ಕ್ವಾರಂಟೈನ್ ಮಾಡಲು ರಾತ್ರಿ ಏಕೆ ಹೋದ್ರು, ಬೆಳಗ್ಗೆ ಬರಬೇಕಿತ್ತು: ಶಾಸಕ ಜಮೀರ್ ಅಹ್ಮದ್ ಖಾನ್

ಕೊರೋನಾ ವೈರಸ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಪೊಲೀಸರು ರಾತ್ರಿ ಏಕೆ ಪಾದರಾಯನಪುರಕ್ಕೆ ಹೋದ್ರು.. ಬೆಳಗ್ಗೆ ಬರಬೇಕಿತ್ತು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (ಸಂಗ್ರಹ ಚಿತ್ರ)
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (ಸಂಗ್ರಹ ಚಿತ್ರ)

ಬೆಂಗಳೂರು: ಕೊರೋನಾ ವೈರಸ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಪೊಲೀಸರು ರಾತ್ರಿ ಏಕೆ ಪಾದರಾಯನಪುರಕ್ಕೆ ಹೋದ್ರು.. ಬೆಳಗ್ಗೆ ಬರಬೇಕಿತ್ತು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಮಂದಿಯನ್ನು ಕ್ವಾರಂಟೈನ್ ಮಾಡಲು ಹೋಗಿದ್ದ ಪೊಲೀಸರು, ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಜಗಜೀವನ ರಾಂ ನಗರ ಪೊಲೀಸ್  ಠಾಣೆಗೆ ಆಗಮಿಸಿದ್ದ ಜಮೀರ್ ಅಹ್ಮದ್ ಖಾನ್ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ 'ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿ ಸರಿಯಲ್ಲ. ಈ ಸಂಬಂಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಇಲ್ಲಿನ ಜನರಲ್ಲಿ ಭಯವಿದ್ದು, ಒಟ್ಟಿಗೇ 57  ಮಂದಿಯನ್ನು ಕರೆದುಕೊಂಡು ಹೋಗಲು ಪೊಲೀಸರು ಮುಂದಾದಾಗ ಅವರು ಈ ರೀತಿ ನಡೆದುಕೊಂಡಿದ್ದಾರೆ. ಅದರೆ ಅದು ಸರಿಯಲ್ಲ.'

