ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿ ಬೇಕು: ಅಭಿಯಾನಕ್ಕೆ 17 ಸಾವಿರ ಪೋಷಕರ ಬೆಂಬಲ

ಒಂದನೇ ತರಗತಿಯಿಂದ 5 ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ರದ್ದುಪಡಿಸುವುದಾಗಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ ಬೆನ್ನಲ್ಲೇ, ಆನ್ ಲೈನ್ ತರಗತಿಗೆ ಬೆಂಬಲ ವ್ಯಕ್ತಪಡಿಸಿ ಆರಂಭಿಸಿರುವ ಅಭಿಯಾನಕ್ಕೆ ಈಗಾಗಲೇ 17 ಸಾವಿರ ಪ್ರಾಥಮಿಕ ಪೂರ್ವ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ಪೋಷಕರು ಸಹಿ ಹಾಕಿದ್ದಾರೆ.
ವ್ಯಾಸಂಗದಲ್ಲಿ ತೊಡಗಿರುವ ಮಕ್ಕಳ ಚಿತ್ರ
ವ್ಯಾಸಂಗದಲ್ಲಿ ತೊಡಗಿರುವ ಮಕ್ಕಳ ಚಿತ್ರ

ಬೆಂಗಳೂರು: ಒಂದನೇ ತರಗತಿಯಿಂದ 5 ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ರದ್ದುಪಡಿಸುವುದಾಗಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ ಬೆನ್ನಲ್ಲೇ, ಆನ್ ಲೈನ್ ತರಗತಿಗೆ ಬೆಂಬಲ ವ್ಯಕ್ತಪಡಿಸಿ ಆರಂಭಿಸಿರುವ ಅಭಿಯಾನಕ್ಕೆ ಈಗಾಗಲೇ 17 ಸಾವಿರ ಪ್ರಾಥಮಿಕ ಪೂರ್ವ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ಪೋಷಕರು ಸಹಿ ಹಾಕಿದ್ದಾರೆ.

ಎಲ್ ಕೆಜಿ, ಯುಕೆಜಿ ಮತ್ತು ಒಂದರಿಂದ ಐದನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನು ರದ್ದುಪಡಿಸಲಾಗುವುದು ಎಂಬ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಘೋಷಣೆಯನ್ನು ವಿರೋಧಿಸಿ ಈ ಅಭಿಯಾನ ಕೈಗೊಳ್ಳಲಾಗಿದೆ.

ಪೋಷಕರು ಮನೆಯಿಂದ ಕೆಲಸ ಮಾಡುತ್ತಿದ್ದರೂ ಸಹ, ಮಕ್ಕಳು ಸಮಯವನ್ನು ಹಾಳು ಮಾಡಿಕೊಳ್ಳದೆ ಅಥವಾ ವಿಡಿಯೋಗೇಮ್ ನಂತಹ ಆಟಗಳಲ್ಲಿ ತೊಡಗಿಸಿಕೊಳ್ಳದಂತೆ ಶಿಕ್ಷಣದತ್ತ ಗಮನ ಹರಿಸಲು ಆನ್ ಲೈನ್ ಶಿಕ್ಷಣ ಸಹಾಯ ಮಾಡಲಿದೆ ಎಂದು ಆನ್ ಲೈನ್ ಶಿಕ್ಷಣ ಬೆಂಬಲಿಸುವ ಪೋಷಕರು ಹೇಳುತ್ತಾರೆ.

ಕೇವಲ ನಾಲ್ಕು ಗಂಟೆಗಳ ಕಾಲ ಮಾತ್ರ ತರಗತಿಗಳು ನಡೆಯುವುದರಿಂದ ತಮ್ಮ ಮಗಳು ಖುಷಿಯಾಗಿಯೇ ಅದರಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಶಾಲೆಯು ಅಭಿವೃದ್ಧಿಪಡಿಸಿರುವ ಮಾಡ್ಯೂಲ್ ತುಂಬಾ ಒಳ್ಳೆಯದು ಮತ್ತು ಕಡಿಮೆ ಹೊರೆಯಾಗಿದೆ. ಇದು ಕೇವಲ ತರಗತಿ ಮಾತ್ರವಲ್ಲ, ಡ್ಯಾನ್ಸ್, ಸಂಗೀತದಂತಹ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ, ಇದೀಗ ಇದನ್ನು ರದ್ದುಪಡಿಸುವುದರಿಂದ ಆಕೆ ಅಸಂತೋಷಗೊಂಡಿದ್ದಾಳೆ. ನಮಗೂ ಬೇಸರಾಗಿದೆ ಎಂದು ವೈಟ್ ಫೀಲ್ಡ್ ನ ಖಾಸಗಿ ಶಾಲೆಯೊಂದರ ಮೂರನೇ ತರಗತಿ ವಿದ್ಯಾರ್ಥಿಯ ತಾಯಿ ರಿತು ಶರ್ಮಾ ಹೇಳಿದರು.

ಮಕ್ಕಳು ಟಿವಿ ಅಥವಾ ಮೊಬೈಲ್ ಫೋನ್ ಮುಂದೆ ಕುಳಿತುಕೊಳ್ಳುವುದಕ್ಕಿಂತಲೂ ಆನ್ ಲೈನ್ ಶಿಕ್ಷಣ ಕಲಿಯುವುದು ಲೇಸು ಎಂದು ರಿತು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಆನ್ ಲೈನ್ ಶಿಕ್ಷಣವಿದ್ದಾಗ ತಮ್ಮ ಮಗ ಬೇಗನೆ ಎದ್ದು ವ್ಯಾಸಂಗ ಮಾಡುತ್ತಿದ್ದ. ಆದರೆ, ಇದೀಗ ಆನ್ ಲೈನ್ ರದ್ದುಗೊಂಡಿರುವುದರಿಂದ ಏನನ್ನೂ ಮಾಡುತ್ತಿಲ್ಲ, ಕಲಿಕೆ ಆಸಕ್ತಿ ಬೆಳೆಸುವಲ್ಲಿ ಆನ್ ಲೈನ್ ಶಿಕ್ಷಣ ನೆರವಾಗಲಿದೆ. ಸರ್ಕಾರ ಮತ್ತೆ ಇದನ್ನು ಆರಂಭಿಸಬೇಕು ಎಂದು ಬಯಸುವುದಾಗಿ ವರ್ತೂರಿನ ಶಾಲೆಯೊಂದರಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರ ತಾಯಿ ಲೀನಾಪ್ರಿಯಾ ರಿದಿಮಾ ಒತ್ತಾಯಿಸಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com