಬೈಲ್ ಸ್ಯಾನಿಟೈಸರ್ ಆಗಿ ಪರಿವರ್ತನೆ ಮಾಡಿದೆ.
ಸಾರಿಗೆ ಸಂಜೀವಿನಿ-ಮೊಬೈಲ್ ಸ್ಯಾನಿಟೈಸರ್ ಬಸ್
ಸಾರಿಗೆ ಸಂಜೀವಿನಿ-ಮೊಬೈಲ್ ಸ್ಯಾನಿಟೈಸರ್ ಬಸ್

ಬೆಂಗಳೂರು: ದೇಶಾದ್ಯಂತ ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಸರ್ಕಾರದ ವಿವಿಧ ಇಲಾಖೆಗಳು ತಮ್ಮದೇ ಆದ ರೀತಿಯಲ್ಲಿ ವೈರಸ್ ನಿರ್ವಹಣೆಯಲ್ಲಿ ಸರ್ಕಾರಕ್ಕೆ ಸಾಥ್ ನೀಡುತ್ತಿವೆ, ಈ ಪಟ್ಟಿಗೆ ಇದೀಗ ರಾಜ್ಯ ರಸ್ತೆ ಸಾರಿಗೆ ನಿಗಮ ಕೂಡ ಸೇರಿದ್ದು, ಕೆಎಸ್ ಆರ್  ಟಿಸಿ ಬಸ್ ಅನ್ನೇ ಮೊಬೈಲ್ ಸ್ಯಾನಿಟೈಸರ್ ಆಗಿ ಪರಿವರ್ತನೆ ಮಾಡಿದೆ.

ಮೊಬೈಲ್ ಸ್ಯಾನಿಟೈಸರ್ ಬಸ್ ಸಾರಿಗೆ ಸಂಜೀವಿನಿಗೆ ಕೆಎಸ್‍ಆರ್‍ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ್ ಅವರು ಚಾಲನೆ ನೀಡಿದರು. ಕೆಎಸ್‍ಆರ್‍ ಟಿಸಿಯ ಬೆಂಗಳೂರು ಕೇಂದ್ರೀಯ ವಿಭಾಗದ ಬಸ್ ಘಟಕ -2ರಲ್ಲಿ ತಾವೇ ಸ್ಯಾನಿಟೈಸರ್ ಸ್ಪ್ರೇಗೆ ಒಳಗಾಗುವ ಮೂಲಕ  ಶಿವಯೋಗಿ ಕಳಸದ್ ಅವರು ಮೊಬೈಲ್ ಸ್ಯಾನಿಟೈಸರ್ ಬಸ್ ಸಾರಿಗೆ ಸಂಜೀವಿನಿಗೆ ಚಾಲನೆ ನೀಡಿದರು. ಹತ್ತು ವರ್ಷದ ಹಳೆಯ ಬಸ್‍ ಅನ್ನು ಸ್ಯಾನಿಟೈಸರ್ ಬಸ್ ಆಗಿ ಪರಿವರ್ತಿಸಿದ ಕೆಎಸ್‍ಆರ್ ಟಿಸಿ, ಸುಮಾರು 20 ಸಾವಿರ ವೆಚ್ಚದಲ್ಲಿ ಅನುಪಯುಕ್ತ ಬಸ್‍ ಅನ್ನು ಪುನರ್ ಮೊಬೈಲ್  ಸ್ಯಾನಿಟೈಸರ್ ಆಗಿ ನವೀಕರಿಸಿದೆ.  

ಸಾರ್ವಜನಿಕರ ಅನುಕೂಲಕ್ಕಾಗಿ ಇಂದಿನಿಂದಲೇ ಬೆಂಗಳೂರಿನಲ್ಲಿ ಸ್ಯಾನಿಟೈಸರ್ ಬಸ್ ಸಂಚರಿಸಲಿದ್ದು, ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳ ಡಿಪೋಗಳಲ್ಲಿ ಸ್ಕ್ರ್ಯಾಪ್ ಬಸ್‍ಗಳನ್ನು ಸ್ಯಾನಿಟೈಸರ್ ಬಸ್ ಆಗಿ ಪರಿವರ್ತಿಸಲಾಗುವುದು. ಬಸ್ ಮುಂಭಾಗ ಹತ್ತಿ ಹಿಂಭಾಗ ಇಳಿದರೆ  ಸಂಪೂರ್ಣವಾಗಿ ದೇಹಕ್ಕೆ ವೈರಾಣು ನಿರೋಧಕ ದ್ರಾವಣ ಸಿಂಪಡಣೆ ಆಗಲಿದೆ. ಈ ಮೂಲಕ ಕೊರೊನಾ ಸೋಂಕು ನಿವಾರಣೆಗೆ ಮುಂಜಾಗ್ರತಾ ಕ್ರಮದ ಮತ್ತೊಂದು ಉಪಕ್ರಮ ಇದಾಗಿದೆ. ಬಸ್ ನಿಲ್ದಾಣ ಮತ್ತು ಘಟಕಗಳಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು (ಬಸ್ ಸಂಚಾರ  ಇಲ್ಲದಿರುವುದರಿಂದ) ಓಡಾಟ ಇಲ್ಲದಿರುವುದರಿಂದ, ಬೆಂಗಳೂರು ನಗರದಲ್ಲಿ ಅವಶ್ಯಕ ಸೇವೆ ಸಲ್ಲಿಸುತ್ತಿರುವ ಪೊಲೀಸ್ , ಮೆಡಿಕಲ್, ಪೌರ ಸಿಬ್ಬಂದಿಗಳ ಅನುಕೂಲಕ್ಕಾಗಿ ಈ ಬಸ್ ಸಂಚರಿಸಲಿದೆ ಎಂದು ಕೆಎಸ್ ಆರ್ ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ನಿರ್ದೇಶಕರಾದ (ಭದ್ರತಾ ಜಾಗೃತ) ಡಾ. ರಾಮ್ ನಿವಾಸ್ ಸಪಟ್, (ಸಿಬ್ಬಂದಿ ಪರಿಸರ) ಕವಿತಾ ಎಸ್.ಮನ್ನಿಕೇರಿ, ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com