ಬೆಂಗಳೂರು: ರೈಲು ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಿಸಿದ ಆರ್‌ಪಿಎಫ್ ಪೇದೆ

ಬೆಂಗಳೂರು ರೈಲ್ವೆ ವಿಭಾಗದ ಗೊಲ್ಲಹಳ್ಳಿ ನಿಲ್ದಾಣದಲ್ಲಿ ರೈಲ್ವೆ ಹಳಿ ಮೇಲೆ ಸಾಯಲು ಯತ್ನಿಸಿದ ಮಹಿಳೆಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪೇದೆ ರಕ್ಷಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗದ ಗೊಲ್ಲಹಳ್ಳಿ ನಿಲ್ದಾಣದಲ್ಲಿ ರೈಲ್ವೆ ಹಳಿ ಮೇಲೆ ಸಾಯಲು ಯತ್ನಿಸಿದ ಮಹಿಳೆಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪೇದೆ ರಕ್ಷಿಸಿದ್ದಾರೆ.

ಹಳಿ ಮೇಲೆ ಮಲಗಿದ್ದ ಮಹಿಳೆಯನ್ನು ರೈಲು ಬರುವ ಕೆಲವೆ ಸೆಕೆಂಡುಗಳಲ್ಲಿ ಪೇದೆ ರಕ್ಷಿಸಿದ್ದಾರೆ.  ಯಶವಂತಪುರ ರೈಲ್ವೆ ಸ್ಟೇಷನ್ ಗೆ ಹೊಂದಿಕೊಂಡ ಪೇದೆ ಅರುಣ್ ಕುಮಾರ್ ಗೊಲ್ಲಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು,  ಸ್ಟೇಷನ್ ನ ಪ್ಲಾಟ್ ಫಾರಂ ನಿಂದ 100 ಮೀಟರ್ ದೂರವಿರುವ  ಹಳಿಗಳ ಮೇಲೆ ಮಹಿಳೆ ಮಲಗಿರುವುದು ಕಂಡು ಬಂತು.

ಕೊರೋನಾ ವಿಶೇಷ  ವಾಸ್ಕೋಡಗಾಮ ರೈಲು ಬರುತ್ತಿರುವುದನ್ನು ಗಮನಿಸಿದರು.  ತಮ್ಮ ಜೀವವನ್ನು ಅಪಾಯಕ್ಕೊಡ್ಡಿ, ಆಕೆಯ ಬಳಿ ಓಡಿ ಮಹಿಳೆ ಸಾಯುವುದನ್ನು ರಕ್ಷಿಸಿದ್ದಾರೆ, ರೈಲು ಹಳಿಗಳ ಮೇಲಿಂದ ಆಕೆಯನ್ನು ಎಳೆದು ರಕ್ಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೌಟುಂಬಿಕ ಕಾರಣಗಳಿಂದಾಗಿ ಆಕೆ ತನ್ನ ಜೀವ ಕಳೆದುಕೊಳ್ಳಲು ಪ್ರಯತ್ನಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಕೌನ್ಸೆಲಿಂಗ್ ನಂತರ ಮತ್ತೆ ಕುಟುಂಬಸ್ಥರೊಂದಿಗೆ ಮಹಿಳೆ ಒಂದಾಗಿದ್ದಾಳೆ, ಆಕೆಯ ಜೀವ ರಕ್ಷಿಸಿದ ಪೊಲೀಸ್ ಪೇದೆಗೆ ಅಭಿನಂದನೆ ಸಲ್ಲಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com