ನಾನು ಈ ಹಿಂದೆಯೇ ಅಧಿಕಾರಿಗಳಿಗೆ ಹೇಳಿದ್ದೆ.. ರಾತ್ರಿ ವೇಳೆ ಬೇಡ.. ಹಗಲಿನಲ್ಲಿ ಕ್ವಾರಂಟೈನ್ ಪ್ರಕ್ರಿಯೆ ಮಾಡಿ ಎಂದು ಹೇಳಿದ್ದೆ. ಆದರೆ ಸಿಬ್ಬಂದಿಗಳಿಗೆ ರೂಮ್ ದೊರೆಯುವುದು ಲೇಟಾಗಿದೆ. ಹೀಗಾಗಿ ಅವರು ಸಂಜೆ ಸಮಯದಲ್ಲಿ ಬಂದಿದ್ದಾರೆ. ಬೆಳಗ್ಗೆ ಕ್ವಾರಂಟೈನ್ ಮಾಡಬೇಕಿತ್ತು  ಎಂದು ಹೇಳಿದರು. ಕೊರೋನಾ ಶಂಕಿತರನ್ನು ಕರೆದುಕೊಂಡು ಹೋಗುವ ಮುನ್ನ ನನ್ನನ್ನು ಕೇಳಿ ಬೇಕಿತ್ತು. ಡೇ ಟೈಮ್ ನಲ್ಲಿ ಶಂಕಿತರನ್ನು ಕರೆದುಕೊಂಡು ಹೋಗುವಂತೆ ಕಮಿಷನರ್ ಗೆ ಸಹ ಹೇಳಿದ್ದೆ. ರಾತ್ರಿ ಹೋಗುವ ಅಗತ್ಯವೇನಿತ್ತು? ಬಿಬಿಎಂಪಿ ಕಮಿಷನರ್ ಅನಿಲ್ ಜೊತೆ ಸಹ ಮಾತನಾಡಿದ್ದೇನೆ. ಭಾನುವಾರ ಬೆಳಗ್ಗೆಯಿಂದ ನನ್ನ ಪಿಎ ಕಾಯ್ತಾ ಕುಳಿತಿದ್ದರು. ಹೋಟೆಲ್ ಸಿಗದ ಹಿನ್ನೆಲೆಯಲ್ಲಿ ರಾತ್ರಿ ಹೋಗಿದ್ದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ನಮಗೆ ಇಲ್ಲಿಯೇ ಚಿಕಿತ್ಸೆ ನೀಡಿ ಎಂದು ಜನರು ಒತ್ತಾಯಿಸಿದ್ದಾರೆ. ಎಲ್ಲರಿಗೂ ತಿಳುವಳಿಕೆ ಹೇಳಿ ಸೋಂಕು ಶಂಕಿತರನ್ನು ಕರೆದುಕೊಂಡು ಹೋಗುವ ಬದಲು ಮನೆಯ ಮುಂದೆ ವಾಹನ ತೆಗೆದುಕೊಂಡು ನಿಂತಿದ್ದರಿಂದ ಈ ಗಲಾಟೆ ನಡೆದಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ತಾವು ಯಾರನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಹೇಳಿದ ಜಮೀರ್ ಅಹ್ಮದ್ ಖಾನ್, ಈ ಹಿಂದೆ ಟಿಪ್ಪು ನಗರದಲ್ಲಿ ನಾನೇ ಮನೆ ಮನೆಗೆ ತೆರಳಿ ಸೋಂಕಿತರ ಸಂಪರ್ಕಕ್ಕೆ ಬಂದವರು ಮಾಹಿತಿ ನೀಡಿ ಎಂದು ಕೇಳಿದ್ದೆ. ವಾಟ್ಸಪ್ ನಲ್ಲೂ ಮನವಿ ಮಾಡಿದ್ದೆ  ಆಗ 90 ಮಂದಿ ಸ್ವಯಂ ಪ್ರೇರಿತರಾಗಿ ಬಂದು ಕ್ವಾರಂಟೈನ್ ಆದರು. ಅದೇ ರೀತಿಯ ಜಾಗೃತಿ ಇಲ್ಲೂ ಆಗಬೇಕಿತ್ತು. ನಾನು ಇಲ್ಲಿ ಯಾರ ಬೆನ್ನಿಗೂ ನಿಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳ ವಿರುದ್ಧವೇ ಗರಂ ಆಗಿ ಸುದ್ದಿಗೊಷ್ಠಿಯಿಂದ ಹೊರನಡೆದ ಶಾಸಕ
ಇನ್ನು ಸುದ್ದಿಗೋಷ್ಠಿ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೆರಳಿದ ಶಾಸಕ ಜಮೀರ್ ಅಹ್ಮದ್ ಖಾನ್ ಎರಡು ಬಾರಿ ಸುದ್ದಿಗೊಷ್ಠಿಯಿಂದ ಹೊರನಡೆದ ಘಟನೆ ನಡೆಯಿತು. ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದರೆ ನಾನೇ ಖುದ್ಧು ಬಂದು ಅವರ ಮನವೊಲಿಸಿ ಕಳುಹಿಸಿಕೊಡುತ್ತಿದ್ದೆ. ಇದು  ಸೂಕ್ಷ್ಮವಿಚಾರವಾಗಿದ್ದು ಇದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕರ್ತವ್ಯ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದರು.

Related Article

ಪಾದರಾಯನಪುರ: ದುಷ್ಕೃತ್ಯದಲ್ಲಿ ತೊಡಗಿದ್ದವರನ್ನು ಗುರುತಿಸಿ ಕಠಿಣ ಶಿಕ್ಷೆಗೊಳಪಡಿಸಿ; ಸಿದ್ದರಾಮಯ್ಯ ಒತ್ತಾಯ

ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ: 59 ಜನರ ಬಂಧನ, 5 ಎಫ್ಐಆರ್, ಘಟನಾ ಸ್ಥಳಕ್ಕೆ ಗೃಹ ಸಚಿವರ ಭೇಟಿ

ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ 'ಬಲಿ' ಹಾಕಬೇಕು: ಎಚ್ ಡಿ ಕುಮಾರಸ್ವಾಮಿ

ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ: ಘಟನೆ ಖಂಡಿಸಿದ ರಾಜಕೀಯ ನಾಯಕರು

ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣ: ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಹೇಳಿದ್ದೇನು ಗೊತ್ತಾ?

ಪಾದರಾಯನಾಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ; 54ಕ್ಕೂ ಹೆಚ್ಚು ಮಂದಿ ವಶಕ್ಕೆ, 4 ಎಫ್ ಐಆರ್

ಬೆಂಗಳೂರು: ಕೊರೋನಾ ಹಾಟ್ ಸ್ಪಾಟ್ ಪಾದರಾಯನಪುರದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಕಿತ್ತು ಹಾಕಿ ನೂರಾರು ಮಂದಿ ದಾಂಧಲೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com