ರೌಡಿ ಕುಣಿಗಲ್ ಗಿರಿ ಬಂಧನ

ನಗರ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್​ ವಾಂಟೆಡ್​​ ರೌಡಿ ಕುಣಿಗಲ್ ಗಿರಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರೌಡಿ ಕುಣಿಗಲ್ ಗಿರಿ ಬಂಧನ
ರೌಡಿ ಕುಣಿಗಲ್ ಗಿರಿ ಬಂಧನ

ಬೆಂಗಳೂರು: ನಗರ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್​ ವಾಂಟೆಡ್​​ ರೌಡಿ ಕುಣಿಗಲ್ ಗಿರಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜೂಜಾಟದಲ್ಲಿ ತೊಡಗಿದ್ದಾಗ ಸಿಸಿಬಿ ಅಧಿಕಾರಿಗಳು ಗಿರಿಯನ್ನು ಬಂಧಿಸಿರುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ಸ್​ಪೆಕ್ಟರ್ ಶ್ರೀಧರ್ ಪೂಜಾರ್ ನೇತೃತ್ವದ ಸಿಸಿಬಿ ತಂಡ ಮಂಗಳವಾರ ಗ್ಯಾಂಬ್ಲಿಂಗ್ ಕ್ಲಬ್ ಮೇಲೆ ದಾಳಿ ನಡೆಸಿ 16 ಜನರನ್ನು ವಶಕ್ಕೆ ಪಡೆದು, 5 ಲಕ್ಷ ರೂ ಹಣ ವಶಪಡಿಸಿಕೊಳ್ಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜೂಜಾಡುತ್ತಿದ್ದ ಕುಣಿಗಲ್ ಗಿರಿಯನ್ನು ಬಂಧಿಸಲಾಗಿದೆ. ಈತ 120ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದರು‌. ಒಂದು ವರ್ಷದ ಹಿಂದೆ ಗಿರಿ, ಪೊಲೀಸರಿಂದ ಪರಾರಿಯಾಗಿದ್ದನು. ಈತನ ವಿರುದ್ಧ ರಾಬರಿ, ಡಕಾಯಿತಿ ದೂರುಗಳೇ ಹೆಚ್ಚಾಗಿ ದಾಖಲಾಗಿವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com