ಬೆಂಗಳೂರು: ಕೊರೋನಾ ಸೋಂಕಿತನಿಗೆ 7 ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ನಿರಾಕರಣೆ; 45 ವರ್ಷದ ವ್ಯಕ್ತಿಗೆ ಕೊನೆಗೂ ಚಿಕಿತ್ಸೆ

ಬೆಂಗಳೂರಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಸೋಂಕಿತರು ಪರದಾಡುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ ಗೊಟ್ಟಿಗೆರೆಯ 45 ವರ್ಷದ ಸೋಂಕಿತರೊಬ್ಬರಿಗೆ 9 ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ ನಂತರ ಕೊನೆಗೆ ಪ್ರಕ್ರಿಯಾ ಆಸ್ಪತ್ರೆ ಸೋಂಕಿರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಸೋಂಕಿತರು ಪರದಾಡುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ ಗೊಟ್ಟಿಗೆರೆಯ 45 ವರ್ಷದ ಸೋಂಕಿತರೊಬ್ಬರಿಗೆ 9 ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ ನಂತರ ಕೊನೆಗೆ ಪ್ರಕ್ರಿಯಾ ಆಸ್ಪತ್ರೆ ಸೋಂಕಿರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದೆ.

ಕಳೆದ ಶುಕ್ರವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಮೊದಲು ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ಹಾಸಿಗೆ ಲಭ್ಯವಿಲ್ಲ ಎಂಬ ಕಾರಣ ನೀಡಿ ದಾಖಲಿಸಿಕೊಳ್ಳಲು ನಿರಾಕರಿಸಲಾಯಿತು. ಆ ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಹಾಸಿಗೆ ಲಭ್ಯವಿಲ್ಲ ಎಂಬ ಕಾರಣ ನೀಡಿ ಹಿಂದಕ್ಕೆ ಕಳಿಸಲಾಯಿತು. 

ರೋಗಿಯ ಸಂಬಂಧಿಕರು ಆ ನಂತರದಲ್ಲಿ ಅನೇಕ ಆಸ್ಪತ್ರೆಗಳಿಗೆ ಕರೆ ಮಾಡಿ ವಿಚಾರಿಸಿದಾಗ ಎಲ್ಲಿಯೂ ಸೂಕ್ತ ಸ್ಪಂದನೆ ದೊರೆಯಲಿಲ್ಲ. ಕೊನೆಗೆ ರಾತ್ರಿ 11.30ಕ್ಕೆ ಜಯನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ದೊರೆಯುವ ಮಾಹಿತಿ ಲಭ್ಯವಾಯಿತು. ಆದರೆ ಕರೆ ಮಾಡಿ ವಿಚಾರಿಸಿದಾಗ ಅವರೂ ಕೂಡಾ ಬೆಡ್ ಲಭ್ಯವಿಲ್ಲ ಎಂಬ ಉತ್ತರ ಬಂತು. ಆ ನಂತರದಲ್ಲಿ ಬನ್ನೇರುಘಟ್ಟ ರಸ್ತೆಯ ಆಸ್ಪತ್ರೆಯೊಂದಕ್ಕೆ ಕರೆ ಮಾಡಿದಾಗಲೂ ಅದೇ ಉತ್ತರ ಸಿಕ್ಕಿದೆ. ಆಮೇಲೆ ಕೆಂಗೇರಿಯ ಖಾಸಗಿ ಆಸ್ಪತ್ರೆಯೊಂದು ಐಸಿಯು ಬೆಡ್ ಗಳಿಲ್ಲ ಎಂದು ಚಿಕಿತ್ಸೆ ನಿರಾಕರಿಸಿತು. 

ಈ ನಡುವೆ ಹಲವು ಆಸ್ಪತ್ರೆಗಳಿಗೆ ಕರೆ ಮಾಡಿದಾಗಲೂ ಒಮ್ಮೇ ಪರೀಕ್ಷಿಸಿ ನೋಡುವಂತೆ ಅದೆಷ್ಟೇ ಕೋರಿಕೊಂಡಾಗಲೂ ಯಾವ ಆಸ್ಪತ್ರೆಯು ಸೂಕ್ತವಾಗಿ ಸ್ಪಂದಿಸಲೇ ಇಲ್ಲ. ಆಮೇಲೆ ಬನ್ನೇರುಘಟ್ಟ ರಸ್ತೆಯ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಎದೆಯ ಎಕ್ಸ್ ರೇ ತೆಗೆಯಲಾಯಿತು. ಅದನ್ನು  ಆಧರಿಸಿ ಅವರು ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿಲು ಸೂಚಿಸಿದರು. ರೋಗಿಯ ಕುಟುಂಬದವರು ಬಿಬಿಎಂಪಿ ಕಂಟ್ರೋಲ್ ರೂಮ್ ನ ನೆರವಿನ ಮೂಲಕ ರಾಜೀವ್ ಗಾಂಧಿ ಎದೆ ರೋಗ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿಯೂ ಕೂಡಾ ಬೆಡ್ ಇಲ್ಲವೆಂಬ ಕಾರಣ ನೀಡಿ ದಾಖಲಿಸಿಕೊಳ್ಳಲು ನಿರಾಕರಿಸಲಾಯಿತು.

ಕೊನೆಗೆ ಅನ್ಯ ದಾರಿಯಿಲ್ಲದೆ ಕುಟುಂಬದವರು ಬೆಳಗ್ಗೆ 3 ಗಂಟೆಯ ಹೊತ್ತಿಗೆ ಸೋಂಕಿತರನ್ನು ಮನೆಗೆ ಕರೆದುಕೊಂಡು ಹೋದರು. ಅದೃಷ್ಟಕ್ಕೆ ಶನಿವಾರ ಬೆಳಗ್ಗೆ ಕುಟುಂಬದವರಿಗೆ ಪ್ರಕ್ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ ಎಂಬ ಮಾಹಿತಿ ತಿಳಿದು ಬಂತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಲಾಯಿತು. ವೈದ್ಯರ ತಕ್ಷಣ ರೋಗಿಗೆ ಚಿಕಿತ್ಸೆ ಪ್ರಾರಂಭಿಸಿದರು. ಸಧ್ಯ 45 ವರ್ಷದ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಿಧಾನಕ್ಕೆ ಗುಣಮುಖರಾಗುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com