ಆರ್‌ಟಿ-ಪಿಸಿಆರ್ ಕೋವಿಡ್ ಪರೀಕ್ಷೆಗೆ ದರ ನಿಗದಿ: ಡಾ. ಕೆ.ಸುಧಾಕರ್

ಸರ್ಕಾರದಿಂದ ಖಾಸಗಿ ಲ್ಯಾಬ್ ಗಳಿಗೆ ಕಳುಹಿಸುವ ಸ್ಯಾಂಪಲ್ ಗಳ ಆರ್‌ಟಿ-ಪಿಸಿಆರ್‌ ಕೋವಿಡ್ ಪರೀಕ್ಷೆಗೆ 2,000 ರೂ.ನಿಗದಿ ಮಾಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಸರ್ಕಾರದಿಂದ ಖಾಸಗಿ ಲ್ಯಾಬ್ ಗಳಿಗೆ ಕಳುಹಿಸುವ ಸ್ಯಾಂಪಲ್ ಗಳ ಆರ್‌ಟಿ-ಪಿಸಿಆರ್‌ ಕೋವಿಡ್ ಪರೀಕ್ಷೆಗೆ 2,000 ರೂ.ನಿಗದಿ ಮಾಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, 'ಸ್ವಯಂಪ್ರೇರಣೆಯಿಂದ ಖಾಸಗಿಯಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೊಳಪಡುವರಿಗೆ ಗರಿಷ್ಠ 3,000 ರೂ. ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷೆಗೆ 700 ರೂ. ದರ ನಿಗದಿ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಅವರು ಆದೇಶ ಪ್ರತಿಯನ್ನೂ ಟ್ವೀಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇತ್ತೀಚೆಗೆ ನಡೆದ ಕೊರೊನಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಈಗ ಆದೇಶ ಹೊರಡಿಸಲಾಗಿದೆ. ಖಾಸಗಿ ಪ್ರಯೋಗಾಲಯಗಳಿಗೆ ಸರ್ಕಾರದಿಂದ ಕಳುಹಿಸುವ ಮಾದರಿಗಳು, ತಪಾಸಣೆ ಮತ್ತು ದೃಢೀಕರಣ ಪರೀಕ್ಷೆಗಳನ್ನು ಒಳಗೊಂಡಂತೆ 2 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಇದು ಪಿಪಿಇ ಕಿಟ್ ದರವನ್ನು ಕೂಡ ಒಳಗೊಂಡಿದೆ.

ಖಾಸಗಿ ವ್ಯಕ್ತಿಗಳ ಮಾದರಿ ತಪಾಸಣೆ ಮತ್ತು ದೃಢೀಕರಣ ಪರೀಕ್ಷೆಗೆ 3 ಸಾವಿರ ರೂ. ದರ ನಿಗದಿಯಾಗಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ಖಾಸಗಿ ಮಾದರಿಗಳ ಕ್ಷಿಪ್ರ ಆ್ಯಂಟಿಜೆನ್‌ ಪರೀಕ್ಷೆಗೆ ತಲಾ 700 ರೂ. ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ತಪಾಸಣೆಗಳು ಕೇವಲ ಐಸಿಎಂಆರ್ ಅನುಮೋದಿತ ಪ್ರಯೋಗಾಲಯದಿಂದ ಮಾತ್ರ ನಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com