ಮನಿ ಲಾಂಡರಿಂಗ್ ಪ್ರಕರಣ: ಬೆಂಗಳೂರು ಮೂಲದ ಸಂಸ್ಥೆಯ 8 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯ ಸುಮಾರು 8 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯ ಸುಮಾರು 8 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಬೆಂಗಳೂರು ಮೂಲದ 'ಅಜ್ಮೇರಾ ಗ್ರೂಪ್ಸ್, ಅದರ ಪಾಲುದಾರರು ಮತ್ತು ಇತರರ ಹೆಸರಿನಲ್ಲಿರುವ ಕೃಷಿ ಭೂಮಿ, ವಸತಿ, 13 ಬ್ಯಾಂಕ್ ಖಾತೆಗಳು ಮತ್ತು ಡಿಮ್ಯಾಟ್ ಖಾತೆಯನ್ನು 'ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ವಿಭಾಗಗಳ ಅಡಿಯಲ್ಲಿ ತನಿಖಾ ಸಂಸ್ಥೆ ತಾತ್ಕಾಲಿಕವಾಗಿ  ಜಪ್ತಿ ಮಾಡಲಾಗಿದೆ. ಅಂತೆಯೇ ಸಂಸ್ಥೆ ಮತ್ತು ಅದರ ಪಾಲುದಾರರಾದ ತಬ್ರೆಜ್ ಪಾಷಾ, ಅಬ್ದುಲ್ ದಸ್ತಗೀರ್, ತಬ್ರೆಜ್ ಉಲ್ಲಾ ಷರೀಫ್, ಸೈಯದ್ ಮುದಾಸೀರ್, ಸೈಯದ್ ಮುತಾಹೀರ್ ಮತ್ತು ಫೈರೋಜ್ ಖಾನ್ ವಿರುದ್ಧ ಎಫ್ ಐಆರ್ ಕೂಡ ದಾಖಲಿಸಲಾಗಿದೆ.

ಅಜ್ಮೇರಾ ಗ್ರೂಪ್ಸ್ ಸಂಸ್ಥೆ ಸುಮಾರು  1,148 ಠೇವಣಿದಾರರಿಂದ 29.17 ಕೋಟಿ ರೂ ನಷ್ಟು ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ್ದು, ಕರ್ನಾಟಕ ಹಣಕಾಸು ಸ್ಥಾಪನೆ ಕಾಯ್ದೆ 2004 (ಕೆಪಿಐಡಿಎಫ್ಇ) ಮತ್ತು 1978 ರ ಬೆಲೆ, ಚಿಟ್ಸ್ ಮತ್ತು ಮನಿ ಸರ್ಕ್ಯುಲೇಟಿಂಗ್ ನಿಷೇಧ ಕಾಯ್ದೆಯ ವಿವಿಧ  ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಇಡಿ, 'ಅಜ್ಮೆರಾ ಗ್ರೂಪ್ಸ್ ಅಕ್ರಮವಾಗಿ 256.06 ಕೋಟಿ ರೂ. ಮೌಲ್ಯದ ಠೇವಣಿಗಳನ್ನು ಹಲವರಿಂದ ಸಂಗ್ರಹಿಸಿದೆ, ಹೆಚ್ಚಿನ ಬಡ್ಡಿದರದ ಭರವಸೆಯೊಂದಿಗೆ (ತಿಂಗಳಿಗೆ ಶೇಕಡಾ 20ರವರೆಗೆ) ಆಮಿಷ ಒಡ್ಡಿ ವಂಚನೆ ಮಾಡಿದೆ. ಸಂಸ್ಥೆ ಘೋಷಣೆ ಮಾಡಿರುವ  ಬಡ್ಡಿದರವು ಯಾವುದೇ ವಿವೇಕಯುತ ರೀತಿಯಲ್ಲಿ ನೀಡಲು ಸಾಧ್ಯವಿಲ್ಲ ಮತ್ತು ಆರೋಪಿತ ಸಂಸ್ಥೆಯು 29.17 ಕೋಟಿ ರೂ. ಠೇವಣಿದಾರರಿಗೆ ಹಿಂದಿರುಗಿಸಲು ವಿಫಲವಾಗಿದ್ದು. ಠೇವಣಿದಾರರಿಂದ ಸಂಗ್ರಹಿಸಿದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗಿದೆ ಎಂದು ಸಂಸ್ಥೆ   ಹೇಳಿಕೊಂಡಿದೆ. ಆದರೆ ಠೇವಣಿದಾರರ ಹಣವನ್ನು ಅಜ್ಮೆರಾ ಗ್ರೂಪ್ಸ್ ಠೇವಣಿದಾರರಿಗೆ ಸಂಬಂಧವಿಲ್ಲದ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ ಮತ್ತು ಸ್ಥಿರ ಮತ್ತು ಚರಾಸ್ತಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ಹೇಳಿದೆ.

ಆರೋಪಿಗಳು ಇಡಿ ಹೊರಡಿಸಿದ ತಾತ್ಕಾಲಿಕ ಆದೇಶದ ವಿರುದ್ಧ ಆರು ತಿಂಗಳೊಳಗೆ ಪಿಎಂಎಲ್‌ಎ ನ್ಯಾಯಾಧೀಶರ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com