ಜನವರಿಯಿಂದ ಶಾಲೆಗಳು ಆರಂಭವಾದರೂ ಹಿಂದಿನಂತೆ ಮಕ್ಕಳಿಗಿಲ್ಲ ಬಿಸಿಯೂಟ!

ರಾಜ್ಯದಲ್ಲಿ ಕೊರೋನಾ ಅಬ್ಬರ ಇಳಿಕೆಯಾಗುತ್ತಿದ್ದು ಈ ನಡುವಲ್ಲೇ ಜನವರಿ 1 ರಿಂದ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ, ಶಾಲೆಗಳು ಪುನರಾರಂಭವಾದರೂ ಹಿಂದಿನಂತೆಯೇ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ಇಳಿಕೆಯಾಗುತ್ತಿದ್ದು ಈ ನಡುವಲ್ಲೇ ಜನವರಿ 1 ರಿಂದ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ, ಶಾಲೆಗಳು ಪುನರಾರಂಭವಾದರೂ ಹಿಂದಿನಂತೆಯೇ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. 

ಬಿಸಿಯೂಟ ಬದಲಿಗೆ ಮಕ್ಕಳೇ ಸ್ವತಃ ಊಟವನ್ನು ತರುವಂತೆ ಸೂಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. 

ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಬಿಸಿಯೂಟ ಬದಲಿಗೆ ರೇಷನ್ ಕಿಟ್ಸ್ ಗಳ ನೀಡುವ ಕಾರ್ಯಕ್ರಮವನ್ನು ಮುಂದುವರೆಸಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. 

ಸಚಿವ ಸುರೇಶ್ ಕುಮಾರ್ ಅವರು ಈ ಕುರಿತು ಮಾತನಾಡಿ, ಈಗಾಗಲೇ ಕೆಲ ವಾರಗಳ ಹಿಂದೆಯೇ ರಾಜ್ಯ ಸರ್ಕಾರ ಬಿಸಿಯೂಟ ಕುರಿತು ಹೈಕೋರ್ಟ್'ಗೆ ಮಾಹಿತಿ ನೀಡಿತ್ತು. ಮಕ್ಕಳ ಮನೆಗಳಿಗೆ ಸರ್ಕಾರ ನೇರವಾಗಿ ರೇಷನ್ ಕಿಟ್ ಗಳನ್ನು ತಲುಪಿಸುತ್ತಿದೆ ಎಂದು ತಿಳಿಸಿತ್ತು. ಜನವರಿಯಿಂದ 10 ಮತ್ತು 12ನೇ ತರಗತಿಗಳು ಪುನರಾರಂಭವಾಗಲಿದ್ದು, 6-9 ನೇ ತರಗತಿ ಮಕ್ಕಳಿಗೆ ವಿದ್ಯಾಗಮವನ್ನು ಮುಂದುವರೆಸಲಾಗುತ್ತದೆ. ಪ್ರತೀನಿತ್ಯ ಮೂರು ಸಮಯಗಳಲ್ಲಿ ತರಗತಿಗಳು ನಡೆಯಲಿವೆ ಎಂದು ಹೇಳಿದ್ದಾರೆ. 

ಭಾಗಶಃ ಶಾಲೆಗಳ ತೆರೆಯುವುದು, ಬಿಸಿಯೂಟದ ಬದಲಿಗೆ ಆಹಾರ ಕಿಟ್ ಗಳನ್ನು ನೀಡುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಆರೋಗ್ಯ ಮತ್ತು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಸರ್ಕಾರಕ್ಕೆ ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಆರಂಭ ಮಾಡುವಂತೆ ಶಿಫಾರಸು ಮಾಡಲಾಗಿದೆ. ಶಾಲೆಗಳು ಕೇವಲ ತರಗತಿಗಳಿಗಷ್ಟೇ ಸೀಮಿತವಾಗಿರಬಾರದು. ಹಾಲು, ಮಧ್ಯಾಹ್ನ, ಪೌಷ್ಟಿಕಾಂಶಗಳ ಆಹಾರ ನೀಡುವುದರ ಕುರಿತಂತೆಯೂ ಗಮನಹರಿಸಬೇಕು ಎಂದು ಶಿಕ್ಷಣ ತಜ್ಞ ನಿರಂಜನಾಧ್ಯ ವಿಪಿಯವರು ಹೇಳಿದ್ದಾರೆ. 

ತರಗತಿಗಳನ್ನು ಸಂಪೂರ್ಣ ದಿನ ನಡೆಸಬೇಕು. ಇಲ್ಲದಿದ್ದಲೆ ಸಾಕಷ್ಟು ಮಕ್ಕಳು ಕಾರ್ಮಿಕರಾಗಿ ಪರಿವರ್ತನೆಗೊಳ್ಳಲಿದ್ದಾರೆ. ಅಪಹರಣ, ಬಾಲ್ಯವಿವಾಹದಂತಹ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಆಹಾರ ಕಿಟ್ ಗಳನ್ನು ನೀಡುವ ಬದಲು ಬಿಸಿಯೂಟ ನೀಡಿದರೇ ಉತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com