ಕೊರೋನಾ ಸಾಂಕ್ರಾಮಿಕದ ನಡುವೆಯೇ ಚಟುವಟಿಕೆಯತ್ತ ಮರಳಿದ 'ಉಡಾನ್ ವಿಮಾನ ನಿಲ್ದಾಣ'ಗಳು!

ಮಹಾಮಾರಿ ಕೊರೋನಾ ವೈರಸ್ ಜಾಗತಿಕ ವಿಮಾನಯಾನ ಸಂಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದರೂ, ಸ್ಥಳೀಯ ಹಾಗೂ ಸಣ್ಣಪುಟ್ಟ ವಿಮಾನ ನಿಲ್ದಾಣಗಳ ಕಾರ್ಯಚಟುವಟಿಕೆಗಳ ಮೇಲೆ ಅಂತಹ ಪರಿಣಾಮವೇನೂ ಬೀರಿಲ್ಲ ಎಂಬ ಬೆಳವಣಿಗೆಗಳು ಕಂಡು ಬರುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಜಾಗತಿಕ ವಿಮಾನಯಾನ ಸಂಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದರೂ, ಸ್ಥಳೀಯ ಹಾಗೂ ಸಣ್ಣಪುಟ್ಟ ವಿಮಾನ ನಿಲ್ದಾಣಗಳ ಕಾರ್ಯಚಟುವಟಿಕೆಗಳ ಮೇಲೆ ಅಂತಹ ಪರಿಣಾಮವೇನೂ ಬೀರಿಲ್ಲ ಎಂಬ ಬೆಳವಣಿಗೆಗಳು ಕಂಡು ಬರುತ್ತಿವೆ. 

ನಾಗರೀಕ ವಿಮಾನಯಾನ ಸಚಿವಾಲಯದ (ಉಡಾನ್) ದೇಶಿಕ ಸಂಪರ್ಕ ಯೋಜನೆಯಡಿಯಲ್ಲಿ ವಿಮಾನಗಳನ್ನು ಮುನ್ನಡೆಸುವ ಮೂಲಕ ಕಲಬುರಗಿಯ ವಿಮಾನ ನಿಲ್ದಾಣವು ಕೊರೋನಾ ಬಿಕ್ಕಟ್ಟಿಗೆ ಸೆಡ್ಡುಹೊಡೆದಿದೆ. 

ಕಳೆದ ವರ್ಷ ನವೆಂಬರ್ 22 ಕ್ಕೆ ಕಲುಬುರಗಿ ವಿಮಾನ ನಿಲ್ದಾಣವು ತನ್ನ ಕಾರ್ಯವನ್ನು ಆರಂಭಿಸಿತ್ತು. ಪ್ರಸಕ್ತ ಸಾಲಿನ ಜೂ.30ರವರೆಗೂ 17,525 ಮಂದಿ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ. ಪ್ರತೀ ವಿಮಾನದಲ್ಲಿಯೂ ಶೇ.60-80ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಎಎಐ ನೀಡಿರುವ ಅಂಕಿಅಂಶಗಳ ಪ್ರಕಾರ ಮೊದಲ ಲಾಕ್‌ಡೌನ್ ನಂತರ ಕಾರ್ಯಾಚರಣೆಗಳು ಸ್ಥಗಿತಗೊಂಡಿದ್ದರೂ, ವಿಮಾನ ನಿಲ್ದಾಣವು ಇದೀಗ ಉತ್ತಮ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿರ್ದೇಶಕ ಎಸ್ ಜ್ಞಾನೇಶ್ವರ ರಾವ್ ಹೇಳಿದ್ದಾರೆ. 

ಸ್ಟಾಲ್ ಏರ್ ಎರಡು ಪ್ರತ್ಯೇಕ ಮಾರ್ಗಗಳಲ್ಲಿ ಕಲಬುರಗಿ-ಹಿಂಡನ್ (ದೆಹಲಿ), ತಿರುಮಲ ಸಂಚಾರ ಆರಂಭಿಸಲು ನಿರ್ಧರಿಸಿದೆ. ಆದರೆ, ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಯೋಜನೆಯನ್ನು ಮುಂದೂಡಿದೆ. ಆರ್ಥಿಕ ಹಾಟ್'ಸ್ಟಾಟ್ ನಗರಗಳಿಗೆ ತೆರಳಲು ಭಾರೀ ಬೇಡಿಕೆಗಳಿವೆ. ದೂರದ ಜಿಲ್ಲೆಗಳನ್ನು ಸಂಪರ್ಕಿಸಲು ಕರ್ನಾಟಕ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗಷ್ಟೇ ಬೀದರ್ ವಿಮಾನ ನಿಲ್ದಾಣ ತನ್ನ ಕಾರ್ಯಾಚರಣೆಯನ್ನು ಆರಭಿಸಿದೆ ಎಂದು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com