ಮೈಸೂರಿನಲ್ಲಿ ಕೋವಿಡ್-19 ಸಾವಿನ ಪ್ರಮಾಣ ಕರ್ನಾಟಕಕ್ಕಿಂತ ಹೆಚ್ಚು!

ಕೊರೋನಾ ವೈರಸ್ ವಿರುದ್ಧ ದಿಟ್ಟ ಕ್ರಮಗಳನ್ನು ಕೈಗೊಂಡು ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿದ್ದ ಮೈಸೂರಿನಲ್ಲಿ ಇದೀಗ ಮತ್ತೆ ಸೋಂಕಿನ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಮೈಸೂರಿ ನಗರದಲ್ಲಿ ಇದೀಗ ಕೊರೋನಾ ಸಾವಿನ ಪ್ರಮಾಣ ಕರ್ನಾಟಕಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೊರೋನಾ ವೈರಸ್ ವಿರುದ್ಧ ದಿಟ್ಟ ಕ್ರಮಗಳನ್ನು ಕೈಗೊಂಡು ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿದ್ದ ಮೈಸೂರಿನಲ್ಲಿ ಇದೀಗ ಮತ್ತೆ ಸೋಂಕಿನ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಮೈಸೂರಿ ನಗರದಲ್ಲಿ ಇದೀಗ ಕೊರೋನಾ ಸಾವಿನ ಪ್ರಮಾಣ ಕರ್ನಾಟಕಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. 

ಕೊರೋನಾ ದಿಂದ ನಿನ್ನೆ ಕೂಡ ಇಬ್ಬರು ಮೃಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 59ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ನಗರದಲ್ಲಿ ಸಾವಿನ ಪ್ರಮಾಣ ಶೇ.4ಕ್ಕೆ ಏರಿಕೆಯಾಗಿದೆ. ಈ ಶೇಕಡಾವಾರು ರಾಜ್ಯದ ಸಾವಿನ ಸರಾಸರಿಗಿಂತಲೂ ದುಪ್ಪಟ್ಟಾಗಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.2.1ರಷ್ಟಿದ್ದರೆ, ಮೈಸೂರಿನಲ್ಲಿ ಶೇ.4ರಷ್ಟಿದೆ. 

ಮೈಸೂರಿನಲ್ಲಿ ಈ ವರೆಗೂ 1514 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, 575 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಕಳೆದ ಕೆಲ ವಾರಗಳಲ್ಲಿ ಮೈಸೂರಿನಲ್ಲಿ 800ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಶೇ.39ಕ್ಕೆ ಇಳಿಕೆಯಾಗಿದೆ. 

ಕಳೆದ ಐದು ದಿನಗಳಲ್ಲಿ ಜಿಲ್ಲಾವಾರು ಸರಾಸರಿ ದೈನಂದಿನ ಬೆಳವಣಿಗೆಯನ್ನು ನೋಡಿದರೆ, ಮೈಸೂರು ಶೇಕಡಾ 11.4 ರಷ್ಟು ಬೆಳವಣಿಗೆಯ ದರದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ರಾಜ್ಯದ ಬೆಳವಣಿಗೆಯ ದರವು ಶೇಕಡಾ 7.2 ರಷ್ಟಿದೆ. ಒಟ್ಟು 880 ಪ್ರಕರಣಗಳಲ್ಲಿ 350 ಕ್ಕೂ ಹೆಚ್ಚು ರೋಗಿಗಳು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com