ಮಂಗಳೂರಿನಲ್ಲಿ ಕೋವಿಡ್‍-19 ಸೋಂಕಿಗೆ ಇಬ್ಬರು ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಕೊವಿಡ್‍-19 ಸೋಂಕಿನಿಂದ ಮತ್ತಿಬ್ಬರು ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 12 ಕ್ಕೆ ಏರಿದೆ.ಮೃತರ ಪೈಕಿ ಬಂಟ್ವಾಳ ಮೂಲದ 57 ವರ್ಷದ ಮಹಿಳೆ ಮತ್ತು ಸೂರತ್ಕಲ್‍ ನ 31 ವರ್ಷದ ಯುವಕ ಸೇರಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೊರೋನಾ ವೈರಸ್ ಆರ್ಭಟ
ಕೊರೋನಾ ವೈರಸ್ ಆರ್ಭಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಕೊವಿಡ್‍-19 ಸೋಂಕಿನಿಂದ ಮತ್ತಿಬ್ಬರು ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 12 ಕ್ಕೆ ಏರಿದೆ.ಮೃತರ ಪೈಕಿ ಬಂಟ್ವಾಳ ಮೂಲದ 57 ವರ್ಷದ ಮಹಿಳೆ ಮತ್ತು ಸೂರತ್ಕಲ್‍ ನ 31 ವರ್ಷದ ಯುವಕ ಸೇರಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶನಿವಾರ ಒಂದೇ ಕುಟುಂಬದ 16 ಸದಸ್ಯರು ಸೇರಿದಂತೆ 49 ಜನರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಪ್ರಕರಣಗಳ ಒಟ್ಟು ಪ್ರಕರಣಗಳ ಸಂಖ್ಯೆ 566 ಕ್ಕೆ ಏರಿದೆ. 17 ಮಾದರಿಗಳ ಪರೀಕ್ಷೆಗಳ ಪೈಕಿ 7 ಪುರುಷರು,4 ಮಕ್ಕಳು, 4 ಮಹಿಳೆಯರು ಮತ್ತು ವೃದ್ಧೆ ಸೇರಿದಂತೆ 16 ಮಂದಿಗೆ ಸೋಂಕು ದೃಢಪಟ್ಟಿದೆ.

ಮಹಿಳಾ ಉದ್ಯೋಗಿಯೊಬ್ಬರಿಗೆ ಶನಿವಾರ ಕೊರೋನವೈರಸ್‌ ಸೋಂಕು ದೃಢಪಟ್ಟ ನಂತರ ಅಧಿಕಾರಿಗಳು ಉಲ್ಲಾಳದ ಮಾಸ್ತಿಕಟ್ಟೆ ಪ್ರದೇಶ ಮತ್ತು ಉಜಿರೆಯ ಪೆಟ್ರೋಲ್ ಬಂಕ್ ಸೀಲ್‍ಡೌನ್‍ ಮಾಡಿದ್ದಾರೆ. 

ಬಂಟ್ವಾಳದ 57 ವರ್ಷದ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸುರತ್ಕಲ್ ನ ಇಡ್ಯಾ ನಿವಾಸಿ 31 ವರ್ಷದ ಯುವಕ ಕೋವಿಡ್-19 ಸೋಂಕಿನ ಕಾರಣದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್-19 ಸೋಂಕಿನ ಕಾರಣದಿಂದ 10 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಕೋವಿಡ್ ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com