ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಯಲ್ಲಿ ಮಕ್ಕಳ ನಾಟಕ: ಪೊಲೀಸರ ವಿರುದ್ಧ ದೂರದಾರರ ಆರೋಪ

ಆರ್'ಎಸ್ಎಸ್ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ ಕುರಿತು ಮಕ್ಕಳು ಶಾಲೆಯಲ್ಲಿ ಪ್ರದರ್ಶಿಸಿದ್ದ ನಾಟಕ ಪ್ರಕರಣ ಕುರಿತು ಪೊಲೀಸರ ವಿರುದ್ಧ ದೂರುದಾರರು ಆರೋಪ ವ್ಯಕ್ತಪಡಿಸಿದ್ದಾರೆ. 
ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಯಲ್ಲಿ ಮಕ್ಕಳ ನಾಟಕ: ಪೊಲೀಸರ ವಿರುದ್ಧ ದೂರದಾರರ ಆರೋಪ
ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಯಲ್ಲಿ ಮಕ್ಕಳ ನಾಟಕ: ಪೊಲೀಸರ ವಿರುದ್ಧ ದೂರದಾರರ ಆರೋಪ

ಮಂಗಳೂರು: ಆರ್'ಎಸ್ಎಸ್ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ ಕುರಿತು ಮಕ್ಕಳು ಶಾಲೆಯಲ್ಲಿ ಪ್ರದರ್ಶಿಸಿದ್ದ ನಾಟಕ ಪ್ರಕರಣ ಕುರಿತು ಪೊಲೀಸರ ವಿರುದ್ಧ ದೂರುದಾರರು ಆರೋಪ ವ್ಯಕ್ತಪಡಿಸಿದ್ದಾರೆ. 

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಮಕ್ಕಳು ನಾಟಕ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವಿಡಿಯೋ ವೈರಲ್ ಆಗಿತೇ್ತು. ಈ ಸಂಬಂಧ ಕಲ್ಲಡ್ಕ ಪ್ರಭಾಕರ್ ಹಾಗೂ ನಾಲ್ವರ ವಿರುದ್ಧ ಪೊಲೀಸರು ಸೆಕ್ಷನ್ 295(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 

ಪ್ರಕರಣ ಸಂಬಂಧ ದೂರು ನೀಡಿರುವ ವ್ಯಕ್ತಿ ಇದೀಗ ಪೊಲೀಸರ ವಿರುದ್ಧ ಆರೋಪ ಮಾಡಿದ್ದು, ಪ್ರಕರಣ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿಗಳೂ ಲಭ್ಯವಾಗಿಲ್ಲ. ತನಿಖೆ ಸಂಬಂಧ ಪೊಲೀಸರು ನನಗೆ ಯಾವುದೇ ಮಾಹಿತಿಯನ್ನೂ ನೀಡುತ್ತಿಲ್ಲ ಎಂದು ಹೇಳಿದ್ದಾರೆ. 

ಪಿಎಫ್ಐ ಕಾರ್ಯಕರ್ತರೊಬ್ಬರು ಮಾತನಾಡಿ, ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಲಾಗಿತ್ತು. ಆಧರೆ, ಈ ವೇಳೆ ಪೊಲೀಸರು ಇದೇನು ಅಂತಹ ದೊಡ್ಡ ವಿಚಾರವಲ್ಲ. ಮುಂದುವರೆಸದಿರಿ ಎಂದು ಸಲಹೆ ನೀಡಿದ್ದರು ಎಂದಿದ್ದಾರೆ. 

ಬೀದರ್ ನಲ್ಲಿಯೂ ಪೌರತ್ವ ಕಾಯ್ದೆ ವಿರುದ್ಧ ಮಕ್ಕಳು ನಾಯಕ ಪ್ರದರ್ಶಿಸಿದ್ದರು. ಇದೇ ರೀತಿಯ ಪ್ರಕರಣದಂತೆಯೇ ಪೊಲೀಸರು ವಿದ್ಯಾರ್ಥಿಗಳನ್ನಾಗಲೀ ಅಥವಾ ಅವರ ಪೋಷಕರನ್ನಾಗಲೀ ತನಿಖೆ ಸಂಬಂಧ ಪ್ರಶ್ನಿಸಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ. 

ಇನ್ನು ಆರೋಪ ಸಂಬಂಧ ಬಂಟ್ವಾಳ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ವಾಲೆಂಟೈನ್ ಡಿಸೋಜಾ ಅವರನ್ನು ಸಂಪರ್ಕಿಸಿದರೆ, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. 

ಸಾಕ್ಷ್ಯಾಧಾರಗಳ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ. ವಾಸ್ತವಿಕವಾಗಿ ನಾಯಕ ನಿಜಕ್ಕೂ ಅಪರಾಧವೇ ಎಂಬುದನ್ನು ತಿಳಿಯಲು ಈಗಾಗಲೇ ಕಾನೂನು ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಒಂದು ವೇಳೆ ಅಪರಾಧ ಎಂದು ಹೇಳುವುದೇ ಆದರೆ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್'ಪಿ ಬಿಎಂ ಲಕ್ಷ್ಮೀ ಪ್ರಸಾದ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com