ಭೂಗತ ಪಾತಕಿ ರವಿ ಪೂಜಾರಿಗೆ ಮಾರ್ಚ್ 7ರವರೆಗೆ ಪೊಲೀಸ್ ಕಸ್ಟಡಿಗೆ

ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ನಗರಕ್ಕೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನನ್ನು ಮಾರ್ಚ್ 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಭೂಗತ ಪಾತಕಿ ರವಿಪೂಜಾರಿ
ಭೂಗತ ಪಾತಕಿ ರವಿಪೂಜಾರಿ

ಬೆಂಗಳೂರು: ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ನಗರಕ್ಕೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನನ್ನು ಮಾರ್ಚ್ 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.

ಆರೋಪಿ ಪೂಜಾರಿಯನ್ನು ಮಡಿವಾಳದ ಅತ್ಯಾಧುನಿಕ ವಿಚಾರಣಾ ಘಟಕದಲ್ಲಿ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಮಧ್ಯರಾತ್ರಿ 12.40ರ ವೇಳೆ ದಕ್ಷಿಣ ಆಫ್ರಿಕಾದ ಸೆನೆಗಲ್‌ನಿಂದ ನಗರಕ್ಕೆ ಕರೆ ತರಲಾಗಿತ್ತು. ವೈದ್ಯಕೀಯ ತಪಾಸಣೆ ನಡೆಸಿದ ನಂತರ ಸೋಮವಾರ ಮಧ್ಯಾಹ್ನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ  ಹಾಜರುಪಡಿಸಲಾಯಿತು.ನ್ಯಾಯಾಧೀಶರು ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

ರಾಜ್ಯದಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ರವಿಪೂಜಾರಿ 1990ರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.  ದಕ್ಷಿಣ  ಕನ್ನಡ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ಪೂಜಾರಿ ವಿರುದ್ಧ ದಾಖಲಾಗಿತ್ತು. ಶಾಸಕರಾದ ತನ್ವೀರ್ ಸೇಠ್, ಮಾಜಿ ಸಚಿವ ಎಚ್‌.ಎಂ. ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್‌ಗೆ ಹಣಕ್ಕೆ  ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸೇರಿ, ಮಲ್ಪೆ ಮೂಲದ ಈ ಗ್ಯಾಂಗ್‌ಸ್ಟಾರ್ ರವಿ ಪೂಜಾರಿ ವಿರುದ್ಧ  ಮಂಗಳೂರಿನಲ್ಲಿ 39, ಬೆಂಗಳೂರಿನಲ್ಲಿ 38 ಪ್ರಕರಣಗಳು ದಾಖಲಾಗಿವೆ.

ರವಿ ಪೂಜಾರಿ ಮುಂಬೈನಲ್ಲಿಯೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಈತ ಭೂಗತ ಪಾತಕಿ ಚೋಟಾ ರಾಜನ್ ತಂಡಕ್ಕೆ ಸೇರ್ಪಡೆಯಾಗಿದ್ದನು. 1990ರಲ್ಲಿ ದುಬೈಗೆ  ಪರಾರಿಯಾಗಿ ಅಲ್ಲಿಂದಲೇ ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್  ಕುಮಾರ್, ನಿರ್ದೇಶಕ ಕರಣ್ ಜೋಹಾರ್, ನಿರ್ಮಾಪಕ ರಾಕೇಶ್ ರೋಷನ್‌ಗೆ ಬೆದರಿಕೆ  ಹಾಕಿದ್ದ ಆರೋಪಗಳಿವೆ.  ತನ್ನ ಹಿಂಬಾಲಕರ ಮೂಲಕ ಮುಂಬೈನಲ್ಲಿ ಓಂಪ್ರಕಾಶ್ ಕುಕ್ರೆಜಾ ಕೊಲೆ,  ಬಿಲ್ಡರ್ಸ್ ಕೊಲೆಗೆ ಯತ್ನಿಸಿದ್ದನು. ವಿದೇಶದಲ್ಲಿ  ತಲೆಮರೆಸಿಕೊಂಡಿದ್ದ. ಭೂಗತ ಪಾತಕಿ ರವಿಪೂಜಾರಿ ಭಾರತದಲ್ಲಿ ಪರೋಕ್ಷವಾಗಿ ಅಪರಾಧ ಕೃತ್ಯ  ನಡೆಸಿ ವಿದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ1992 ರಿಂದ  ಭೂಗತನಾಗಿದ್ದ ರವಿ ಪೂಜಾರಿಯ ನೆರಳನ್ನು ಬೆನ್ನತ್ತಿದ್ದ ಹಾಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ ಮತ್ತು ಸಿಸಿಬಿ ಎಸಿಪಿ ವೆಂಕಟೇಶ್‌ ಪ್ರಸನ್ನ  ಅವರ ಒಂದು ವರ್ಷದ ಶ್ರಮ ಕೊನೆಗೆ ಫಲ ನೀಡಿದೆ.

ಮೈತ್ರಿ  ಸರಕಾರದ ಅವಧಿಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಎಡಿಜಿಪಿ ಆಗಿದ್ದ ಅಮರ್‌ಕುಮಾರ್‌ ಪಾಂಡೆ,  ಎಸಿಪಿ ಪ್ರಸನ್ನ ಕೊಟ್ಟ ಮಾಹಿತಿ ಆಧರಿಸಿ 2019ರ ಜನವರಿ 31ರಂದು ಸೆನೆಗಲ್‌ ರಾಜಧಾನಿ  ಡಕಾರ್‌ನಲ್ಲಿ ರವಿ ಪೂಜಾರಿಯ ಬಂಧನವಾಗಿತ್ತಾದರೂ ಆತನನ್ನು ಭಾರತಕ್ಕೆ ಕರೆತರುವ  ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com