ಎಚ್ ಡಿಕೆ ಅವರದ್ದು ದೊಡ್ಡ ಕುಟುಂಬ, ಆದರೂ ನಿಖಿಲ್ ವಿವಾಹ ಸರಳವಾಗಿ ನಡೆದಿದೆ: ಸಿಎಂ ಬಿಎಸ್ ಯಡಿಯೂರಪ್ಪ

ಎಚ್ ಡಿ ಕುಮಾರಸ್ವಾಮಿ ಅವರದ್ದು ದೊಡ್ಡ ಕುಟುಂಬ.. ಆದರೆ ನಿಖಿಲ್ ಮತ್ತು ರೇವತಿ ವಿವಾಹ ಸರಳವಾಗಿ ನಡೆದಿದೆ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

Published: 18th April 2020 04:47 PM  |   Last Updated: 18th April 2020 04:47 PM   |  A+A-


CM BS Yeddyurappa on Nikhil Marraige

ಸಿಎಂ ಬಿಎಸ್ ವೈ ಮತ್ತು ನಿಖಿಲ್ ವಿವಾಹ

Posted By : Srinivasamurthy VN
Source : ANI

ಬೆಂಗಳೂರು: ಎಚ್ ಡಿ ಕುಮಾರಸ್ವಾಮಿ ಅವರದ್ದು ದೊಡ್ಡ ಕುಟುಂಬ.. ಆದರೆ ನಿಖಿಲ್ ಮತ್ತು ರೇವತಿ ವಿವಾಹ ಸರಳವಾಗಿ ನಡೆದಿದೆ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಏಪ್ರಿಲ್ 20ರ ಬಳಿಕ ರಾಜ್ಯದಲ್ಲಿ ಹೇರಲಾಗಿರುವ ಲಾಕ್ ಡೌನ್ ವೇಳೆ ಯಾವೆಲ್ಲಾ ಕ್ಷೇತ್ರದಲ್ಲಿ ವಿನಾಯಿತಿ ನೀಡಬೇಕು ಎಂಬ ವಿಚಾರದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದರು. ಈ ವೇಳೆ ಸುದ್ದಿಗಾರರೊಬ್ಬರು ನಿಖಿಲ್  ಕುಮಾರಸ್ವಾಮಿ-ರೇವತಿ ವಿವಾಹ ವಿಚಾರ ಪ್ರಸ್ತಾಪಿಸಿ ವಿವಾಹದ ವೇಳೆ ಲಾಕ್ ಡೌನ್ ನಿಯಮ ಉಲ್ಲಂಘನೆ ಕುರಿತು ಪ್ರಶ್ನಿಸಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಮತ್ತು ದೇವೇಗೌಡರದ್ದು ದೊಡ್ಡ ಕುಟುಂಬ. ಆದರೂ ತುಂಬಾ  ಸರಳವಾಗಿ ವಿವಾಹ ನಡೆಸಿದ್ದಾರೆ. ವಿವಾಹದ ವೇಳೆ ಕಾನೂನು ಉಲ್ಲಂಘನೆಯಾಗಿಲ್ಲ. ಕಾನೂನಿನಡಿಯಲ್ಲೇ ವಿವಾಹ ಜರುಗಿದ್ದು, ಈ ಬಗ್ಗೆ ಅನಗತ್ಯ ಚರ್ಚೆ ಬೇಡ. ನೂತನ ವಧು-ವರರಿಗೆ ನಾನು ಶುಭಾಶಯ ಕೋರುತ್ತೇನೆ ಎಂದು ಹೇಳಿದರು.

ಅಂತೆಯೇ ಪಬ್, ಬಾರ್, ಹೋಟೆಲ್, ಮಾಲ್ ಯಾವುದೂ ಇರಲ್ಲ. ವಾಣಿಜ್ಯ ಉದ್ದೇಶದ ಶಾಪ್ ಓಪನ್ ಇರಲ್ಲ. ಅಲ್ಲದೇ ಬಸ್‍ಗಳ ಸಂಚಾರ ಇರಲ್ಲ. ಆದರೆ ಕಂಪನಿಗಳ ಬಸ್‍ಗಳು ಓಡಾಟ ಮಾಡಬಹುದು. ಲಾಕ್‍ಡೌನ್ ಮುಗಿಯುವ ಮೇ 3ರ ತನಕ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ  ಮಾಡಲಾಗಿದೆ. ಹೀಗಾಗಿ ಮೇ 3ರ ನಂತರ ಮದ್ಯ ಮಾರಾಟಕ್ಕೆ ತೀರ್ಮಾನ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದರು.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp