ರಾಜ್ಯದಲ್ಲಿ ಇಂದು 7,908 ಕೊರೋನಾ ಪತ್ತೆ, ಒಟ್ಟಾರೆ 2.11 ಲಕ್ಷ ಸೋಂಕು, 104 ಮಂದಿ ಬಲಿ!

ಬೆಂಗಳೂರು: ಕರ್ನಾಟಕದಲ್ಲಿ ಇಂದು ಕೊರೋನಾ ರೌದ್ರಾವತಾರ ಮುಂದುವರೆಸಿದ್ದ ಇಂದು ದಾಖಲೆಯ 7,908 ಪ್ರಕರಣ ಪತ್ತೆಯಾಗಿದ್ದು 104 ಮಂದಿ ಬಲಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು: ಕರ್ನಾಟಕದಲ್ಲಿ ಇಂದು ಕೊರೋನಾ ರೌದ್ರಾವತಾರ ಮುಂದುವರೆಸಿದ್ದ ಇಂದು ದಾಖಲೆಯ 7,908 ಪ್ರಕರಣ ಪತ್ತೆಯಾಗಿದ್ದು 104 ಮಂದಿ ಬಲಿಯಾಗಿದ್ದಾರೆ. 

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 7,908 ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,11,108ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು ಇಂದು 104 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 3,717ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಚೇತರಿಕೆ ಪ್ರಮಾಣವು ಹೆಚ್ಚಾಗಿದ್ದು ಇಂದು 5,257 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ 2,11,108 ಕೊರೋನಾ ಪ್ರಕರಣಗಳ ಪೈಕಿ 80,883 ಪ್ರಕರಣಗಳು ಸಕ್ರೀಯವಾಗಿದ್ದು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬೆಂಗಳೂರಿನಲ್ಲಿ ಇಂದು 2,452 ಮಂದಿ ಕೊರೋನಾಗೆ ತುತ್ತಾಗಿದ್ದು ಸೋಂಕಿತರ ಸಂಖ್ಯೆ 84,185ಕ್ಕೆ ಏರಿಕೆಯಾಗಿದೆ. ಇನ್ನು 22 ಮಂದಿ ಮೃತಪಟ್ಟಿದ್ದು ಒಟ್ಟಾರೆ ಸಾವಿನ ಸಂಖ್ಯೆ 1,360ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 35,117 ಸಕ್ರೀಯ ಪ್ರಕರಣಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com