ಲಾಕ್ ಡೌನ್ ಮಧ್ಯೆ ರಾಜ್ಯಕ್ಕೆ ಬರಲು ಯತ್ನಿಸಿದ ಕೇರಳ ಶಿಕ್ಷಕಿ: ಪೊಲೀಸ್ ತನಿಖೆ ಆರಂಭ

ಕಟ್ಟುನಿಟ್ಟಾದ ಲಾಕ್‌ಡೌನ್ ಮಧ್ಯೆ ನೆರೆಯ ಕೇರಳದಿಂದ ಕರ್ನಾಟಕ ರಾಜ್ಯಕ್ಕೆ  ಬರಲು ಯತ್ನಿಸಿದ  ಶಾಲಾ ಶಿಕ್ಷಕಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಟ್ಟುನಿಟ್ಟಾದ ಲಾಕ್‌ಡೌನ್ ಮಧ್ಯೆ ನೆರೆಯ ಕೇರಳದಿಂದ ಕರ್ನಾಟಕ ರಾಜ್ಯಕ್ಕೆ  ಬರಲು ಯತ್ನಿಸಿದ  ಶಾಲಾ ಶಿಕ್ಷಕಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ. 

ತಿರುವನಂತಪುರಂನಿಂದ 465 ಕಿಲೋ ಮೀಟರ್ ದೂರದಲ್ಲಿರುವ ವೈನಾಡಿನ ಮುತಾಂಗದವರೆಗೂ ಕಾರಿನಲ್ಲಿ ಪ್ರಯಾಣಿಸಿದ ಮಹಿಳೆ, ಕರ್ನಾಟಕದ ಮೂಲಕ ದೆಹಲಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಪೊಟ್ಟಂ ಕೇಂದ್ರಿಯ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಶಿಕ್ಷಕಿ ಏಪ್ರಿಲ್ 21 ರಂದು ಈ ರೀತಿಯ ಕೆಲಸ ಮಾಡುವ ಮೂಲಕ ಇದೀಗ ಪೊಲೀಸ್ ತನಿಖೆಗೆ ಗುರಿಯಾಗಿದ್ದಾರೆ. 

ಲಾಕ್ ಡೌನ್ ಮಧ್ಯೆ ಸ್ಪಷ್ಟ ಕಾರಣವಿಲ್ಲದೆ  ಅಂತರ ಜಿಲ್ಲೆಗಳಿಗೂ ತೆರಳಲು ಪೊಲೀಸರು ಮತ್ತು ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ, ಅಂತಹದರಲ್ಲಿ  ಅಬಕಾರಿ ಇಲಾಖೆಯ ಅಧಿಕಾರಿಯ ಕಾರಿನಲ್ಲಿ ಈ ಮಹಿಳೆ ವೈನಾಡುವಿನ ಕಲ್ಪೆಟ್ಟಾಗೆ ಬಂದಿದ್ದು, ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದದಾರೆ ಎಂದು ತಿರುವನಂತಪುರಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಆರಂಭಿಸಲಾಗಿದ್ದು, ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ಆ ಮಹಿಳಾ ಶಿಕ್ಷಕಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ವೈನಾಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಇಳಂಗೋ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 

ಕೊಝಿ ಕೋಡುವಿನಿಂದ ಮುತ್ತುಂಗದವರೆಗೂ ಅಬಕಾರಿ ಅಧಿಕಾರಿಯ ಕಾರಿನಲ್ಲಿ ಬಂದಿರುವ ಪ್ರಾಥಮಿಕ ಮಾಹಿತಿ ಇದೆ. ಆ ಮಹಿಳೆ ಪಾಸು ಪಡೆದು ದುರುಪಯೋಗ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. 

ತಮಿಳುನಾಡು, ಕರ್ನಾಟಕ ಗಡಿಯ ಜಿಲ್ಲೆಗಳಲ್ಲಿಯೂ ತೀವ್ರ ರೀತಿಯ ತಪಾಸಣೆ ನಡೆಸಲಾಗುವುದು, ಅಧಿಕೃತ ಕರ್ತವ್ಯದ ನೆಪದಲ್ಲಿ ಜಿಲ್ಲೆಗೆ ಪದೇ ಪದೇ ಪ್ರಯಾಣಿಸಲು ಯಾರಿಗೂ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ವಯಸ್ಸಾದವರಿಗೆ ಔಷಧ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರಗೆ ಹೋದ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆ ಮಹಿಳೆ ಆರೋಪಿಸಿದ್ದಾರೆ. ವೈನಾಡು ಹಾಗೂ ತಿರುವನಂತಪುರಂ ಆರೆಂಜ್ ಬಿ ವಲಯದಲ್ಲಿದ್ದು, ಲಾಕ್ ಡೌನ್ ನಿಯಮಗಳಲ್ಲಿ ಕೆಲ ಸಡಿಲಿಕೆ ಮಾಡಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com