ಬೆಂಗಳೂರು: ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ 6 ಎಸ್ಕಲೇಟರ್ ಸೇವೆ ಆರಂಭ

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ 6 ಎಸ್ಕಲೇಟರ್ ಗಳನ್ನು ಬುಧವಾರ ಸೇವೆಗೆ ಸಮರ್ಪಿಸಲಾಯಿತು. 
ಬೆಂಗಳೂರು: ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ 6 ಎಸ್ಕಲೇಟರ್ ಸೇವೆ ಆರಂಭ
ಬೆಂಗಳೂರು: ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ 6 ಎಸ್ಕಲೇಟರ್ ಸೇವೆ ಆರಂಭ

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ 6 ಎಸ್ಕಲೇಟರ್ ಗಳನ್ನು ಬುಧವಾರ ಸೇವೆಗೆ ಸಮರ್ಪಿಸಲಾಯಿತು. 

ರೈಲ್ವೇ ನಿಲ್ದಾಣದ ಪ್ಲಾಟ್'ಪಾರ್ಮ್ ಸಂಖ್ಯೆ 7 ಮತ್ತು 8ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ಎಸ್ಕಲೇಟರನ್ನು ಹಿರಿಯ ನಾಗರೀಕರೊಂದಿಗೆ ಸಂಸದ ಪಿ.ಸಿ.ಮೋಹನ್ ಅವರು ಉದ್ಘಾಟಿಸಿದರು. 

ಸದ್ಯಪ್ಲಾಟ್ ಫಾರ್ಮ್ ಸಂಖ್ಯೆ 2/3, 4/5, 7/8 ಹಾಗೂ ಯಶವಂತಪುರ ಪ್ಲಾಟ್ ಫಾರ್ಮ್ 2/3ರಲ್ಲಿ ಎಸ್ಕಲೇಟರ್ ನಿರ್ಮಿಸಲಾಗಿದೆ. ಬೆಂಗಳೂರು ರೈಲ್ವೇ ವಿಭಾಗ ರೈಲ್ವೆ ಮಂಡಳಿ ನಿಗದಿಪಡಿಸಿದ 6 ತಿಂಗಳ ಅವಧಿಯೊಳಗೆ ಆರು ಎಸ್ಕಲೇಟರ್ ಗಳನ್ನು ಸ್ತಾಪಿಸಿದ ಮೊದಲ ವಿಭಾಗವಾಗಿದೆ. ಒಟ್ಟಾರೆ ರೈಲ್ವೆ ನಿಲ್ದಾಣದಲ್ಲಿ 10 ಪ್ಲಾಟ್ ಫಾರ್ಮ್ ಗಳಲ್ಲಿ ಎಸ್ಕಲೇಟರ್ ಗಳು ಕಾರ್ಯ ನಿರ್ವಹಿಸುತ್ತಿವೆ. 

ಈ ಸಂದರ್ಬದಲ್ಲಿ ಮತನಾಡಿದ ಸಂಸದ ಪಿ.ಸಿ.ಮೋಹನ್, 6 ತಿಂಗಳಲ್ಲಿ ಎಲ್ಲಾ 6 ಎಸ್ಕಲೇಟರ್ ಗಳ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ಅಣಿಗೊಳಿಸಲಾಗಿದೆ. ಪ್ರತಿ ವರ್ಷ 250 ಕಿ.ಮೀ ರೈಲು ಮಾರ್ಗವನ್ನು ಡಬ್ಲಿಂಗ್ ಮಾಡಲಾಗುತ್ತಿದೆ ಎಂದರು. ಮೇಯರ್ ಗೌತಮ್ ಕುಮಾರ್, ಹಿರಿಯ ವಿಭಾಗೀಯ (ವಾಣಿಜ್ಯ) ವ್ಯವಸ್ಥಾಪಕ ಡಾ.ಕೃಷ್ಣಾ ರೆಡ್ಡಿ, ಕಲ್ಯಾಣಿ ಸೇತುರಾಮನ್, ಪೂಜಾ, ರಘುರಾಮನ್, ಸುವಂಕರ್ ಬಿಸ್ವಾನ್ ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com