ಸ್ಯಾಂಡಲ್ ವುಡ್ ನ ಪ್ರಖ್ಯಾತ ನಟರು, ಸಂಗೀತಗಾರರಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಮೂವರ ಬಂಧನ

ಇತ್ತೀಚಿಗೆ ರಾಜ್ಯದಲ್ಲಿ  ಮಾದಕ ದ್ರವ್ಯ ಜಾಲವೊಂದರ  ಮೇಲೆ  ದಾಳಿ ಮಾಡಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿಗಳಿಗೆ, ಸ್ಯಾಂಡಲ್ ವುಡ್ ನ ಕೆಲ ಪ್ರಮುಖ ನಟರು ಹಾಗೂ ಸಂಗೀತಗಾರರು ಜಾಲದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. 

Published: 27th August 2020 12:23 PM  |   Last Updated: 27th August 2020 12:23 PM   |  A+A-


Casual_photo

ಸಾಂದರ್ಭಿಕ ಚಿತ್ರ

Posted By : Nagaraja AB
Source : Online Desk

ಬೆಂಗಳೂರು: ಇತ್ತೀಚಿಗೆ ರಾಜ್ಯದಲ್ಲಿ  ಮಾದಕ ದ್ರವ್ಯ ಜಾಲವೊಂದರ  ಮೇಲೆ  ದಾಳಿ ಮಾಡಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿಗಳಿಗೆ,ಸ್ಯಾಂಡಲ್ ವುಡ್ ನ ಕೆಲ ಪ್ರಮುಖ ನಟರು ಹಾಗೂ ಸಂಗೀತಗಾರರು ಜಾಲದಲ್ಲಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. 

ಬೆಂಗಳೂರಿನ ಕಲ್ಯಾಣನಗರದ ಅಪಾರ್ಟ್ ಮೆಂಟ್ ವೊಂದರ ಮೇಲೆ ಆಗಸ್ಟ್ 21 ರಂದು  ದಾಳಿ ನಡೆಸಿದಾಗ 2.20 ಕೋಟಿ ಮೌಲ್ಯದ 145 ಎಂಡಿಎಂಎ ಪಿಲ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಈ ಮಾದಕ ದ್ರವ್ಯ ಪೂರೈಕೆ ಸೂತ್ರದಾರಿ ಮಹಿಳೆಗೆ ಸೇರಿದ ದೊಡ್ಡ ಗುಬ್ಬಿಯಲ್ಲಿನ ಮನೆ ಮೇಲೆ ದಾಳಿ ನಡೆಸಿ 270 ಪಿಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಸಿಬಿ 
ಉಪನಿರ್ದೇಶಕ ಕೆ. ಪಿ. ಎಸ್ ಮಲ್ಹೋತ್ರಾ ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಎಂ. ಅನೂಫ್, ಆರ್. ರವೀಂದ್ರನ್ ಮತ್ತು ಅನಿಕಾ ಎಂಬವರನ್ನು  ಬಂಧಿಸಲಾಗಿದೆ. ವಿಚಾರಣೆಗೆ ಒಳಪಡಿಸಿದಾಗ ಪ್ರಮುಖ ಸಂಗೀತಗಾರರು , ನಟರು, ವಿದ್ಯಾರ್ಥಿಗಳಿಗೆ  ಮಾದಕ ದ್ರವ್ಯ ಪೂರೈಕೆ ಮಾಡುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಇನ್ನು ಹೆಚ್ಚಿನ ಸಂಖ್ಯೆಯ ಜನರನ್ನು ಬಂಧಿಸುವ ಸಾಧ್ಯತೆಯಿರುವುದಾಗಿ ಅವರು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp