ಜನವರಿಯಿಂದ 10, 12ನೇ ತರಗತಿ ಆರಂಭಿಸಿ: 2ನೇ ಅಲೆ ಭೀತಿ ನಡುವೆ ಶಾಲೆ ಆರಂಭಕ್ಕೆ ಸಮಿತಿ ಶಿಫಾರಸು

ರಾಜ್ಯದಲ್ಲಿ ಮುಂದಿನ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಆರಂಭವಾಗುವ ಸಾಧ್ಯತೆಗಳಿರುವುದಾಗಿ ಕೋವಿಡ್ ತಾಂತ್ರಿಕ ಸಮಿತಿ ಹೇಳಿದ್ದು, ಈ ಭೀತಿ ನಡುವಲ್ಲೇ ಜನವರಿಯಿಂದಲೇ 10 ಮತ್ತು 12ನೇ ತರಗತಿ ಮಕ್ಕಳಿಗೆ ಶಾಲೆಗಳನ್ನು ಆರಂಭಿಸಬಹುದು. ಬಳಿಕ 9 ಮತ್ತು 11ನೇ ತರಗತಿ ಮಕ್ಕಳಿಕೆ ಶಾಲೆ ಆರಂಭಿಸಬಹುದು ಎಂದು ಶಿಫಾರಸು ಮಾಡಿದೆ. 
ವಿದ್ಯಾಗಮ ಕಲಿಕಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು
ವಿದ್ಯಾಗಮ ಕಲಿಕಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಆರಂಭವಾಗುವ ಸಾಧ್ಯತೆಗಳಿರುವುದಾಗಿ ಕೋವಿಡ್ ತಾಂತ್ರಿಕ ಸಮಿತಿ ಹೇಳಿದ್ದು, ಈ ಭೀತಿ ನಡುವಲ್ಲೇ ಜನವರಿಯಿಂದಲೇ 10 ಮತ್ತು 12ನೇ ತರಗತಿ ಮಕ್ಕಳಿಗೆ ಶಾಲೆಗಳನ್ನು ಆರಂಭಿಸಬಹುದು. ಬಳಿಕ 9 ಮತ್ತು 11ನೇ ತರಗತಿ ಮಕ್ಕಳಿಕೆ ಶಾಲೆ ಆರಂಭಿಸಬಹುದು ಎಂದು ಶಿಫಾರಸು ಮಾಡಿದೆ. 

ಸಮಿತಿಯ ಈ ಶಿಫಾರಸು ಸರ್ಕಾರವನ್ನು ಗೊಂದಲಕ್ಕೊಳಗಾಗುವಂತೆ ಮಾಡಿದೆ. ಕೊರೋನಾ ತಾಂತ್ರಿಕ ಸಮಿತಿ ಈ ಹಿಂದೆ ನೀಡಿದ್ದ ವರದಿ ಆಧರಿಸಿ ನ.23ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಯ ಉನ್ನತಮಟ್ಟದ ಸಭೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಶಾಲೆ ಆರಂಭಿಸದಿರಲು ತೀರ್ಮಾನ ಕೈಗೊಂಡಿತ್ತು. 

ಡಿಸೆಂಬರ್ ಮೂರನೇ ವಾರ ಮತ್ತೆ ಸಭೆ ಸೇರಿ ಕೋವಿಡ್ ತಾಂತ್ರಿಕ ಸಮಿತಿ ನೀಡುವ ಮುಂದಿನ ವರದಿ ಆಧರಿಸಿ ಶಆಲೆ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದರು, ಈಗ ಕೋವಿಡ್ ತಾಂತ್ರಿಕ ಸಮಿತಿ ಮತ್ತೊಂದು ವರದಿ ನೀಡಿ, ಶಾಲೆ ಆರಂಭಕ್ಕೆ ಶಿಫಾರಸು ಮಾಡಿದೆ. 


ಸಮಿತಿಯ ಶಿಫಾರಸುಗಳು ಇಂತಿವೆ...

