ಮಕ್ಕಳ ಬಜೆಟ್ ಮಂಡಿಸುವ ಹೊಸ ಸಂಪ್ರದಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಾಂದಿ

ಮಾರ್ಚ್ 5 ರಂದು ಆಯವ್ಯಯ ಮಂಡನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ತಯಾರಿ ನಡೆಸಿದ್ದಾರೆ.ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ಹೊಸತನ ಮೆರೆದಿದ್ದ ಯಡಿಯೂರಪ್ಪ ಮತ್ತೊಂದು ವಿಶೇಷ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.

Published: 10th February 2020 09:02 AM  |   Last Updated: 10th February 2020 09:02 AM   |  A+A-


Yeddyurappa

ಯಡಿಯೂರಪ್ಪ

Posted By : Manjula VN
Source : UNI

ಬೆಂಗಳೂರು: ಮಾರ್ಚ್ 5 ರಂದು ಆಯವ್ಯಯ ಮಂಡನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ತಯಾರಿ ನಡೆಸಿದ್ದಾರೆ.ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ಹೊಸತನ ಮೆರೆದಿದ್ದ ಯಡಿಯೂರಪ್ಪ ಮತ್ತೊಂದು ವಿಶೇಷ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿಯೂ ಯಡಿಯೂರಪ್ಪ ವಿಶೇಷತೆ ನೀಡಲಿ ದ್ದಾರೆ. ಮಾರ್ಚ 5 ರಂದು ಬಿಜೆಪಿ ಸರ್ಕಾರ 202-21 ಆಯ ವ್ಯಯದ ಜೊತೆ ಮತ್ತೊಂದು ಪ್ರತ್ಯೇಕ ಬಜೆಟ್ ಮಂಡನೆ ಯಾಗಲಿದೆ. ಈ ಭಾರಿ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ.

ಮಾರ್ಚ್ 5 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೂರ್ಣಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿ ಕೃಷಿ ಹಾಗೂ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp