ಪ್ರೆಸ್ಟೀಜ್ ಟೆಕ್ ಪಾರ್ಕ್-3 ಪ್ರಕರಣ: ಹೆಚ್ಚುವರಿ ಶುಲ್ಕ ಮರುಪಾವತಿ ಮಾಡಿ: ಸರ್ಕಾರ 'ಹೈ' ಸೂಚನೆ

ಟೆಕ್ ಪಾರ್ಕ್-3 ಪ್ರಕರಣ: ಹೆಚ್ಚುವರಿ ಶುಲ್ಕ ಮರುಪಾವತಿ ಮಾಡಿ: ಸರ್ಕಾರ 'ಹೈ' ಸೂಚನೆಬೆಂಗಳೂರು: ಪ್ರೆಸ್ಟೀಜ್ ಟೆಕ್ ಪಾರ್ಕ್-3 ಮಾಲೀಕರಿಂದ ಸರ್ಕಾರ ಪಡೆದ ಹೆಚ್ಚುವರಿ ನೋಂದಣಿ ಶುಲ್ಕವನ್ನು ವಾಪಸ್ ಮಾಡುವಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರೆಸ್ಟೀಜ್ ಟೆಕ್ ಪಾರ್ಕ್-3 ಮಾಲೀಕರಿಂದ ಸರ್ಕಾರ ಪಡೆದ ಹೆಚ್ಚುವರಿ ನೋಂದಣಿ ಶುಲ್ಕವನ್ನು ವಾಪಸ್ ಮಾಡುವಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಹೆಚ್ಚುವರಿ ಶುಲ್ಕ ಪಾವತಿ ಸಂಬಂಧ ಪ್ರೆಸ್ಟೀಜ್ ಟೆಕ್ ಪಾರ್ಕ್-3ಗೆ ಸರ್ಕಾರ ನೀಡಿದ್ದ ನೋಟಿಸ್ ಅನ್ನು ವಜಾಗೊಳಿಸಿದ ಹೈಕೋರ್ಟ್, ಈ ಹಿಂದೆ ಪಡೆದಿದ್ದ ಹೆಚ್ಚುವರಿ ನೋಂದಣಿ ಶುಲ್ಕವನ್ನು ವಾಪಸ್ ಮಾಡುವಂತೆ ಆದೇಶ ನೀಡಿದೆ. 

ಬೆಂಗಳೂರಿನ ಅಮಾನೆ ಬೆಳ್ಳಂದೂರು ಖಾನೆ ಗ್ರಾಮದಲ್ಲಿ ಪ್ರೆಸ್ಟೀಜ್ ಸಂಸ್ಥೆ ನಿರ್ಮಿಸಿರುವ ಟೆಕ್ ಪಾರ್ಕ್-3 ವಾಣಿಜ್ಯ ಅಪಾರ್ಟ್ ಮೆಂಟ್ ನ ಮಾಲೀಕರಾದ ಶಾಹನಾಜ್ ಮತ್ತು ಇತರೆ 88 ಮಂದಿ ಮಾಲೀಕರಿಗೆ ಸರ್ಕಾರದ ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆ 2019ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ  ಹೆಚ್ಚುವರಿ ನೋಂದಣಿ ಶುಲ್ಕ ಪಾವತಿ ಮಾಡುವಂತೆ ನೋಟಿಸ್ ನೀಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಅರ್ಜಿದಾರರ ವಾದಕ್ಕೆ ಮನ್ನಣೆ ನೀಡಿ, ಕರ್ನಾಟಕ ನೋಂದಣಿ ಕಾಯ್ದೆ ಸೆಕ್ಷನ್ 45 ಎ(3)ರ  ಅಡಿಯಲ್ಲಿ ನೋಂದಣಿಯಾದ 2 ವರ್ಷಗಳ ಬಳಿಕ ನೋಟಿಸ್ ನೀಡುವಂತಿಲ್ಲ ಎಂದು ಆದೇಶಿಸಿದೆ. 

2015-16ರಲ್ಲೇ ಆಪಾರ್ಟ್ ಮೆಂಟ್ ಗಳ ನೋಂದಣಿಯಾಗಿದ್ದವು ಎನ್ನಲಾಗಿದೆ. ಆದರೆ ಇಲಾಖೆ ಜಿಲ್ಲಾ ರಿಜಿಸ್ಟಾರ್ ಆಪಾರ್ಟ್ ಮೆಂಟ್ ಮಾಲೀಕರಿಗೆ ನೋಟಿಸ್ ನೀಡಿ 8 ವಾರಗಳೊಳಗೆ ಹೆಚ್ಚುವರಿ ನೋಂದಣಿ ಶುಲ್ಕ ಪಾವತಿ ಮಾಡುವಂತೆ ಸೂಚಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com