  • ಫೆಬ್ರವರಿವರೆಗೂ ನಿತ್ಯ 1.25 ಲಕ್ಷ ಪರೀಕ್ಷೆ ನಡೆಸಬೇಕು. 
  • ಹಬ್ಬ, ಹರಿದಿನ, ಧಾರ್ಮಿಕ, ರಾಜಕೀಯ ಇನ್ನಿತರೆ ಯಾವುದೇ ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರುವುದಕ್ಕೆ ನಿರ್ಬಂಧ ಮುಂದುವರೆಸಬೇಕು. 
  • ಜನವರಿ ಮೊದಲ ವಾರದಲ್ಲಿ ಆ್ಯಂಬುಲೆನ್ಸ್, ಕ್ಲಿನಿಕಲ್ ವ್ಯವಸ್ಥೆಗಳಾದ ಐಸಿಯು, ವೆಂಟಿಲೇಟರ್ ಗಳನ್ನು ಸಿದ್ಧವಿಟ್ಟುಕೊಂಡಿರಬೇಕು. 
  • ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಕೋವಿಡ್ 2ನೇ ಅಲೆ ಹರಡುವ ಸಾಧ್ಯತೆಗಳಿರುವುದರಿಂದ ಡಿಸೆಂಬರ್ 26ರಿಂದ ಜನವರಿ 1ರವರೆಗೆ ರಾತ್ರಿ 8 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ವಿಧಿಸಬಬೇಕು. ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಇನ್ನೂ ಸಹಜ ಸ್ಥಿತಿಗೆ ಬಾರದೆ ಇರುವ ಕಾರಣ ರಾತ್ರಿ ಕರ್ಫ್ಯೂ ಹಾಗೂ ಇತರೆ ಭಾಗಗಳಲ್ಲೂ ಇದನ್ನು ವಿಧಿಸಬೇಕಾದ ಅನಿವಾರ್ಯತೆ ಎಂದು ಸಮಿತಿ ಹೇಳಿದೆ. 

ಕೊರೋನಾ 2ನೇ ಅಲೆ ಗುರುತಿಸುವುದು ಹೇಗೆ...? 

  • ಜನವರಿ ಫೆಬ್ರವರಿ ತಿಂಗಳಿನಲ್ಲಿ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಏಳುವ ನಿರೀಕ್ಷೆ ಮಾಡಲಾಗಿದೆ. ಒಂದು ವಾರ ಕಾಲ ಕೋವಿಡ್ ಸೋಂಕು ಪ್ರಕರಣಗಳ ಸರಾಸರಿ ಏರಿಕೆಯನ್ನು ಅವಲೋಕಿಸುವ ಮೂಲಕ ಎರಡನೇ ಅಲೆಯ ಆರಂಭವಾಗಿರುವ ಬಗ್ಗೆ ನಿರ್ಧಾರ ಮಾಡಬಹುದು. ಈ ಬಗ್ಗೆ ಆರೋಗ್ಯ ಇಲಾಖೆ ನಿರಂತರ ಗಮನಹರಿಸುತ್ತಿರಬೇಕು. 
  • 7 ದಿನಗಳ ಸರಾಸರಿ ಸೋಂಕಿನ ಹೆಚ್ಚಳವನ್ನು ಗಮನಿಸಬೇಕು. 
  • ಪರೀಕ್ಷಾ ಮಾದರಿಯಲ್ಲಿ ಯಾವುದೇ ಬದಲಾವಣೆಯಿಲ್ಲದೆ, ತಿಳಿಯದೆಯೇ ಪರೀಕ್ಷೆಯ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚಾಗುತ್ತದೆ. 
  • ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದ್ವಿಗುಣಗೊಳ್ಳುತ್ತದೆ
  • ಕಡಿಮೆ ಸೋಂಕಿನ ಪ್ರಮಾಣ ಕನಿಷ್ಠ ಒಂದು ತಿಂಗಳವರೆಗೆ ಇರುತ್ತದೆ
  • 2-3 ವಾರಗಳಲ್ಲಿ ಕೇಸ್ ಸಂಖ್ಯೆಯಲ್ಲಿ ಸ್ಥಿರವಾಗಿ ಹೆಚ್ಚಳಗೊಳ್ಳಲಿದೆ ಎಂದು ಸಮಿತಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com