ಮಹಿಳೆಗೆ ಬ್ಲ್ಯಾಕ್ ಮೇಲ್: ಸಿನಿಮಾ ವಿತರಕನ ಬಂಧನ

ವಿದೇಶಿ ಮಹಿಳೆಯ ಅಶ್ಲೀಲ್ ಫೋಟೋ ಕ್ಲಿಕ್ಕಿಸಿಕೊಂಡು ಬ್ಲ್ಯಾಕ್ ಮೇಲ್  ಮಾಡುತ್ತಿದ್ದ  ಅಂತಾರಾಷ್ಟ್ರೀಯ ಸಿನಿಮಾ ವಿತರಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿದೇಶಿ ಮಹಿಳೆಯ ಅಶ್ಲೀಲ್ ಫೋಟೋ ಕ್ಲಿಕ್ಕಿಸಿಕೊಂಡು ಬ್ಲ್ಯಾಕ್ ಮೇಲ್  ಮಾಡುತ್ತಿದ್ದ  ಅಂತಾರಾಷ್ಟ್ರೀಯ ಸಿನಿಮಾ ವಿತರಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

33 ವರ್ಷದ ರೂಪೇಶ್ ಅನ್ನು ನಂದಿನಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತ‌ ರೂಪೇಶ್, ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಸಿನಿಮಾ ವಿತರಣೆ ಮಾಡುತ್ತಾನೆ ಎಂದು ತಿಳಿದು ಬಂದಿದೆ.

ಆಸ್ಟ್ರೇಲಿಯಾದಲ್ಲಿ  ಮಹಿಳೆ ಜೊತೆ ರೂಪೇಶ್ ಸ್ನೇಹ ಬೆಳೆಸಿದ್ದ. ಮಹಿಳೆ ಸುತ್ತಾಟ ನಡೆಸಿದ್ದ ಆತ ಆಕೆಗೆ  ಜ್ಯೂಸ್​ನಲ್ಲಿ ಮತ್ತು ಬರುವ ಔಷಧಿ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಫೋಟೋ  ಕ್ಲಿಕ್ಕಿಸಿಕೊಂಡು ಆಕೆಯ ಗಂಡನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ  ಇಟ್ಟಿದ್ದನು ಎನ್ನಲಾಗಿದೆ.

ಹೀಗಾಗಿ ನೊಂದ ಮಹಿಳೆ ಭಾರತಕ್ಕೆ ವಾಪಸ್ಸಾಗಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com