ಪಟಾಕಿ ಸಿಡಿತ ಎಂದ ಪೊಲೀಸರ ವರದಿ ತಿರಸ್ಕರಿಸಿದ ಹ್ಯಾರಿಸ್, ತನಿಖೆಗೆ ಆಗ್ರಹ

ಸಿಡಿದಿದ್ದು ಪಟಾಕಿಯೇ ಹೊರತು ಯಾವುದೇ ಅನುಮಾನಾಸ್ಪದ ವಸ್ತುಗಳಲ್ಲ ಎಂಬ ಪೊಲೀಸರ ತನಿಖಾ ವರದಿಯನ್ನು ತಿರಸ್ಕರಿಸಿರುವ ಶಾಸಕ ಹ್ಯಾರಿಸ್ ಅವರು, ತನಿಖೆಗೆ ಆಗ್ರಹಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಡಿದಿದ್ದು ಪಟಾಕಿಯೇ ಹೊರತು ಯಾವುದೇ ಅನುಮಾನಾಸ್ಪದ ವಸ್ತುಗಳಲ್ಲ ಎಂಬ ಪೊಲೀಸರ ತನಿಖಾ ವರದಿಯನ್ನು ತಿರಸ್ಕರಿಸಿರುವ ಶಾಸಕ ಹ್ಯಾರಿಸ್ ಅವರು, ತನಿಖೆಗೆ ಆಗ್ರಹಿಸಿದ್ದಾರೆ. 

ವಿವಾಕನಗರ ಸಮೀಪದ ವನ್ನಾರ್ ಪೇಟೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿಗೂಢವಾಗಿ ವಸ್ತುವೊಂದು ಸ್ಫೋಟಗೊಂಡು ಶಾಸಕ ಹ್ಯಾರಿಕ್ ಹಾಗೂ ಅವರ ಮೂವರು ಬೆಂಬಲಿಗರು ಗಾಯಗೊಂಡಿದ್ದರು. ಗಾಯಗೊಂಡಿದ್ದ ಹ್ಯಾರಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಹ್ಯಾರಿಸ್ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಪೊಲೀಸರ ತನಿಖಾ ವರದಿಯನ್ನು ತಿರಸ್ಕರಿಸಿದ್ದಾರೆ. 

ನನ್ನ ಮೇಲೆ ಸಿಡಿದು ಬಂದಿದ್ದು ಪಟಾಕಿ ರೀತಿ ಇರಲಿಲ್ಲ. ನನ್ನ ವಿರುದ್ಧ ಯಾವುದೇ ರಾಜಕೀಯ ದ್ವೇಷಗಳಾಗಲೀ, ವೈಯಕ್ತಿಕ ಶತ್ರುಗಳಾಗಲಿ ಇಲ್ಲ. ನನ್ನ ಯಶಸ್ಸಿಗೆ ಕೆಲವರು ಹೊಟ್ಟೆ ಉರಿ ಪಡುತ್ತಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸುವುದು ಉತ್ತಮ. ಈಗಾಗಲೇ ಗೃಹ ಸಚಿವರೂ ಕೂಡ ತನಿಖೆಯಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com