ಕೊರೋನಾ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯಪುಡಿ ಮನೆ ಬಾಗಿಲಿಗೆ ತಲುಪಿಸುತ್ತಾರೆ ಅಂಚೆಯಣ್ಣ!

ಕೊರೋನಾ ವಿರುದ್ದ ಹೋರಾಡಲು ಅವಶ್ಯಕತೆಯಿರುವ ರೋಗ ನಿರೋಧಕ ಶಕ್ತಿ ಹೆಚ್ಚಸಲು ಬೇಕಾದ ಮಸಾಲೆಗಳು, ಗಿಡಮೂಲಿಕೆಗಳು ಮತ್ತು ಬೇರುಗಳ ಮಿಶ್ರಣದ ಕಷಾಯ ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವಿರುದ್ದ ಹೋರಾಡಲು ಅವಶ್ಯಕತೆಯಿರುವ ರೋಗ ನಿರೋಧಕ ಶಕ್ತಿ ಹೆಚ್ಚಸಲು ಬೇಕಾದ ಮಸಾಲೆಗಳು, ಗಿಡಮೂಲಿಕೆಗಳು ಮತ್ತು ಬೇರುಗಳ ಮಿಶ್ರಣದ ಕಷಾಯ ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ.

ಹಲವು ಮಂದಿ ಭಾರತೀಯರಿಗೆ ಇದು ಮ್ಯಾಜಿಕ್ ಮದ್ದಾಗಿದೆ. ಹೀಗಾಗಿ ಜನ ಸಂಪ್ರಾದಾಯಿಕ ಔಷಧಗಳ ಮೊರೆ ಹೋಗುತ್ತಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಷಾಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ, ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಸಹ ಇದನ್ನು ಕುಡಿಯುತ್ತಿದ್ದಾರೆ. ಹೀಗಾಗಿ ಜನರ ಮನೆಬಾಗಿಲಿಗೆ ತಲುಪಿಸಲು  ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಮಸಾಲೆಯುಕ್ತ ಪಾನೀಯವನ್ನು ತಯಾರಿಸಲು ಬೇಕಾದ ಪದಾರ್ಥಗಳನ್ನು ಒಳಗೊಂಡಿರುವ ಪ್ಯಾಕೇಜ್   ತಲುಪಿಸಲು ಇಂಡಿಯಾ ಪೋಸ್ಟ್‌ನೊಂದಿಗೆ ಕೈ ಜೋಡಿಸಿದೆ.

ಕಷಾಯ ತಯಾರಿಸಲು ಬೇಕಾದ 7ಪದಾರ್ಥಕಗಳಾದ 250 ಗ್ರಾಂ ಮೆಣಸು, ಒಣ ಶುಂಠಿ, ಜೀರಿಗೆ,ಲವಂಗ, ಬೆಳ್ಳುಳ್ಳಿ, ಮತ್ತು ಅರಿಶಿನ ಜೊತೆಗೆ ಒಂದುವರೆ ಕೆಜಿ ಬೆಲ್ಲ, ಈ ಕಷಾಯದ ಪುಡಿ ತೂಕ 3ಕೆಜಿ ಇದ್ದು ಸುಮಾರು 600 ರು ವೆಚ್ಚ ತಗಲುಲಿದೆ. ಇವೆಲ್ಲಾ ಮಲೆನಾಡು ಭಾಗದ ರೈತರು ಪೂರೈಕೆ ಮಾಡಲಿದ್ದು,  ಸ್ವತಃ ಅವರೆ ಬೆಳೆದು ಪೂರೈಸಲಿದ್ದಾರೆ, ಹೀಗಾಗಿ ರೈತರಿಗೆ ಇದೊಂದು ಮಾರಾಟ ಮಾಡಲು ಉತ್ತಮ ವೇದಿಕೆಯಾಗಿದೆ ಎಂದು ಕೆಎಸ್ಎಂಡಿಎಂಸಿ ಮ್ಯಾನೇಜಿಂಗ್ ಡೈರೆಕ್ಟರ್ ಸಿಜಿ ನಾಗರಾಜ್ ಹೇಳಿದ್ದಾರೆ.

ಈ ಮೊದಲು ಮಾವಿನ ಹಣ್ಣುಗಳನ್ನು ಇದೇ ಪೋಸ್ಟ್ ಮೂಲಕ ಪಾರ್ಸೆಲ್ ಕಳುಹಿಸಲಾಗುತ್ತಿತ್ತು.  ಸುಮಾರು 100 ಟನ್ ಮಾವಿನಹಣ್ಣುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗಿತ್ತು.  ಸದ್ಯ ಮಾವಿನ ಹಣ್ಣಿನ ಸೀಸನ್ ಮುಗಿದಿದ್ದು, ಕಷಾಯ ಪೌಡರ್ ಬೇಡಿಕೆ ಹೆಚ್ಚಿದೆ ಎಂದು ಬೆಂಗಳೂರು ಪ್ರಧಾನ ಅಂಚೆ ಕಚೇರಿ ಪೋಸ್ಚ್ ಮಾಸ್ಟರ್ ಎಸ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com