ಸ್ಪಾ ಮೇಲೆ ಸಿಸಿಬಿ ದಾಳಿ,ಇಬ್ಬರ ಬಂಧನ: ಆರು ಯುವತಿಯರ ರಕ್ಷಣೆ

ರಾಜಧಾನಿ ಬೆಂಗಳೂರಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಸ್ಪಾಗಳು, ವೇಶ್ಯಾವಾಟಿಕೆಯ ಅಡ್ಡಗಳಾಗಿ ರೂಪುಗೊಂಡಿವೆ. ಕೆಲಸದ ಆಮಿಷವೊಡ್ಡಿ ಹೊರರಾಜ್ಯಗಳಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ
ರಕ್ಷಿಸಲಾದ ಯುವತಿಯರು
ರಕ್ಷಿಸಲಾದ ಯುವತಿಯರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಸ್ಪಾಗಳು, ವೇಶ್ಯಾವಾಟಿಕೆಯ ಅಡ್ಡಗಳಾಗಿ ರೂಪುಗೊಂಡಿವೆ. ಕೆಲಸದ ಆಮಿಷವೊಡ್ಡಿ ಹೊರರಾಜ್ಯಗಳಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ.

ಇದೇ ರೀತಿಯಲ್ಲಿ ನಗರದ ಹೆಚ್ ಎಸ್ ಆರ್ ಲೇಔಟ್ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಸ್ಪಾ ಮೇಲೆ ಕಳೆದ ರಾತ್ರಿ   ದಾಳಿ ನಡೆಸಲಾಗಿದ್ದು,ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು,  ಆರು ಯುವತಿಯರನ್ನು ರಕ್ಷಿಸಿದ್ದಾರೆ.

ಥೈಲ್ಯಾಂಡ್ ದೇಶದಿಂದ ಮೂವರು ಹಾಗೂ ಈಶಾನ್ಯ ರಾಜ್ಯಗಳಿಂದ ಮೂವರು ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸಲಾಗುತಿತ್ತು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
 
ಪೀಟರ್ ಸುನಾವರ್ (34),ರಾಜಕುಮಾರ್ ಪಂಡಿತ್ (48) ಬಂಧಿತ ಆರೋಪಿಗಳು. ಬಂಧಿತರಿಂದ 2,910 ನಗದು, ಎಂಐ ಕಂಪೆನಿಯ ಒಂದು ಮೊಬೈಲ್ ಫೋನ್, ಒಂದು ರೆಡ್ ಮಿ ಕಂಪೆನಿಯ ಮೊಬೈಲ್, ಇಜೆನಿಕೋ ಎಂಬ ಹೆಸರಿನ ಕಾರ್ಡ್ ಸ್ವೀಪಿಂಗ್, ವೆರಿಪೋನ್ ಎಂಬ ಹೆಸರಿನ ಹೆಚ್​​​ಡಿಎಫ್​​​ಸಿ ಬ್ಯಾಂಕ್‌ನ ಸ್ಪೀಕರ್ ಇರುವ ಕಾರ್ಡ್ ಸ್ವೀಪಿಂಗ್ ಮಿಷನ್, ಒಂದು ಹೆಚ್.ಪಿ.ಕಂಪನಿಯ ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com