ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕರ್ನಾಟಕದಲ್ಲಿ ಇಂದು ಹೊಸದಾಗಿ 11 ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆ, 207 ಮಂದಿ ಗುಣಮುಖ!

ರಾಜ್ಯದಲ್ಲಿ ಇಂದು ಹೊಸದಾಗಿ 11 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 11 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆಯಾಗಿದೆ. 

ಬೆಳಗ್ಗೆ ಎಂಟು ಪ್ರಕರಣಗಳು ಪತ್ತೆಯಾಗಿದ್ದವು ಇದೀಗ ಬಾಗಲಕೋಟೆಯಲ್ಲಿ 3 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ ಇಂದು ಒಂದೇ ದಿನ 11 ಪ್ರಕರಣಗಳು ಪತ್ತೆಯಾಗಿವೆ. 

ಬೆಳಗ್ಗೆ ಕಲಬುರಗಿಯಲ್ಲಿ 6, ಬೆಂಗಳೂರು ನಗರದಲ್ಲಿ 1 ಮತ್ತು ಗದಗದಲ್ಲಿ ಒಂದು ಪ್ರಕರಣ ಪತ್ತೆಯಾಗಿತ್ತು. ಇದೀಗ ಬಾಗಲಕೋಟೆಯಲ್ಲಿ 3 ಪ್ರಕರಣ ಪತ್ತೆಯಾಗಿವೆ. 

ರೋಗಿ ಸಂಖ್ಯೆ 521 - 20 ಯುವತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ರೋಗಿ ಸಂಖ್ಯೆ 523, 22 ವರ್ಷದ ಯುವಕ. ಇವರಿಬ್ಬರಿಗೂ ರೋಗಿ ಸಂಖ್ಯೆ 381ರ ಸಂಪರ್ಕದಿಂದ ತಲುಗಿದೆ. 

ರೋಗಿ ಸಂಖ್ಯೆ 522 - 11 ವರ್ಷದ ಬಾಲಕ. ಇತನಿಗೆ ರೋಗಿ ಸಂಖ್ಯೆ 456ರಿಂದ ಸೋಂಕು ತಗುಲಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಇಲ್ಲಿಯವರೆಗೂ 20 ಮಂದಿ ಬಲಿಯಾಗಿದ್ದಾರೆ. ಇನ್ನು 207 ಮಂದಿ ಗುಣಮುಖರಾಗಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com