ಬೆಂಗಳೂರು: ಬೆಳ್ಳಂಬೆಳಗ್ಗೆ ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್, ಲಗ್ಗೆರೆಯಲ್ಲಿ ಆರೋಪಿ ಬಂಧನ

ಬೆಳ್ಳಂಬೆಳಗ್ಗೆ ಪೊಲೀಸರು ದರೋಡೆಕೋರನ ಮೇಲೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ನಗರದ ಲಗ್ಗೆರೆ ಬಳಿಯ ಕೂಲಿ ನಗರ ಬ್ರಿಡ್ಜ್ ಬಳಿ ನಡೆದಿದೆ.
ಪೊಲೀಸ್ ಗುಂಡಿನ ದಾಳಿ
ಪೊಲೀಸ್ ಗುಂಡಿನ ದಾಳಿ

ಬೆಂಗಳೂರು: ಬೆಳ್ಳಂಬೆಳಗ್ಗೆ ಪೊಲೀಸರು ದರೋಡೆಕೋರನ ಮೇಲೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ನಗರದ ಲಗ್ಗೆರೆ ಬಳಿಯ ಕೂಲಿ ನಗರ ಬ್ರಿಡ್ಜ್ ಬಳಿ ನಡೆದಿದೆ.

ದರೋಡೆಕೋರ ಅನ್ವರ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅನ್ಬನ್, ನ. 26ರಂದು ರಿಂಗ್‌ ರಸ್ತೆ ಬಳಿ ಲಾರಿ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ಸಂಬಂಧ ಚಾಲಕ ನಂದಿನಿ ಲೇಔಟ್  ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.

ನವೆಂಬರ್ 26ರಂದು ರಿಂಗ್‌ ರಸ್ತೆ ಬಳಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿತ್ತು. ಈ ಸಂಬಂಧ ಚಾಲಕ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪ್ರಕರಣ ಸಂಬಂಧ ಆರೋಪಿ ಅನ್ವರ್ ಬಂಧಿಸಲು ಪೊಲೀಸರು ತೆರಳಿದ್ದಾಗ ಈ ಘಟನೆ ನಡೆದಿದೆ.

ಇಂದು ಬೆಳಗ್ಗೆ ಆರೋಪಿ ಅನ್ವರ್​ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಅನ್ಬನ್‌, ಹೆಡ್‌ ಕಾನ್ಸ್‌ಟೇಬಲ್ ಅಭಿಷೇಕ್ ಮೇಲೆ ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಪಿಎಸ್‌ಐ ಜೋಗಾನಂದ್ ಮೇಲೂ ಹಲ್ಲೆಗೆ ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಅನ್ಬನ್‌ ಮೇಲೆ ಪಿಎಸ್‌ಐ ಫೈರಿಂಗ್  ನಡೆಸಿದ್ದಾರೆ. ಗಾಯಾಳು ಹೆಡ್‌ ಕಾನ್ಸ್‌ಟೇಬಲ್, ಆರೋಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

10 ದಿನದಲ್ಲಿ ಬರೋಬ್ಬರಿ 10 ದರೋಡೆ
ಬಂಧಿತ ಅನ್ಬರ್ ಕೇವಲ 10 ದಿನಗಳಲ್ಲಿ 10 ದರೋಡೆ ಮಾಡಿ ಪೊಲೀಸರಿಗೆ ತಲೆನೋವಾಗಿದ್ದ. ಅನ್ಬುನ್ ಮತ್ತು ತಂಡ ಲಾರಿ ಚಾಲಕನೊಬ್ಬನಿಗೆ ಚಾಕು ಇರಿದು 30 ಸಾವಿರ ದೋಚಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com