ಸಾರಿಗೆ ಸಿಬ್ಬಂದಿ ಮುಷ್ಕರ ಅಂತ್ಯ: ರಸ್ತೆಗಿಳಿದ ಕೆಎಸ್ಆರ್‌ಟಿಸಿ ಬಸ್‌ಗಳು
ಕಳೆದ 3 ದಿನಗಳಿಂದ ನಡೆಸುತ್ತಿದ್ದ ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರ ಅಂತ್ಯಗೊಂಡಿದ್ದು, ಬಸ್ ಸೌಕರ್ಯವಿಲ್ಲದೇ ಹೈರಾಣಾಗಿದ್ದ ಜನ ಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
Published: 13th December 2020 07:11 PM | Last Updated: 13th December 2020 07:11 PM | A+A A-

ಕೆಎಸ್ಆರ್‌ಟಿಸಿ
ಬೆಂಗಳೂರು: ಕಳೆದ 3 ದಿನಗಳಿಂದ ನಡೆಸುತ್ತಿದ್ದ ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರ ಅಂತ್ಯಗೊಂಡಿದ್ದು, ಬಸ್ ಸೌಕರ್ಯವಿಲ್ಲದೇ ಹೈರಾಣಾಗಿದ್ದ ಜನ ಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ಇಡೀ ದಿನ ಸರ್ಕಾರ ನಡೆಸಿದ ಸರಣಿ ಮಾತುಕತೆ ಯಶಸ್ವಿಯಾಗಿದ್ದು, ತಕ್ಷಣವೇ ಬಸ್ ಸಂಚಾರ ಪುನರಾರಂಭಿಸಲು ಸಾರಿಗೆ ಸಿಬ್ಬಂದಿ ಸಂಘಟನೆ ಮುಖಂಡರು ಸಮ್ಮತಿಸಿದ್ದಾರೆ.
ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ವಿವಿಧ ಸಾರಿಗೆ ನೌಕರರ ಸಂಘಟನೆಗಳು ಕಳೆದ ಮೂರು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿದ್ದವು.